ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಪರ ಕ್ರಿಸ್‌ ಗೇಲ್ ಸಿಡಿದಿದ್ದು, ದಾಖಲೆ ರನ್ ಗಳಿಸಿದ್ದು ಇದೇ ದಿನ!

On this day: Chris Gayle scripted history in IPL

ಬೆಂಗಳೂರು, ಏಪ್ರಿಲ್ 23: ಕೊರೊನಾವೈರಸ್ ಕಾಟ ವಕ್ಕರಿಸಿಕೊಳ್ಳದಿದ್ದರೆ ಇಷ್ಟೊತ್ತಿಗೆ ನಾವೆಲ್ಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ರಸದೌರಣ ಸವೆಯಬಹುದಿತ್ತು. ಐಪಿಎಲ್ ಸಾಮಾನ್ಯವಾಗಿ ಆರಂಭಗೊಳ್ಳುವ ತಿಂಗಳಿನಲ್ಲೇ ಕೋವಿಡ್-19 ಕಾಟ ಶುರುವಾಗಿ ಕ್ರಿಕೆಟ್‌, ಕ್ರೀಡಾಪ್ರಿಯರು ಬೇಜಾರಿನಲ್ಲಿ ಕಳೆಯುವಂತೆ ಮಾಡಿದೆ. ಈಗ ಕ್ರಿಕೆಟ್ ಟೂರ್ನಿಗಳು ನಡೆಯದಿದ್ದರೇನಂತೆ, ಹಿಂದಿನ ರೋಚಕ ಪಂದ್ಯಗಳನ್ನು ನೆನಪಿಸಿಕೊಳ್ಳೋಕೆ ಏನಡ್ಡಿಯಿದೆ ಅಲ್ಲವೆ?

ಕ್ರಿಕೆಟಿಗರು ಕ್ರೀಡಾಸ್ಫೂರ್ತಿ ಮೆರೆದು ಮನಗೆದ್ದಿದ್ದ ಟಾಪ್ 5 ಸಂದರ್ಭಗಳುಕ್ರಿಕೆಟಿಗರು ಕ್ರೀಡಾಸ್ಫೂರ್ತಿ ಮೆರೆದು ಮನಗೆದ್ದಿದ್ದ ಟಾಪ್ 5 ಸಂದರ್ಭಗಳು

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಒಮ್ಮೆ ಬಿರುಸಿನ ಬ್ಯಾಟಿಂಗ್ ನಡೆಸಿ, ದಾಖಲೆಯ ವೈಯಕ್ತಿಕ ರನ್ ಗಳಿಸಿದ್ದರು.

ಕನ್ನಡಿಗನನ್ನು ಟೀಮ್ ಇಂಡಿಯಾದ 'ಬೆಸ್ಟ್ ಕ್ಯಾಪ್ಟನ್' ಎಂದ ಗೌತಮ್ ಗಂಭೀರ್ಕನ್ನಡಿಗನನ್ನು ಟೀಮ್ ಇಂಡಿಯಾದ 'ಬೆಸ್ಟ್ ಕ್ಯಾಪ್ಟನ್' ಎಂದ ಗೌತಮ್ ಗಂಭೀರ್

ಸುಮಾರು 7 ವರ್ಷಗಳ ಹಿಂದೆ ಅಂದರೆ ಏಪ್ರಿಲ್ 23ರ ಇದೇ ದಿನ ಗೇಲ್ ಬ್ಯಾಟಿಂಗ್ ಅಬ್ಬರ ನಡೆಸಿದ್ದು. ಅಂದಿನ ಪಂದ್ಯದ ಕ್ಷಣವನ್ನು ಕಣ್ಣಮುಂದೆ ತಂದುಕೊಳ್ಳೋಣ ಬನ್ನಿ..

ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯ

ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯ

2013ರ ಏಪ್ರಿಲ್ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 31ನೇ ಪಂದ್ಯವಿದು. ಆವತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪುಣೆ ವಾರ್ಯರ್ಸ್ ಇಂಡಿಯಾ ತಂಡಗಳು ಮುಖಾಮುಖಿಯಾಗಿದ್ದವು.

ಗೇಲ್ ಬ್ಯಾಟಿಂಗ್ ಅಬ್ಬರ

ಗೇಲ್ ಬ್ಯಾಟಿಂಗ್ ಅಬ್ಬರ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ಪರ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ 66 ಎಸೆತಗಳಿಗೆ ಭರ್ಜರಿ 175 ರನ್ ಸಿಡಿಸಿದ್ದರು. ಇನ್ನು ತಿಲಕರತ್ನೆ ದಿಲ್ಶನ್ 33, ವಿರಾಟ್ ಕೊಹ್ಲಿ 11, ಎಬಿ ಡಿ ವಿಲಿಯರ್ಸ್ 31 ರನ್‌ನೊಂದಿಗೆ ಆರ್‌ಸಿಬಿ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 263 ರನ್ ಕಲೆ ಹಾಕಿತ್ತು.

ಸಿಕ್ಸರ್ ಮೇಲೆ ಸಿಕ್ಸರ್

ಸಿಕ್ಸರ್ ಮೇಲೆ ಸಿಕ್ಸರ್

ಆವತ್ತು ಗೇಲ್ ಬ್ಯಾಟಿಂದ ಸಿಕ್ಸರ್‌ ಮತ್ತು ಫೋರ್‌ಗಳ ಸುರಿಮಳೆ ಬಿದ್ದಿತ್ತು. 13 ಬೌಂಡರಿ, 17 ಸಿಕ್ಸರ್‌ಗಳನ್ನು ಆ ದಿನ ಗೇಲ್ ಸಿಡಿಸಿದ್ದರು. ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳನ್ನಾಡಿದ್ದ ಗೇಲ್ 708 ರನ್‌ನೊಂದಿಗೆ ಅತ್ಯಧಿಕ ರನ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಮೊದಲ ಸ್ಥಾನ ಮೈಕಲ್ ಹಸ್ಸಿ (733 ರನ್) ಪಡೆದಿದ್ದರು.

ಆರ್‌ಸಿಬಿ ಭರ್ಜರಿ ಗೆಲುವು

ಆರ್‌ಸಿಬಿ ಭರ್ಜರಿ ಗೆಲುವು

ಗೇಲ್ ಅಬ್ಬರ ಬ್ಯಾಟಿಂಗ್‌ನಿಂದ ಆವತ್ತು ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿತ್ತು. ಗುರಿ ಬೆನ್ನಟ್ಟಿದ್ದ ಪುಣೆ, ಸ್ಟೀವ್ ಸ್ಮಿತ್ 41, ಆ್ಯರನ್ ಫಿಂಚ್ 18, ಯುವರಾಜ್ ಸಿಂಗ್ 16, ಮಿಚೆಲ್ ಮಾರ್ಚ್ 24 ರನ್‌ ಸೇರ್ಪಡೆಯೊಂದಿಗೆ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು 133 ರನ್ ಬಾರಿಸಿ 130 ರನ್ ನಿಂದ ಸೋತಿತ್ತು. ಗೇಲ್ ಪಂದ್ಯಶ್ರೇಷ್ಠರೆನಿಸಿದ್ದರು.

Story first published: Thursday, April 23, 2020, 12:57 [IST]
Other articles published on Apr 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X