ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ನಿವೃತ್ತಿ ಘೋಷಿಸಿ ಇಂದಿಗೆ 2 ವರ್ಷ: ವೀಡಿಯೋ ಮೂಲಕ ಗೌರವ ಸೂಚಿಸಿದ ಐಸಿಸಿ

MS DHONI

''ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. 19:29 ಗಂಟೆಯಿಂದ ನನ್ನನ್ನು ನಿವೃತ್ತ ಎಂದು ಪರಿಗಣಿಸಿ'' ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ದಿಢೀರನೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮಹೇಂದ್ರ ಸಿಂಗ್‌ ಧೋನಿ ಈ ನಿರ್ಧಾರ ತೆಗೆದುಕೊಂಡು 2 ವರ್ಷಗಳೇ ಉರುಳಿವೆ.

ಆಗಸ್ಟ್‌ 15, 2020ರಂದು ಸ್ವಾತಂತ್ರ್ಯ ದಿನಾಚರಣೆ ದಿನದಂದೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಧೋನಿ ಕೋಟ್ಯಾಂತರ ಅಭಿಮಾನಿಗಳಿಗೆ, ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿದ್ದರು. ಈ ಮೂಲಕ ಭಾರತ ಕಂಡಂತಹ ಶ್ರೇಷ್ಟ ನಾಯಕ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದರು.

ಮಹೇಂದ್ರ ಸಿಂಗ್ ಧೋನಿಗೆ ಗೌರವ ಸೂಚಿಸಿದ ಐಸಿಸಿ

ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಮಹೇಂದ್ರ ಸಿಂಗ್ ಧೋನಿ ಗೌರವ ಸೂಚಿಸುವ ಮೂಲಕ ವೀಡಿಯೋವೊಂದನ್ನ ಪೋಸ್ಟ್ ಮಾಡಿದೆ. 3.11 ನಿಮಿಷದ ಈ ವೀಡಿಯೋದಲ್ಲಿ ಮಹೇಂದ್ರ ಸಿಂಗ್ ಧೋನಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ಸಂಭ್ರಮಿಸಿದ ಕ್ಷಣಗಳನ್ನ ಒಂದೆಡೆ ತೋರಿಸಲಾಗಿದೆ.

'ಈ ದಿನ ಭಾರತದ ಸೂಪರ್ ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ದಿನ. ಲೆಜೆಂಡ್‌ಗೆ ಈ ವೀಡಿಯೋ ಟ್ರಿಬ್ಯೂಟ್ '' ಎಂಬ ಶ್ರೀರ್ಷಿಕೆ ನೀಡಿ ಐಸಿಸಿ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದೆ.

ಐಸಿಸಿ ಪೋಸ್ಟ್‌ ಮಾಡಿದ ವೀಡಿಯೋಗೆ ಒಂದು ಗಂಟೆಯೊಳಗೆ 3 ಲಕ್ಷಕ್ಕೂ ಅಧಿಕ ಲೈಕ್‌ ಹಾಗೂ ಸಾವಿರಾರು ಕಮೆಂಟ್ಸ್ ದಾಖಲಾಗಿದೆ.

75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಕೊಹ್ಲಿ, ಪಾಂಡ್ಯ ಸೇರಿದಂತೆ ಅನೇಕ ಕ್ರಿಕೆಟಿಗರಿಂದ ಶುಭಾಶಯ

ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ

ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ

ಭಾರತ ಕಂಡಂತಹ ಅತ್ಯಂತ ಯಶಸ್ವಿ ನಾಯಕ ಎಂದೇ ಕರೆಯಲ್ಪಡುವ ಮಹೇಂದ್ರ ಸಿಂಗ್ ಧೋನಿ, ಭಾರತಕ್ಕಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿಯೇ ಶ್ರೇಷ್ಟ ನಾಯಕರ ಸಾಲಿನಲ್ಲಿದ್ದಾರೆ. ಅದ್ರಲ್ಲೂ ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದಿರುವ ವಿಶ್ವದ ಏಕೈಕ ನಾಯಕ ಎಂಬ ಸಾಧನೆ ಹೊಂದಿದ್ದಾರೆ.

2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ ಟ್ರೋಫಿ ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ವಿಂಡೀಸ್‌ ಕ್ಲೈವ್‌ ಲಾಯ್ಡ್‌ ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್‌ ಗೆದ್ದಿರಬಹುದು, ವೆಸ್ಟ್ ಇಂಡೀಸ್‌ನ ಡರೆನ್ ಸ್ಯಾಮಿ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ನಾಯಕನಾಗಿರಬಹುದು. ಆದ್ರೆ ಇದುವರೆಗೆ ಧೋನಿ ಬಿಟ್ಟರೆ ಬೇರೆ ಯಾವೊಬ್ಬ ನಾಯಕನು ಮೂರು ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

ಪ್ರಪಂಚದಾದ್ಯಂತ ಕಾಡಿನಲ್ಲಿ 4,000 ಹುಲಿಗಳಿರಬಹುದು, ಆದ್ರೆ ಕೇವಲ ಒಬ್ಬ ರಾಹುಲ್ ದ್ರಾವಿಡ್: ರಾಸ್ ಟೇಲರ್

75ನೇ ಸ್ವಾತಂತ್ರ್ಯ ದಿನಾಚರಣೆಗೆ ಧೋನಿ ಟ್ರಿಬ್ಯೂಟ್‌

75ನೇ ಸ್ವಾತಂತ್ರ್ಯ ದಿನಾಚರಣೆಗೆ ಧೋನಿ ಟ್ರಿಬ್ಯೂಟ್‌

ದೇಶಾದ್ಯಂತ ಅನೇಕ ಗಣ್ಯರು, ಸೆಲೆಬ್ರೆಟಿಗಳು, ಕ್ರೀಡಾ ತಾರೆಯರು ಭಾರತದ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನ ಹಂಚಿಕೊಂಡಿದ್ದಾರೆ. ಈ ವಿಶೇಷ ದಿನದಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ ಯಾವುದೇ ಫೋಟೋ ಅಥವಾ ವೀಡಿಯೋ ಪೋಸ್ಟ್ ಮಾಡದಿದ್ರೂ ಸಹ ತಮ್ಮ ಡಿಪಿಯನ್ನು ಎರಡು ವರ್ಷಗಳ ಬಳಿಕ ಬದಲಿಸಿ ಸ್ವಾತಂತ್ರ್ಯೋತ್ಸವದ ಮಹತ್ವವನ್ನ ಸಾರಿದ್ದಾರೆ.

ಧೋನಿ ತ್ರಿವರ್ಣ ಧ್ವಜ ಹಾಕಿರುವುದರ ಜೊತೆಗೆ "ನಾನು ಈ ಭಾರತ ಮಾತೆಯ ಪ್ರಜೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ" ಎಂದು ಸಂಸ್ಕೃತದಲ್ಲಿ ಹಾಕಿರುವ ಪದಗಳನ್ನ ನೋಡಿದ ಅಭಿಮಾನಿಗಳು ಸಂಭ್ರಮದಿಂದ ಕೊಂಡಾಡುತ್ತಿದ್ದಾರೆ.

ಎಂಎಸ್‌ ಧೋನಿ ಗೆದ್ದಿರುವ ಪ್ರಮುಖ ಟ್ರೋಫಿಗಳು

ಎಂಎಸ್‌ ಧೋನಿ ಗೆದ್ದಿರುವ ಪ್ರಮುಖ ಟ್ರೋಫಿಗಳು

2007ರ ಐಸಿಸಿ ಟಿ20 ವಿಶ್ವಕಪ್‌.
2008ರ ಸಿಬಿ ಸೀರೀಸ್‌ (ಆಸ್ಟ್ರೇಲಿಯಾ-ಶ್ರೀಲಂಕಾ ವಿರುದ್ಧ)
2009ರ ಕಾಂಪ್ಯಾಕ್‌ ಕಪ್‌
2010ರ ಏಷ್ಯಾ ಕಪ್‌
2011ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌
2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ
2013ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ತ್ರಿಕೋನ ಸರಣಿ
2016ರ ಏಷ್ಯಾಕಪ್‌ ಟೂರ್ನಿ

Story first published: Monday, August 15, 2022, 15:09 [IST]
Other articles published on Aug 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X