ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದ ದಿನವಿದು

On this day: India register their first-ever ODI win at 1975 World Cup

ಬೆಂಗಳೂರು: 1975ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಗೆ ಎಂಟ್ರಿಯಾಗಿದ್ದಾಗ ಭಾರತ ಏಕದಿನ ಕ್ರಿಕೆಟ್‌ನಲ್ಲಿ ಅನುಭವವಿಲ್ಲದ ತಂಡವಾಗಿತ್ತು. ಈ ವಿಶ್ವಕಪ್‌ಗೂ ಮುನ್ನ ಭಾರತ ತಂಡ ಇಂಗ್ಲೆಂಡ್ ವಿರುದ್ಧ 1974ರಲ್ಲಿ ಕೇವಲ ಎರಡೇ ಏಕದಿನ ಪಂದ್ಯಗಳನ್ನಾಡಿತ್ತು. ಎರಡೂ ಪಂದ್ಯಗಳಲ್ಲೂ ಭಾರತ ಸೋತಿತ್ತು. ಆದರೂ 1975ರ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗೆ ಶ್ರೀನಿವಾಸರಾಘವನ್ ವೆಂಕಟರಾಘವನ್ ಮುಂದಾಳತ್ವದ ಭಾರತ ತಂಡ ಅರ್ಹತೆ ಗಿಟ್ಟಿಸಿಕೊಂಡಿತ್ತು. ಆವತ್ತಿನ ವಿಶ್ವಕಪ್‌ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು.

ಖಾಲಿ ಮೈದಾನದಲ್ಲಿ ಈ ವರ್ಷದ ಐಪಿಎಲ್ ನಡೆಸಲು ಬಿಸಿಸಿಐ ತಯಾರಿ!ಖಾಲಿ ಮೈದಾನದಲ್ಲಿ ಈ ವರ್ಷದ ಐಪಿಎಲ್ ನಡೆಸಲು ಬಿಸಿಸಿಐ ತಯಾರಿ!

ಎರಡು ಏಕದಿನ ಪಂದ್ಯಗಳನ್ನಾಡಿ ಸೋಲನುಭವಿಸಿದ್ದ ಭಾರತ, ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತಾದರೂ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲೂ ಮತ್ತದೇ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತ್ತು. ಆದರೆ ಇದೇ ವಿಶ್ವಕಪ್‌ನಲ್ಲಿ ಭಾರತ ಗೆಲುವಿನ ಇತಿಹಾಸ ಕೂಡ ನಿರ್ಮಿಸಿತ್ತು.

ಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳುಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳು

ಏಕದಿನ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿದ್ದ ಟೀಮ್ ಇಂಡಿಯಾ ಗೆಲುವಿನ ಇತಿಹಾಸ ಬರೆದಿದ್ದರ, ಅದರಲ್ಲೂ ವಿಶ್ವಕಪ್‌ನಲ್ಲಿ ಗೆದ್ದಿದ್ದರ ಕುತೂಹಲಕಾರಿ ಕತೆ ಇಲ್ಲಿದೆ.

ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು

ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು

1975ರ ಏಕದಿನ ವಿಶ್ವಕಪ್‌ಗೆ ಪ್ರವೇಶಿಸಿದ್ದ ಭಾರತ ಉದ್ಘಾಟನಾ ಪಂದ್ಯದಲ್ಲೇ ಇಂಗ್ಲೆಂಡ್ ವಿರುದ್ಧ 202 ರನ್ ಪರಾಭವಗೊಂಡಿತ್ತು. ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲೇ ಭಾರತಕ್ಕೆ ಎದುರಾಳಿಯಾಗಿ ಮೈದಾನಕ್ಕಿಳಿದಿದ್ದ ಭಾರತದ ಕ್ರಿಕೆಟ್ ಜನಕರಾದ ಆಂಗ್ಲರು, 60 ಓವರ್‌ಗೆ 334 ರನ್ ಪೇರಿಸಿದ್ದರು. ಗುರಿ ಬೆನ್ನಟ್ಟಿದ ಭಾರತ 60 ಓವರ್‌ಗೆ 3 ವಿಕೆಟ್ ಕಳೆದು 132 ಕಲೆ ಹಾಕಿ ಹೀನಾಯವಾಗಿ ಶರಣಾಗಿತ್ತು.

ಚೊಚ್ಚಲ ಗೆಲುವಿನ ಇತಿಹಾಸ ನಿರ್ಮಾಣ

ಚೊಚ್ಚಲ ಗೆಲುವಿನ ಇತಿಹಾಸ ನಿರ್ಮಾಣ

ಇಂಗ್ಲೆಂಡ್ ವಿರುದ್ಧ ಸೋಲಿನ ಬಳಿಕ ಎರಡನೇ ಪಂದ್ಯವಾಗಿ ಭಾರತ ಈಸ್ಟ್ ಆಫ್ರಿಕಾದ ಸವಾಲು ಸ್ವೀಕರಿಸಿತ್ತು. ಸುಮಾರು 45 ವರ್ಷಗಳಿಗೆ ಹಿಂದೆ ಅಂದರೆ 1975 ಜೂನ್ 11ರ ಇದೇ ದಿನ ಭಾರತ ತಂಡ ಈಸ್ಟ್ ಆಫ್ರಿಕಾ ವಿರುದ್ಧ 10 ವಿಕೆಟ್ ಗೆಲುವನ್ನಾಚರಿಸಿತ್ತು. ಇದು ಭಾರತದ ಪಾಲಿನ ಚೊಚ್ಚಲ ಏಕದಿನ ಗೆಲುವು. ಅಷ್ಟೇ ಅಲ್ಲ, ಏಕದಿನ ವಿಶ್ವಕಪ್‌ನ ಮೊದಲ ಗೆಲುವೂ ಕೂಡ.

ಗವಾಸ್ಕರ್, ಫಾರೂಖ್ ಅಜೇಯ ಆಟ

ಗವಾಸ್ಕರ್, ಫಾರೂಖ್ ಅಜೇಯ ಆಟ

ಭಾರತ vs ಈಸ್ಟ್ ಆಫ್ರಿಕಾ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಈಸ್ಟ್ ಆಫ್ರಿಕಾ ತಂಡ, 55.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 120 ರನ್ ಮಾಡಿತು. ಚೇಸಿಂಗ್‌ಗೆ ಇಳಿದ ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸುನಿಲ್ ಗವಾಸ್ಕರ್ ಮತ್ತು ಫಾರೂಖ್ ಇಂಜಿನಿಯರ್ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಗವಾಸ್ಕರ್ ಅಜೇಯ 65, ಫಾರೂಖ್ ಅಜೇಯ 54 ರನ್ ಬಾರಿಸಿದ್ದರು.

ಭಾರತಕ್ಕೆ ಭರ್ಜರಿ ಗೆಲುವು

ಭಾರತಕ್ಕೆ ಭರ್ಜರಿ ಗೆಲುವು

ಈಸ್ಟ್ ಆಫ್ರಿಕಾ ವಿರುದ್ಧ ಈ ಪಂದ್ಯದಲ್ಲಿ ಭಾರತ, 121 ರನ್ ಗುರಿಗೆ ಪ್ರತ್ಯುತ್ತರವಾಗಿ 29.5 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 123 ರನ್ ಕಲೆ ಹಾಕಿತ್ತು. ಇನ್ನೂ 181 ಎಸೆತಗಳು ಬಾಕಿಯಿರುವಾಗಲೇ ಭಾರತ 10 ವಿಕೆಟ್ ಭರ್ಜರಿ ಜಯ ದಾಖಲಿಸಿತ್ತು. ಭಾರತದ ಬೌಲರ್‌ಗಳಾದ ಮದನ್ ಲಾಲ್ 3, ಸೈಯದ್ ಅಬಿದ್ ಅಲಿ 2, ಬಿಶಾನ್ ಬೇಡಿ 1, ಮೋಹೀಂದರ್ ಅಮರ್‌ನಾಥ್ 2 ವಿಕೆಟ್ ಮುರಿದು ಭಾರತದ ತಂಡದ ಸಹಕರಿಸಿದ್ದರು.

Story first published: Thursday, June 11, 2020, 18:33 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X