ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾರ್ಲೋಸ್ ಬ್ರಾಥ್‌ವೇಟ್ ಜಗತ್ತಿಗೆ ಪರಿಚಯವಾದ ದಿನವಿದು!

On this day: Carlos Brathwaite made everyone remember his name

ನವದೆಹಲಿ: ಕ್ರೀಡೆ ಅಂದರೆ ಹಾಗೇನೆ. ಇಲ್ಲಿ ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಹೀರೋ ಆಗಿ ಮಿನುಗಿದವರಿದ್ದಾರೆ. ಹೋರೋ ಅನ್ನಿಸಿಕೊಂಡವರು ಝೀರೋ ಅನ್ನಿಸಿದ ಅನೇಕ ಕತೆಗಳೂ ಇಲ್ಲಿವೆ. ಇದರಲ್ಲಿ ವೆಸ್ಟ್‌ ಇಂಡೀಸ್‌ನ ಪ್ರತಿಭಾನ್ವಿತ ಬೌಲಿಂಗ್ ಆಲ್ ರೌಂಡರ್ ಕಾರ್ಲೋಸ್ ಭ್ರಾತ್ ವೇಟ್ ಅವರು ಮಿನುಗುತಾರೆಯಾಗಿ ಮಿಂಚಿದ ಕತೆಯಿದು. ಬ್ರಾಥ್‌ವೇಟ್ ಹೆಸರು ಜಗತ್ತಿಗೆ ಪರಿಚಯವಾಗಿದ್ದೇ ಅಂದು!

ಈ ಬಾರಿಯ ಎಲ್ಲಾ 8 ಫ್ರಾಂಚೈಸಿಗಳ ವಿನಾಶಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿವರು!ಈ ಬಾರಿಯ ಎಲ್ಲಾ 8 ಫ್ರಾಂಚೈಸಿಗಳ ವಿನಾಶಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿವರು!

ಆವತ್ತು 2016ರಲ್ಲಿ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಕ್ಕಾಗಿ ವೆಸ್ಟ್‌ ಇಂಡೀಸ್ ಮತ್ತು ಇಂಗ್ಲೆಂಡ್ ಮೈದಾನಕ್ಕಿಳಿದಿದ್ದವು. ಭಾರತದ ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ಏಪ್ರಿಲ್ 3ರ ಇದೇ ದಿನ ನಡೆದಿದ್ದ ಪಂದ್ಯವಿದು. ಕೊನೇ ಓವರ್‌ನಲ್ಲಿ ವೆಸ್ಟ್‌ ಇಂಡೀಸ್ ಗೆಲ್ಲಲು 19 ರನ್‌ಗಳ ಅಗತ್ಯವಿತ್ತು.

ಕೊನೇ ಓವರ್‌ ರೋಚಕವೆನಿಸಿದ್ದ ಪಂದ್ಯ

ಕೊನೇ ಓವರ್‌ ರೋಚಕವೆನಿಸಿದ್ದ ಪಂದ್ಯ

ಕೊನೇ ಓವರ್‌ಗೆ ತಂಡ ಗೆಲ್ಲಲು 19 ರನ್ ಬೇಕಿದ್ದಾಗ ಸ್ಟ್ರೈಕ್‌ನಲ್ಲಿದ್ದ ಕಾರ್ಲೋಸ್ ಬ್ರಾತ್‌ವೇಟ್ ಬೆನ್ ಸ್ಟೋಕ್ಸ್ ಅವರ ಸತತ ನಾಲ್ಕು ಎಸೆತಗಳನ್ನು ಸಿಕ್ಸ್‌ ಲೈನ್‌ನತ್ತ ಅಟ್ಟಿದ್ದರು. ಅಂದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ತಂಡ 4 ವಿಕೆಟ್‌ಗಳ ಜಯ ದಾಖಲಿಸಿತ್ತು. ಅದೂ ಕೂಡ ರೋಚಕ ಪಂದ್ಯದಲ್ಲಿ ಇನ್ನೂ 2 ಎಸೆತಗಳು ಬಾಕಿಯುಳಿಸಿ ವಿಂಡೀಸ್ ಎರಡನೇ ಟಿ20 ವಿಶ್ವಕಪ್‌ ಟ್ರೋಫಿ ಗೆದ್ದಿತ್ತು. (ಸ್ಕೋರ್‌ಕಾರ್ಡ್: ಇಂಗ್ಲೆಂಡ್ 155/9 wkts, 20 Ov, ವೆಸ್ಟ್‌ ಇಂಡೀಸ್ 161/6, 19.4 Ov)

ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್

ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್

ಆ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ 8ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಬ್ರಾತ್‌ವೇಟ್ 10 ಎಸೆತಗಳಿಗೆ ಅಜೇಯ 34 ರನ್ ಬಾರಿಸಿದ್ದರು. ಇದರಲ್ಲಿ 1 ಫೋರ್‌, 4 ಸಿಕ್ಸರ್ ಸೇರಿತ್ತು. ವಿಂಡೀಸ್ ಮತ್ತೊಬ್ಬ ದಾಂಡಿಗ ಮಾರ್ಲಸ್ ಸ್ಯಾಮುವೆಲ್ಸ್ ಕೂಡ ಅಂದು 66 ಎಸೆತಗಳಲ್ಲಿ ಅಜೇಯ 85 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ವಿಂಡೀಸ್‌ ಮೊದಲ ಟಿ20 ವಿಶ್ವಕಪ್‌ ಗೆದ್ದಿದ್ದು

ವಿಂಡೀಸ್‌ ಮೊದಲ ಟಿ20 ವಿಶ್ವಕಪ್‌ ಗೆದ್ದಿದ್ದು

2016ರ ಟಿ20 ವಿಶ್ವಕಪ್‌ ಟ್ರೋಫಿಗೂ ಮುನ್ನ ವಿಂಡೀಸ್ 2012ರಲ್ಲಿ ಮೊದಲ ಟಿ20 ವಿಶ್ವಕಪ್‌ ಜಯಿಸಿತ್ತು. ಅಂದ್ಹಾಗೆ ಆವತ್ತು ಹೀರೋ ಆಗಿ ಮಿನುಗಿದ್ದ ಬ್ರಾತ್‌ ವೇಟ್ ಈ ಹಿಂದೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಸರ್ಡ್ ಪರ ಆಡಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಬ್ರಾತ್‌ವೇಟ್ ಆಡುತ್ತಿಲ್ಲ.

Story first published: Saturday, April 3, 2021, 12:55 [IST]
Other articles published on Apr 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X