ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದೇ ಇನ್ನಿಂಗ್ಸ್‌ನಲ್ಲಿ ಭಾರತದ ತ್ರಿಮೂರ್ತಿಗಳು ಶತಕ ಬಾರಿಸಿದ್ದ ವಿಶೇಷ ದಿನವಿದು!

On this day in 2012 Sourav Ganguly, Sachin Tendulkar and Rahul Dravid Scored century in leeds

ನವದೆಹಲಿ: ಆಗಸ್ಟ್ 23 ಭಾರತದ ಕ್ರಿಕೆಟ್ ಪಾಲಿಗೆ ವಿಶೇಷ ದಿನ. ಯಾಕೆಂದರೆ ಈ ದಿನ ಟೆಸ್ಟ್‌ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಭಾರತೀಯ ತ್ರಿಮೂರ್ತಿಗಳಾದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಶತಕ ಬಾರಿಸಿ ಗಮನ ಸೆಳೆದಿದ್ದರು. ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಭಾರತ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ನಲ್ಲಿ ಅಭೂತಪೂರ್ವ ಜಯ ದಾಖಲಿಸಿತ್ತು. ಆ ಪಂದ್ಯದಲ್ಲಿ ಭಾರತ ಭರ್ಜರಿ ಜಯವೂ ದಾಖಲಿಸಿತ್ತು.

ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!

ಈಗ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತೀಯ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನೀರಸ ಪ್ರದರ್ಶನ ನೀಡುತ್ತಿದ್ದಾರೆ. ಅದೇ 2002ರಂದು ನಡೆದಿದ್ದ ಆ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಬಂದಿದ್ದು ಮಧ್ಯಮ ಕ್ರಮಾಂಕದಲ್ಲೇ. ಆರಂಭಿಕ ಇನ್ನಿಂಗ್ಸ್‌ನಲ್ಲೇ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಶತಕ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ನನಿಗೆ ಡ್ರೆಸ್ ಸೆನ್ಸ್ ಹೇಳಿಕೊಟ್ಟಿದ್ದೆ ಇವರು! | Oneindia Kannada
ಸಚಿನ್ ತಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಅಬ್ಬರ

ಸಚಿನ್ ತಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಅಬ್ಬರ

ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಭಾರತ 2002ರಲ್ಲಿ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಮೂರನೇ ಟೆಸ್ಟ್‌ ಪಂದ್ಯ ಆಡಿತ್ತು. ಈ ವೇಳೆ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ, ಸಂಜಯ್ ಬಂಗಾರ್ 68, ವೀರೇಂದ್ರ ಸೆಹ್ವಾಗ್ 8, ರಾಹುಲ್ ದ್ರಾವಿಡ್ 148 (307), ಸಚಿನ್ ತೆಂಡೂಲ್ಕರ್ 193 (330), ಸೌರವ್ ಗಂಗೂಲಿ 128 (167), ವಿವಿಎಸ್ ಲಕ್ಷ್ಮಣ್ 6, ಅಜಿತ್ ಅಗರ್ಕರ್ 2, ಪಾರ್ಥಿವ್ ಪಟೇಲ್ ಅಜೇಯ 7, ಹರ್ಭಜನ್ ಸಿಂಗ್ 18 ರನ್‌ನೊಂದಿಗೆ 180.1 ಓವರ್‌ಗೆ 8 ವಿಕೆಟ್ ಕಳೆದು 628 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಇಂಗ್ಲೆಂಡ್ ಬೌಲರ್‌ಗಳಲ್ಲಿ ಮ್ಯಾಥ್ಯೂ ಹಾಗಾರ್ಡ್ 1, ಆಂಡಿ ಕ್ಯಾಡಿಕ್ 3, ಅಲೆಕ್ಸ್ ಟ್ಯೂಡರ್ 2, ಆಂಡ್ರ್ಯೂ ಫ್ಲಿಂಟಾಫ್ 1, ಆಶ್ಲೇ ಗೈಲ್ಸ್ 1 ವಿಕೆಟ್‌ ಪಡೆದಿದ್ದರು.

ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಆಂಗ್ಲರಿಂದ ನೀರಸ ಬ್ಯಾಟಿಂಗ್‌

ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಆಂಗ್ಲರಿಂದ ನೀರಸ ಬ್ಯಾಟಿಂಗ್‌

ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ನೀರಸ ಬ್ಯಾಟಿಂಗ್‌ ನೀಡಿತ್ತು. ಅಲೆಕ್ ಸ್ಟೆವರ್ಟ್ ಮತ್ತು ಮೈಕಲ್ ವಾನ್ ಅರ್ಧ ಶತಕ ಬಾರಿಸಿದ್ದು ಬಿಟ್ಟರೆ ಉಳಿದ ಯಾರಿಂದಲೂ ಗಮನಾರ್ಹ ರನ್ ಬರಲಿಲ್ಲ. ರಾಬ್ ಕೀ 30, ಮೈಕಲ್ ವಾನ್ 61, ಮಾರ್ಕ್ ಬುಚರ್ 16, ನಾಯಕ ನಾಸೆರ್ ಹುಸೇನ್ 25, ಜಾನ್ ಕ್ರಾವ್ಲೆ 13, ಅಲೆಕ್ ಸ್ಟೆವರ್ಟ್ 78, ಅಲೆಕ್ಸ್ ಟ್ಯೂಡರ್ 1, ಆಶ್ಲೇ ಗೈಲ್ಸ್ 25 ರನ್ ಕೊಡುಗೆಯೊಂದಿಗೆ ಇಂಗ್ಲೆಂಡ್ 89 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 273 ರನ್ ಗಳಿಸಿತ್ತು. ಈ ವೇಳೆ ಭಾರತದ ಝಹೀರ್ ಖಾನ್ 2, ಅಜಿತ್ ಅಗರ್ಕರ್ 2, ಅನಿಲ್ ಕುಂಬ್ಳೆ 3, ಹರ್ಭಜನ್ ಸಿಂಗ್ 3 ವಿಕೆಟ್‌ನೊಂದಿಗೆ ಗಮನ ಸೆಳೆದಿದ್ದರು.

ಭಾರತಕ್ಕೆ ಇನ್ನಿಂಗ್ಸ್‌ ಸಹಿತ ಭರ್ಜರಿ ಗೆಲುವು

ಭಾರತಕ್ಕೆ ಇನ್ನಿಂಗ್ಸ್‌ ಸಹಿತ ಭರ್ಜರಿ ಗೆಲುವು

ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ದೊಡ್ಡ ರನ್ ಗಳಿಸದಿದ್ದರಿಂದ ಆಂಗ್ಲರಿಗೆ ದ್ವಿತೀಯ ಇನ್ನಿಂಗ್ಸ್‌ಗೆ ಫಾಲೋ ಆನ್ ನೀಡಲಾಗಿತ್ತು. ರಾಬ್ ಕೀ 34, ಮೈಕಲ್ ವಾನ್ 15, ಮಾರ್ಕ್ ಬುಚರ್ 42, ನಾಯಕ ನಾಸೆರ್ ಹುಸೇನ್ 110, ಜಾನ್ ಕ್ರಾವ್ಲೆ 12, ಅಲೆಕ್ ಸ್ಟೆವರ್ಟ್ 47, ಅಲೆಕ್ಸ್ ಟ್ಯೂಡರ್ 21, ಆಶ್ಲೇ ಗೈಲ್ಸ್ 10 ರನ್ ನೊಂದಿಗೆ 110.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 309 ಬಾರಿಸುವ ಮೂಲಕ 46 ರನ್‌ನಿಂದ ಸೋತಿತ್ತು. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಝಹೀರ್ ಖಾನ್ 1, ಅಜಿತ್ ಅಗರ್ಕರ್ 1, ಅನಿಲ್ ಕುಂಬ್ಳೆ 4, ಹರ್ಭಜನ್ ಸಿಂಗ್ 1, ಸಂಜಯ್ ಬಂಗಾರ್ 2 ವಿಕೆಟ್ ಪಡೆದಿದ್ದರು. ಇಂಗ್ಲೆಂಡ್ ಆವತ್ತು ಇನ್ನಿಂಗ್ಸ್‌ ಸಹಿತ ಗೆದ್ದಿತ್ತು. ರಾಹುಲ್ ದ್ರಾವಿಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಆವತ್ತು ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ 1-1ರಿಂದ ಸಮಬಲಗೊಂಡಿತ್ತು. ಎರಡು ಪಂದ್ಯಗಳು ಡ್ರಾ ಅನ್ನಿಸಿದ್ದವು.

Story first published: Monday, August 23, 2021, 13:56 [IST]
Other articles published on Aug 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X