ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

24 ವರ್ಷಗಳ ಹಿಂದೆ ಟೀಮ್ ಇಂಡಿಯಾ ವಿಶಿಷ್ಠ ಗೆಲುವು ದಾಖಲಿಸಿದ್ದು ಇದೇ ದಿನ!

On this day: India registered first-ever Test win at Lord’s in 1986

ಬೆಂಗಳೂರು: 'ಕ್ರಿಕೆಟ್‌ ಕಾಶಿ' ಅಂತ ಕರೆಯಲ್ಪಡುವ ಲಾರ್ಡ್ಸ್ ಸ್ಟೇಡಿಯಂನಲ್ಲಿ ತಂಡವೊಂದು ಪಂದ್ಯ ಗೆದ್ದರೆ ಆ ತಂಡಕ್ಕೆ ವಿಶೇಷ ಗೌರವ ಲಭಿಸುತ್ತದೆ. ಹಾಗಂತ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ಗೆಲುವಿನ ದಾಖಲೆ ಬರೆಯೋದು ಸುಲಭವಿಲ್ಲ. ಅದಕ್ಕೇ ಈ ಸ್ಟೇಡಿಯಂನಲ್ಲಿ ಸಿಕ್ಕ ಗೆಲುವಿಗೆ ವಿಶೇಷ ಹಿರಿಮೆಯಿದೆ. ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಸುಮಾರು 24 ವರ್ಷಗಳ ಹಿಂದೆ ಇದೇ ಲಾರ್ಡ್ಸ್ ಸ್ಟೇಡಿಯಂನಲ್ಲಿ ಗೆಲುವಿನ ಮೈಲಿಗಲ್ಲು ಸ್ಥಾಪಿಸಿತ್ತು.

ಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳುಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳು

ಮೂರು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಬಂದಿದ್ದ ಭಾರತ ತಂಡ, 1986ರಂದು ಜೂನ್ 10ರಂದು ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ವಿಜಯ ಪತಾಕೆ ಹಾರಿಸಿತ್ತು. ಅದಕ್ಕೂ ಮೊದಲು 1932ರಲ್ಲಿ ಲಾರ್ಡ್ಸ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದಿದ್ದ ಭಾರತ ಅದಾಗಿ 1986ರಲ್ಲಿ ಅಂದರೆ 54 ವರ್ಷಗಳ ಬಳಿಕ ಮತ್ತೆ ಗೆಲುವನ್ನು ಸಂಭ್ರಮಿಸಿತ್ತು.

13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!

ಅಂದಿನ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದವರಾರು? ಟೆಸ್ಟ್ ಸರಣಿ ಏನಾಯಿತು? ಸಂಪೂರ್ಣ ಮಾಹಿತಿ ಇಲ್ಲಿದೆ.

ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್

ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್

ಟಾಸ್ ಗೆದ್ದಿದ್ದ ಭಾರತ ಬೌಲಿಂಗ್ ಆಯ್ದುಕೊಂಡಿತ್ತು. ಇನ್ನಿಂಗ್ಸ್‌ ಆರಂಭಿಸಿದ್ದ ಇಂಗ್ಲೆಂಡ್, ಗ್ರಹಾಂ ಗೂಚ್ 114, ಡೆರೆಕ್ ಪ್ರಿಂಗಲ್ 63 ರನ್‌ನೊಂದಿಗೆ 128.2ನೇ ಓವರ್‌ಗೆ 294 ಬಾರಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೈಕ್ ಗ್ಯಾಟಿಂಗ್ 40, ಅಲನ್ ಲ್ಯಾಂಬ್ 39 ರನ್ ಸೇರ್ಪಡೆಯೊಂದಿಗೆ 96.4ನೇ ಓವರ್‌ಗೆ 180 ರನ್ ಕಲೆ ಹಾಕಿತ್ತು.

ವೆಂಗ್‌ಸರ್ಕಾರ್ ಚತುರ ಆಟ

ವೆಂಗ್‌ಸರ್ಕಾರ್ ಚತುರ ಆಟ

ಟೀಮ್ ಇಂಡಿಯಾ ಪರ ಎರಡೂ ಇನ್ನಿಂಗ್ಸ್‌ಗಳ ಗಮನಾರ್ಹ ರನ್ ಕೊಡುಗೆ ಕೊಟ್ಟಿದ್ದೆಂದರೆ ದಿಲೀಪ್ ವೆಂಗ್‌ಸರ್ಕಾರ್. ಮೊದಲ ಇನ್ನಿಂಗ್ಸ್‌ನಲ್ಲಿ ದಿಲೀಪ್ ಅಜೇಯ 126 ರನ್, ಮೋಹೀಂದರ್ ಅಮರ್‌ನಾಥ್ 69 ರನ್ ಗಳಿಸಿದ್ದರಿಂದ ಭಾರತ 137 ಓವರ್‌ಗೆ 341 ರನ್ ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 136 ರನ್ ಬಾರಿಸಿದ ಭಾರತ 5 ವಿಕೆಟ್‌ ಗೆಲುವನ್ನಾಚರಿಸಿತ್ತು.

ಚೇತನ್, ಕಪಿಲ್ ಮಾರಕ ಬೌಲಿಂಗ್

ಚೇತನ್, ಕಪಿಲ್ ಮಾರಕ ಬೌಲಿಂಗ್

ಆವತ್ತು ಟೀಮ್ ಇಂಡಿಯಾ ಪರ ಕಪಿಲ್ ದೇವ್ 1+4, ರೋಜರ್ ಬಿನ್ನಿ 3+1, ಚೇತನ್ ಶರ್ಮಾ 5+1, ಮಣೀಂದರ್ ಸಿಂಗ್ 1+3, ರವಿ ಶಾಸ್ತ್ರಿ 0+1 ವಿಕೆಟ್ ಗಳಿಸಿದ್ದರು. ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ತೋರಿಸಿದ್ದೆಂದರೆ ಗ್ರಹಾಂ ಡಿಲ್ಲಿ (4+2) ಮತ್ತು ಡೆರೆಕ್ ಪ್ರಿಂಗಲ್ (3+1).

ಸರಣಿ ಭಾರತದ ಮಡಿಲಿಗೆ

ಸರಣಿ ಭಾರತದ ಮಡಿಲಿಗೆ

ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-0ಯ ಜಯ ಗಳಿಸಿತ್ತು. 1ನೇ ಟೆಸ್ಟ್ ನಲ್ಲಿ 5 ವಿಕೆಟ್ ಜಯ, 2ನೇ ಟೆಸ್ಟ್‌ನಲ್ಲಿ 279 ರನ್ ಗೆಲುವು ದಾಖಲಿಸಿದ್ದ ಭಾರತ, 3ನೇ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಮೊದಲನೇ ಟೆಸ್ಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಕಪಿಲ್ ದೇವ್, ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಜಯಿಸಿದ್ದರು.

Story first published: Thursday, June 11, 2020, 9:59 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X