ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಪಾದಾರ್ಪಣೆಯ ದಿನವಿದು: MSD ವಿಶೇಷ ದಾಖಲೆಗಳ ಪಟ್ಟಿ

On this day in 2004 MS Dhoni made International debut

ನವದೆಹಲಿ: ಭಾರತೀಯ ಕ್ರಿಕೆಟ್ ರಂಗ ಯಾವತ್ತಿಗೂ ನೆನಪಿಟ್ಟುಕೊಳ್ಳುವ ಶ್ರೇಷ್ಠ ಕ್ರಿಕೆಟಿಗರಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಒಬ್ಬರು. ಧೋನಿ ನಾಯಕತ್ವದಲ್ಲಿ ಭಾರತ ತಂಡ ಎರಡು ವಿಶ್ವಕಪ್‌ ಸೇರಿ ಪ್ರಮುಖ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದೆ. ಭಾರತಕ್ಕೆ ಐಸಿಸಿ ಪ್ರತಿಷ್ಠಿತ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಹಿರಿಮೆ ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿಯದ್ದು. ವಿಕೆಟ್‌ ಕೀಪಿಂಗ್‌ ವಿಚಾರದಲ್ಲಂತೂ ಧೋನಿಯನ್ನು ಮೀರಿಸುವವರೇ ಇಲ್ಲ.

ದ್ವಿತೀಯ ಟೆಸ್ಟ್‌ಗಾಗಿ ಭಾರತ ತಂಡಕ್ಕೆ ಪ್ರಮುಖ 4 ಆಟಗಾರರು ಸೇರ್ಪಡೆ!ದ್ವಿತೀಯ ಟೆಸ್ಟ್‌ಗಾಗಿ ಭಾರತ ತಂಡಕ್ಕೆ ಪ್ರಮುಖ 4 ಆಟಗಾರರು ಸೇರ್ಪಡೆ!

ಅಂದ್ಹಾಗೆ, ಡಿಸೆಂಬರ್ 23ರ ಇದೇ ದಿನ 2004ರಲ್ಲಿ ಎಂಎಸ್ ಧೋನಿ ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಆ ಪಂದ್ಯ ಎಂಎ ಚಿತ್ತಗ್ರಾಮ್‌ ಸ್ಟೇಡಿಯಂನಲ್ಲಿ ನಡೆದಿತ್ತು. ಆವತ್ತಿನ ಪಂದ್ಯದಲ್ಲಿ ಧೋನಿ 0 ರನ್‌ಗೆ ರನ್‌ಔಟ್ ಆಗಿದ್ದರು. ಅಂದು ಭಾರತ 11ರನ್‌ನಿಂದ ಪಂದ್ಯ ಗೆದ್ದಿತ್ತು.

ಭಾರತ ವಿರುದ್ಧದ 2ನೇ ಟೆಸ್ಟ್‌ನಿಂದ ಆಸೀಸ್‌ ಪ್ರಮುಖ ಪ್ಲೇಯರ್ಸ್ ಔಟ್ಭಾರತ ವಿರುದ್ಧದ 2ನೇ ಟೆಸ್ಟ್‌ನಿಂದ ಆಸೀಸ್‌ ಪ್ರಮುಖ ಪ್ಲೇಯರ್ಸ್ ಔಟ್

ಭಾರತ ತಂಡದಲ್ಲಿ ಜೆರ್ಸಿ ನಂಬರ್ 7 ಧರಿಸುತ್ತಿದ್ದ ಧೋನಿ, ಸಾರ್ವಕಾಲಿಕ ಶ್ರೇಷ್ಠ ನಾಯಕ, ವಿಕೆಟ್‌ ಕೀಪರ್‌ಗಳಲ್ಲೊಬ್ಬರು. ಧೋನಿ ಕುರಿತು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

ಪ್ರಮುಖ ಟ್ರೋಫಿಗಳನ್ನು ಗೆದ್ದ ನಾಯಕ

ಪ್ರಮುಖ ಟ್ರೋಫಿಗಳನ್ನು ಗೆದ್ದ ನಾಯಕ

ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡ 2007ರಲ್ಲಿ ಐಸಿಸಿ ಟಿ20ಐ ವಿಶ್ವಕಪ್‌ ಟ್ರೋಫಿ ಗೆದ್ದಿತ್ತು. 2011ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್‌ ಗೆದ್ದಿತ್ತು. ಅಲ್ಲದೆ ಧೋನಿ ನಾಯಕತ್ವದ ಭಾರತ ತಂಡ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿ ವಿಶ್ವದ ಗಮನ ಸೆಳೆದಿತ್ತು.

ಬ್ಯಾಟಿಂಗ್‌ ದಾಖಲೆಗಳು

ಬ್ಯಾಟಿಂಗ್‌ ದಾಖಲೆಗಳು

ಆಗಸ್ಟ್ 15, 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಎಂಎಸ್ ಧೋನಿ ಅವರು 90 ಟೆಸ್ಟ್ ಪಂದ್ಯಗಳಲ್ಲಿ 4876 ರನ್, 350 ಏಕದಿನ ಪಂದ್ಯಗಳಲ್ಲಿ 10773 ರನ್, 98 ಟಿ20ಐ ಪಂದ್ಯಗಳಲ್ಲಿ 1617 ರನ್ ಗಳಿಸಿದ್ದಾರೆ. ಅಲ್ಲದೆ ಎಂಎಸ್ ಧೋನಿ ಹೆಸರಿನಲ್ಲಿ ಇನ್ನೂ ಹಲವಾರು ದಾಖಲೆಗಳಿವೆ.

ಧೋನಿ ಹೆಸರಿನಲ್ಲಿರುವ ದಾಖಲೆಗಳು

ಧೋನಿ ಹೆಸರಿನಲ್ಲಿರುವ ದಾಖಲೆಗಳು

* ಒಂದು ವಿಶ್ವಕಪ್‌
* ಒಂದು ಚಾಂಪಿಯನ್ಸ್ ಟ್ರೋಫಿ
* ಒಂದು ಟಿ20 ವಿಶ್ವಕಪ್‌
* ಭಾರತೀಯ ವಿಕೆಟ್‌ ಕೀಪರ್‌ ಆಗಿದ್ದುಕೊಂಡು ಹೆಚ್ಚು ಔಟ್ ಮಾಡಿದ್ದು
* ನಂ.7 ಬ್ಯಾಟಿಂಗ್‌ ಕ್ರಮಾಂಕದಲ್ಲಿ ಅತೀ ಹೆಚ್ಚು ಶತಕ ದಾಖಲೆ
* ಏಕದಿನದಲ್ಲಿ ಅತೀ ಹೆಚ್ಚು ನಾಟೌಟ್ ದಾಖಲೆ
* ವಿಕೆಟ್‌ ಕೀಪರ್‌ ಆಗಿದ್ದು ಏಕದಿನದಲ್ಲಿ ಬೆಸ್ಟ್ ಸ್ಕೋರ್‌
* ನಾಯಕನಾಗಿ ಹೆಚ್ಚು ಪಂದ್ಯಗಳಲ್ಲಿ ಆಡಿದ್ದು
* ಏಕದಿನದಲ್ಲಿ ಅತೀ ಹೆಚ್ಚು ಸ್ಟಂಪಿಂಗ್‌ ದಾಖಲೆ

Story first published: Wednesday, December 23, 2020, 15:16 [IST]
Other articles published on Dec 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X