ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನ

On this day: India defeated Pakistan for seventh time in World Cup

ಬೆಂಗಳೂರು: ಭಾರತ vs ಪಾಕಿಸ್ತಾನ ಪಂದ್ಯವೆಂದರೆ ಅದು ಹೈವೋಲ್ಟೇಜಿನ ಪಂದ್ಯವೇ ಸರಿ. ಇದು ಕ್ರಿಕೆಟ್ ಮಾತ್ರವೆಂದಲ್ಲ. ಅಥ್ಲೆಟಿಕ್ಸ್, ಹಾಕಿ, ಕಬಡ್ಡಿ ಹೀಗೆ ಯಾವುದೇ ಕ್ರಿಡೆಯಲ್ಲಾದರೂ ಸರಿಯೆ; ಪಾಕಿಸ್ತಾನ-ಭಾರತ ತಂಡಗಳು ಮುಖಾಮುಖಿಯಾದರೆ ಆ ಪಂದ್ಯ ಹೆಚ್ಚು ಕುತೂಹಲಕಾರಿ ಅನ್ನಿಸಿಕೊಳ್ಳುತ್ತದೆ. ಆದರೆ ಕ್ರಿಕೆಟ್‌ನಲ್ಲಿ ಇತ್ತಂಡಗಳ ಕದನದ ಕಿಕ್ಕು ಇನ್ನೂ ಸ್ವಲ್ಪ ಜಾಸ್ತಿಯಾಗಿರುತ್ತಷ್ಟೆ. ರಾಜಕೀಯ ಕಾರಣದಿಂದ ಎರಡೂ ದೇಶಗಳು ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳದಿರುವುದರಿಂದ ಭಾರತ-ಪಾಕ್ ಪಂದ್ಯ ನೋಡಲು ಸಿಗೋದೇ ಈಚೀಚೆಗೆ ಅಪರೂಪವೆನಿಸಿದೆ.

ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿ ರೌಂಡ್ ರಾಬಿನ್ ಮಾದರಿಯಾದ್ದರಿಂದ ಎಷ್ಟೇ ರಾಜಕೀಯ ಬೀನ್ನಾಭಿಪ್ರಾಯಗಳಿದ್ದರೂ ಭಾರತ-ಪಾಕ್ ಕದನ ನಡೆಯಬೇಕಾಗಿ ಬಂದಿತ್ತು. ಹೀಗಾಗಿ ಎರಡೂ ದೇಶಗಳ ಕ್ರಿಕೆಟ್‌ ಅಭಿಮಾನಿಗಳಿಗೆ ಅಪರೂಪದ ಪಂದ್ಯ ವೀಕ್ಷಿಸುವ ಸುವರ್ಣಾವಕಾಶ ಒದಗಿತ್ತು.

'ಆತ ಅತ್ಯುತ್ತಮ ಆಟಗಾರ': ಪ್ರಭಾವಶಾಲಿ ಭಾರತೀಯನ ಹೆಸರಿಸಿದ ಸ್ಮಿತ್'ಆತ ಅತ್ಯುತ್ತಮ ಆಟಗಾರ': ಪ್ರಭಾವಶಾಲಿ ಭಾರತೀಯನ ಹೆಸರಿಸಿದ ಸ್ಮಿತ್

ಬನ್ನಿ ಹಾಗಾದ್ರೆ; ಭಾರತ vs ಪಾಕ್ ವಿಶ್ವಕಪ್ ಕದನದ ಝಲಕ್ ನೋಡಿಕೊಂಡು ಬರೋಣ. ರೋಹಿತ್ ಶರ್ಮಾ ಅಬ್ಬರದಾಟ, ಟೀಮ್ ಇಂಡಿಯಾ ಗೆದ್ದು ಬೀಗಿದ್ದನ್ನು ಮತ್ತೆ ಕಣ್ಣಮುಂದೆ ತಂದುಕೊಳ್ಳೋಣ..

ವಿಶ್ವಕಪ್ 22ನೇ ಪಂದ್ಯವಿದು

ವಿಶ್ವಕಪ್ 22ನೇ ಪಂದ್ಯವಿದು

ಕಳೆದ ವರ್ಷ ಭಾರತ vs ಪಾಕಿಸ್ತಾನ ಮುಖಾಮುಖಿಯಾಗಿದ್ದು ವಿಶ್ವಕಪ್ 22ನೇ ಪಂದ್ಯದಲ್ಲಿ. 2019ರ ಜೂನ್ 16ರಂದು ಈ ಪಂದ್ಯ ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದಿತ್ತು. ಹಿಟ್‌ಮ್ಯಾನ್ ರೋಹಿತ್ ಶರ್ಮಾ ಆವತ್ತು ಸ್ಫೋಟಕ ಶತಕ ಬಾರಿಸಿ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದರು. ಭಾರತ, ಏಕದಿನ ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ 7-0 ವಿಜಯದ ದಾಖಲೆ ನಿರ್ಮಿಸಿತ್ತು.

ಭರ್ಜರಿ ಗುರಿ ನೀಡಿದ್ದ ಭಾರತ

ಭರ್ಜರಿ ಗುರಿ ನೀಡಿದ್ದ ಭಾರತ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ಕೆಎಲ್ ರಾಹುಲ್ 57, ರೋಹಿತ್ ಶರ್ಮಾ 140 (113 ಎಸೆತ), ನಾಯಕ ವಿರಾಟ್ ಕೊಹ್ಲಿ 77 (65 ಎಸೆತ), ಹಾರ್ದಿಕ್ ಪಾಂಡ್ಯ 26, ವಿಜಯ್ ಶಂಕರ್ ಅಜೇಯ 15, ಕೇದಾರ್ ಜಾಧವ್ ಅಜೇಯ 9 ರನ್‌ ಬಾರಿಸಿದ್ದರು. ಕೊಹ್ಲಿ ಪಡೆ 50 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ ಭರ್ಜರಿ 336 ರನ್ ಕಲೆ ಹಾಕಿತ್ತು.

ಗುರಿ ತಲುಪದ ಪಾಕಿಸ್ತಾನ

ಗುರಿ ತಲುಪದ ಪಾಕಿಸ್ತಾನ

ಪಾಕಿಸ್ತಾನ ಇನ್ನಿಂಗ್ಸ್‌ ವೇಳೆ ಮಳೆ ಅಡ್ಡಿಪಡಿಸಿದ್ದರಿಂದ ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ ಪಾಕ್‌ಗೆ 40 ಓವರ್‌ನಲ್ಲಿ 302 ರನ್ ಗುರಿ ನೀಡಲಾಗಿತ್ತು. ಚೇಸಿಂಗ್‌ಗೆ ಇಳಿದ ಸರ್ಫರಾಜ್‌ ಅಹ್ಮದ್ ಬಳಗ, ಫಖರ್ ಝಮಾನ್ 62, ಬಾಬರ್ ಅಝಾಮ್ 48, ಇಮಾದ್ ವಾಸಿಮ್ 46, ಶದಾಬ್ ಖಾನ್ ಅಜೇಯ 20 ರನ್‌ನೊಂದಿಗೆ 40 ಓವರ್‌ ಮುಕ್ತಾಯಕ್ಕೆ 6 ವಿಕೆಟ್ ನಷ್ಟದಲ್ಲಿ ಕೇವಲ 212 ರನ್ ಬಾರಿಸಲಷ್ಟೇ ಶಕ್ತವಾಯ್ತು.

ರೋಹಿತ್ ಶರ್ಮಾ ಪಂದ್ಯಶ್ರೇಷ್ಠ

ರೋಹಿತ್ ಶರ್ಮಾ ಪಂದ್ಯಶ್ರೇಷ್ಠ

ಆವತ್ತಿನ ಪಂದ್ಯದಲ್ಲಿ ಭಾರತ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) 89 ರನ್ ಜಯಭೇರಿ ಬಾರಿಸಿತ್ತು. ಆಲ್ ರೌಂಡರ್ ವಿಜಯ್ ಶಂಕರ್ 2, ಹಾರ್ದಿಕ್ ಪಾಂಡ್ಯ 2, ಕುಲದೀಪ್ ಯಾದವ್ 2 ವಿಕೆಟ್ ಮುರಿದು ತಂಡದ ಗೆಲುವಿಗೆ ನೆರವಾಗಿದ್ದರು. ರೋಹಿತ್ ಶರ್ಮಾ ಪಂದ್ಯಶ್ರೇಷ್ಠರೆನಿಸಿದ್ದರು.

Story first published: Tuesday, June 16, 2020, 21:03 [IST]
Other articles published on Jun 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X