ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವರಾಜ್‌ 6 ಸಿಕ್ಸರ್‌ಗೆ ಇಂದಿಗೆ 15 ವರ್ಷ: ಸಿಕ್ಸರ್‌ ಕಿಂಗ್‌ನ ಆರ್ಭಟಕ್ಕೆ ಪತರುಗುಟ್ಟಿದ್ದ ಆಂಗ್ಲರು!

Yuvraj singh

ಯುವರಾಜ್​ ಸಿಂಗ್‌​ ಅಂದ ತಕ್ಷಣ ನಮಗೆ ಪಟ್ ಅಂತಾ ನೆನಪಾಗೋದು ಸಿಕ್ಸರ್​​. ಹೌದು​​, ಮೈದಾನದ ಮೂಲೆ ಮೂಲೆಗೆ ಸಿಕ್ಸರ್​ಗಳನ್ನ ಅಟ್ಟುತ್ತಿದ್ದ ಯುವಿ 2007 ಟಿ20 ವಿಶ್ವಕಪ್​ನಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸಿದ್ರು. ಈ ಪಂದ್ಯ ಮುಗಿಯೋ ಹೊತ್ತಿಗೆ ಯುವರಾಜ್​ ಸಿಂಗ್​​ ಹೆಸರು, ಸಿಕ್ಸರ್​ ಕಿಂಗ್​ ಎಂದೇ ಮರು ನಾಮಕರಣ ವಾಯ್ತು.

ಹೌದು, ಚುಟುಕು ಕ್ರಿಕೆಟ್‌ನ ಚೊಚ್ಚಲ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್‌ನ ಆರ್ಭಟಕ್ಕೆ ವಿಶ್ವ ಕ್ರಿಕೆಟ್ ದಂಗಾಗಿತ್ತು. ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿದ್ದ ಯುವರಾಜ್‌ರ ಆ ಸ್ಮರಣೀಯ ಇನ್ನಿಂಗ್ಸ್‌ಗೆ ಇಂದಿಗೆ(ಸೆ.20) ಸರಿಯಾಗಿ 15 ವರ್ಷ ತುಂಬಿದೆ. ಹಾಗಿದ್ರೆ ಯುವಿಯ ಆ ವಿರಾಟ ರೂಪ ಹೇಗಿತ್ತು.. ಆಂಗ್ಲರ ಗರ್ವಭಂಗ ಹೇಗಾಯ್ತು ಎಂಬುದನ್ನ ಈ ಕೆಳಗೆ ತಿಳಿಸಲಾಗಿದೆ.

ಯುವರಾಜ್ ಸಿಂಗ್‌ರನ್ನ ಕೆಣಕಿದ ಫ್ಲಿಂಟಾಫ್‌

ಯುವರಾಜ್ ಸಿಂಗ್‌ರನ್ನ ಕೆಣಕಿದ ಫ್ಲಿಂಟಾಫ್‌

ಆಂಡ್ರ್ಯೋ ಫ್ಲಿಂಟಾಫ್.. ಇಂಗ್ಲೆಂಡ್ ನ ಮೋಸ್ಟ್ ಅಗ್ರೆಸ್ಸೀವ್ ಹಾಗೂ ಬುದ್ದಿವಂತ ಆಲ್ ರೌಂಡರ್. ತನ್ನ ತಂಡಕ್ಕೆ ಸ್ಮರಣೀಯ ಗೆಲುವುಗಳನ್ನ ತಂದುಕೊಟ್ಟ ಆಟಗಾರ. ಆದ್ರೆ ಆಟದಲ್ಲಿ ಎಷ್ಟು ಆಸಕ್ತಿನೋ, ಸ್ಲೆಂಡ್ಜಿಂಗ್ ನಲ್ಲೂ ಫ್ರೆಡ್ಡಿ ಸದಾ ಮುಂದು. ಎದುರಾಳಿ ಏನಾದ್ರೂ ಉತ್ತಮ ಲಯದಲ್ಲಿದ್ರೆ ಅದನ್ನ ಹೇಗಾದ್ರೂ ಮಾಡಿ ತಪ್ಪಿಸೋದಕ್ಕೆ ಸದಾ ಯತ್ನಿಸುತ್ತಿರುತ್ತಾರೆ. ಅದೆಷ್ಟೋ ಬಾರಿ ಆನ್ ಫೀಲ್ಡ್ ನಲ್ಲೇ ಕಿತ್ತಾಟಕ್ಕಿಳಿದಿದ್ದೂ ಇದೆ. ವೃತ್ತಿ ಬದುಕಿನುದ್ದಕ್ಕೂ ಇದನ್ನೇ ಮುಂದುವರಿಸಿದ್ದ ಫ್ರೆಡ್ಡಿ ಅವತ್ತು ಡರ್ಬನ್ ನಲ್ಲೂ ಅದೇ ಚಾಳಿಯನ್ನ ಮುಂದುವರಿಸಿದ್ರು. ಆದ್ರೆ ಟೀಂ ಇಂಡಿಯಾದ ಲೆಫ್ಟ್ ಹ್ಯಾಂಡರನ್ನ ಅಂದು ಕೆಣಕಿದ್ದ ಫ್ಲಿಂಟಾಫ್ ಗೆ, ಬಹುಶಃ ಆ ರೀತಿಯ ಪ್ರತ್ಯುತ್ತರ ಸಿಗುತ್ತೆ ಅನ್ನೋ ಕಲ್ಪನೆಯೂ ಇರ್ಲಿಲ್ಲ.

ತನ್ನ ಬೌಲಿಂಗ್ ನಲ್ಲಿ ಯುವರಾಜ್ ಸತತ ಎರಡು ಬೌಂಡರಿ ಬಾರಿಸಿದ್ದನ್ನ ಸಹಿಸದ ಫ್ಲಿಂಟಾಫ್ ಅವರನ್ನ ಮಾತಿನಲ್ಲಿ ಕೆಣಕಿದ್ರು.. ಇನ್ನೇನಾದ್ರೂ ಶಾಟ್ಸ್ ಹೊಡೆದ್ರೆ ನಿನ್ನ ಮುಖಕ್ಕೆ ಪಂಚ್ ಮಾಡ್ತೀನಿ ಅಂತ ಫ್ಲಿಂಟಾಫ್ ಹೆದರಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ್ದ ಯುವಿ ನನ್ನ ಕೈಯ್ಯಲಿರೋ ಬ್ಯಾಟ್ ನೋಡಿದ್ಯಾ ಅಂತ ಕೇಳುತ್ತಾ ಅವರತ್ತ ಮುನ್ನುಗ್ಗಿಯೂ ಬಿಟ್ಟಿದ್ರು. ಧೋನಿ ಹಾಗೂ ಅಂಪೈರ್ ಮಧ್ಯಪ್ರವೇಶದಿಂದ ಯುವಿ ಕ್ರೀಸ್ ಗೆ ವಾಪಸ್ಸಾದ್ರೂ ಫ್ಲಿಂಟಾಫ್ ಸ್ಲೆಡ್ಜಿಂಗ್ ಗೆ ತಕ್ಕ ಉತ್ತರ ಕೊಡ್ಬೇಕು ಅಂತ ಕಾದಿದ್ರು.

19ನೇ ಓವರ್‌ನಲ್ಲಿ ಸ್ಟುವರ್ಟ್‌ ಬ್ರಾಡ್ ಬೌಲಿಂಗ್‌, ಮೊದಲ ಎಸೆತದಿಂದಲೇ ಸಿಕ್ಸರ್!

19ನೇ ಓವರ್‌ನಲ್ಲಿ ಸ್ಟುವರ್ಟ್‌ ಬ್ರಾಡ್ ಬೌಲಿಂಗ್‌, ಮೊದಲ ಎಸೆತದಿಂದಲೇ ಸಿಕ್ಸರ್!

ಅದು ಇನ್ನಿಂಗ್ಸ್ ನ 19ನೇ ಓವರ್.. ಬೌಲರ್ ಸ್ಟುವರ್ಟ್ ಬ್ರಾಡ್.. ಆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಿದ್ದ ಬ್ರಾಡ್ ತಮ್ಮ ವೆರೈಟಿ ಬೌಲಿಂಗ್ ನಿಂದ ಗುರುತಿಸಿಕೊಂಡಿದ್ರು. ಆದ್ರೆ ಅವತ್ತಿನ ಪರಿಸ್ಥಿತಿಯನ್ನು ಬ್ರಾಡ್ ಊಹಿಸಿಕೊಳ್ಳಲು ಸಾಧ್ಯವಾಗ್ಲಿಲ್ಲ. 19ನೇ ಓವರ್ ನ ಮೊದಲ ಎಸೆತದಲ್ಲಿ ಯುವಿ ಸಿಕ್ಸರ್ ಬಾರಿಸಿದ್ರು.
ಎರಡನೇ ಎಸೆತವನ್ನ ಬ್ರಾಡ್ ಯುವರಾಜ್ ಕಾಲನ್ನ ಟಾರ್ಗೆಟ್ ಮಾಡಿ ಹಾಕಿದ್ರು. ಆದ್ರೆ ಅದ್ಭುತ ಫ್ಲಿಕ್ ಮೂಲಕ ಯುವಿ ಆ ಎಸೆತವನ್ನ ಸಿಕ್ಸರ್ ಗೆ ಕಳುಹಿಸಿದ್ರು.

ಶಮಿ ಸ್ಥಾನದಲ್ಲಿ ಉಮೇಶ್ ಯಾದವ್ ಆಯ್ಕೆ: ಟೀಂ ಮ್ಯಾನೇಜ್‌ಮೆಂಟ್ ನಿರ್ಧಾರದ ಕುರಿತು ಆಕಾಶ್ ಚೋಪ್ರಾ ಪ್ರಶ್ನೆ

ಯುವರಾಜ್‌ ಸಿಂಗ್‌ ಕೆಣಕಿ ತಪ್ಪು ಮಾಡಿದ ಫ್ಲಿಂಟಾಫ್‌

ಯುವರಾಜ್‌ ಸಿಂಗ್‌ ಕೆಣಕಿ ತಪ್ಪು ಮಾಡಿದ ಫ್ಲಿಂಟಾಫ್‌

ಹೌದು ಯುವರಾಜ್ ಸಿಂಗ್ ಸ್ಟುವರ್ಟ್‌ ಬ್ರಾಡ್‌ ಮೊದಲೆರಡು ಎಸೆತಕ್ಕೆ ಸಿಕ್ಸರ್ ಸಿಡಿಸಿದ್ದೇ ತಡ ಫ್ರೆಡ್ಡಿಗೆ ಪರಿಸ್ಥಿತಿ ಅರಿವಿಗೆ ಬಂದಿತ್ತು. ಯುವಿಯನ್ನ ಕೆಣಕಿ ತಂಡವನ್ನ ಸಂಕಷ್ಟಕ್ಕೆ ಸಿಲುಕಿಸಿದ್ದೇನೆ ಅನ್ನೋದು ಫ್ಲಿಂಟಾಫ್ ಮುಖಭಾವದಲ್ಲೇ ವ್ಯಕ್ತವಾಗಿತ್ತು. ಆದ್ರೆ ಸತತ ಎರಡು ಸಿಕ್ಸರ್ ಬಾರಿಸಿದ್ದ ಯುವರಾಜ್, ಅಷ್ಟಕ್ಕೆ ಬಿಟ್ಟುಕೊಡಲು ರೆಡಿ ಇರ್ಲಿಲ್ಲ. ಮೂರನೇ ಎಸೆತದಲ್ಲಿ ಓವರ್ ಎಕ್ಟ್ರಾ ಕವರ್ಸ್ ನಲ್ಲಿ ಸಿಕ್ಸರ್ ಬಾರಿಸಿದ್ರು
ಇತ್ತ ಸತತ 3 ಎಸೆತಗಳಲ್ಲಿ 3 ಸಿಕ್ಸರ್ ಹೊಡೆಸಿಕೊಂಡಿದ್ದ, ಬ್ರಾಡ್ ಕ್ಯಾಪ್ಟನ್ ಕಾಲಿಂಗ್ ವುಡ್ ಜೊತೆ ಚರ್ಚಿಸಿದ್ರು. ಪ್ಲಾನ್ ನಲ್ಲಿ ಚೇಂಜ್ ಮಾಡಿಕೊಂಡು ರೌಂಡ್ ದ ವಿಕೆಟ್ ಬೌಲ್ ಮಾಡಿದ್ರು. ಆದ್ರೆ ಫುಲ್ ಟಾಸ್ ಆಗಿ ಬಿದ್ದ ಆ ಎಸೆತವನ್ನೂ ಬ್ಯಾಕ್ ವರ್ಡ್ ಪಾಯಿಂಟ್ ಮೂಲಕ ಯುವಿ ಕ್ಲಿಯರ್ ಮಾಡಿದ್ರು.

ಉಳಿದ ಮೂರು ಎಸೆತದಲ್ಲೂ ಚೆಂಡನ್ನ ಸಿಕ್ಸರ್‌ಗೆ ಅಟ್ಟಿದ ಯುವಿ

ಹೀಗೆ ಸತತ ನಾಲ್ಕು ಸಿಕ್ಸರ್ ಸಿಡಿಸಿ ಡರ್ಬಾನ್ ನಲ್ಲಿ ಸಂಚಲನ ಮೂಡಿಸಿದ್ದ ಯುವರಾಜ್ ಸಿಂಗ್ ತಲೆಗೆ ಬೇರೇನೋ ಲೆಕ್ಕಾಚಾರಗಳು ಬಂದಿದ್ವು.. ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್ ಬಾರಿಸುವ ಪ್ರಯತ್ನವನ್ನ ತಾನೇಕೆ ಮಾಡಬಾರದು ಅಂತ ಯುವಿ ಅಂದುಕೊಂಡ್ರು. ಅಂತೆಯೇ 19ನೇ ಓವರ್ ನ ಐದನೇ ಎಸೆತವನ್ನ ಬೌಲ್ ಮಾಡಿದ ಬ್ರಾಡ್ ಗೆ ಸಿಕ್ಕಿದ್ದು ಮತ್ತದೇ ಫಲಿತಾಂಶ.

ಸತತ ಐದು ಸಿಕ್ಸರ್ ಗಳನ್ನ ಬಾರಿಸಿದ್ದ ಯುವರಾಜ್ ಇಂಗ್ಲೀಷರಿಗೆ ಬೆವರಿಳಿಸಿದ್ರು. ಅಲ್ಲಿಗೆ ಫ್ಲಿಂಟಾಫ್ ಸಹಿತ ಎಲ್ಲರೂ ತಣ್ಣಗಾಗಿ ಬಿಟ್ಟಿದ್ರು. ಆದ್ರೆ ಕ್ರಿಕೆಟ್ ಲೋಕದಲ್ಲಿ ಇದ್ದಿದ್ದು ಬರೀ ದಾಖಲೆಗಳ ಲೆಕ್ಕಾಚಾರಗಳು. ಯುವರಾಜ್ ಸಿಂಗ್ 6 ಸಿಕ್ಸರ್ ಬಾರಿಸ್ತಾರಾ ಅನ್ನೋ ಪ್ರಶ್ನೆಗಳು? ಜೊತೆಗೆ ಯುವರಾಜ್ ಶರವೇಗದ ಅರ್ಧಶತಕ ಬಾರಿಸಿದ ದಾಖಲೆಯ ಸಮೀಪವೂ ಸಾಗಿದ್ರು. ಹೀಗಾಗಿ ಎಲ್ಲೆಡೆ ಇನ್ನಿಲ್ಲದ ಕಾತುರ.. ತಣಿಯದ ಕುತೂಹಲವಿತ್ತು.

ಮಿಡ್ ಆನ್ ನತ್ತ ಯುವಿ ಬಾರಿಸಿದ ಚೆಂಡು ಸೀದಾ ಪ್ರೇಕ್ಷಕರ ಗ್ಯಾಲರಿ ಸೇರಿತ್ತು.. ಅದು ಒಂದೇ ಓವರ್ ನಲ್ಲಿ ಸಿಡಿದ 6ನೇ ಸಿಕ್ಸರ್ ಅದಾಗಿತ್ತು. ಇದೆಲ್ಲವುದರ ಜೊತೆಗೆ ಯುವಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ವಿಶ್ವದಾಖಲೆ ನಿರ್ಮಿಸಿದ್ರು.

12 ಎಸೆತಗಳಲ್ಲಿ ಅರ್ಧಶತಕ ದಾಖಲು

12 ಎಸೆತಗಳಲ್ಲಿ ಅರ್ಧಶತಕ ದಾಖಲು

ಯುವರಾಜ್ ಸಿಂಗ್ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದರ ಜೊತೆಗೆ ಅಂದೇ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ಪ್ಲೇಯರ್ ಆಗಿ ಹೊರಹೊಮ್ಮಿದ್ರು. ಮೊದಲ ಆರು ಎಸೆತಗಳಲ್ಲಿ 14 ರನ್ ಕಲೆಹಾಕಿದ್ದ ಯುವಿ ನಂತರದ ಆರು ಎಸೆತಗಳಲ್ಲಿ 36 ರನ್ ಸಿಡಿಸಿ ಅರ್ಧಶತಕ ದಾಖಲಿಸಿದ್ರು.

ಅಂದು ಕೇವಲ 16 ಎಸೆತಗಳಲ್ಲಿ 58 ರನ್ ಸಿಡಿಸಿದ್ದ ಯುವರಾಜ್ ಸಿಂಗ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ರು. ಈ ಪಂದ್ಯವನ್ನ 18 ರನ್ ಗಳ ಅಂತರದಿಂದ ಗೆದ್ದ ಭಾರತ ಮುಂದಿನ ಹಂತಕ್ಕೇರಿತು. ಹೀಗೆ ಆಂಡ್ರ್ಯೋ ಫ್ಲಿಂಟಾಫ್ ಗರ್ವ ಭಂಗ ಮಾಡಿದ್ದ ಯುವರಾಜ್ ಸಿಂಗ್, ಒಂದೇ ಓವರ್ ನಲ್ಲಿ 6 ಸಿಕ್ಸರ್, ಶರವೇಗದ ಅರ್ಧಶತಕದ ಜೊತೆಗೆ ಸಿಕ್ಸರ್ ಕಿಂಗ್ ಅಂತ ಅಭಿಮಾನಿಗಳಿಂದ ಅಭಿಮಾನದಿಂದ ಕರೆಯಲ್ಪಟ್ಟಿದ್ದು ವಿಶೇಷ. ಈ ಸಾಧನೆಗೆ 15 ವರ್ಷಗಳು ತುಂಬಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಯುವರಾಜ್‌ ಸಿಂಗ್‌ ಶುಭಾಶಯ ಕೋರಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ: ಗೇಲ್ ದಾಖಲೆಗಿಲ್ಲ ಸರಿಸಾಟಿ

ತನ್ನ ಮಗುವಿನೊಂದಿಗೆ ವೀಡಿಯೋ ಶೇರ್ ಮಾಡಿದ ಯುವರಾಜ್

ಇನ್ನು ಆರು ಎಸೆತಕ್ಕೆ ಆರು ಸಿಕ್ಸರ್ ಸಿಡಿಸಿದ ವೀಡಿಯೋವನ್ನು ಯುವರಾಜ್‌ ಸಿಂಗ್ ತನ್ನ ಮಗುವಿನೊಂದಿಗೆ ಕುಳಿತು ನೋಡುತ್ತಿರುವ ವೀಡಿಯೋವನ್ನ ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ 15 ವರ್ಷಗಳ ಬಳಿಕ ಈ ಇನ್ನಿಂಗ್ಸ್‌ ವೀಕ್ಷಿಸಲು ಇವರಿಗಿಂತ ಉತ್ತಮ ಪಾರ್ಟ್‌ನರ್ ಸಿಗಲಾರರು ಎಂದು ಶೀರ್ಷಿಕೆ ನೀಡಿದ್ದಾರೆ.

Story first published: Monday, September 19, 2022, 10:59 [IST]
Other articles published on Sep 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X