ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಹಿಟ್‌ಮ್ಯಾನ್‌' ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಚಚ್ಚಿದ್ದು ಇದೇದಿನ

On This Day: Rohit Sharma made a 35 ball Hundred against Sri Lanka in Indore

ನವದೆಹಲಿ: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರು ಸ್ಥಿರ ಬ್ಯಾಟಿಂಗ್‌ ವಿಚಾರದಲ್ಲಿ ಕೊಂಚ ಹಿಂದಿದ್ದಾರೋ ಏನೋ. ಆದರೆ ರೋಹಿತ್ ಕ್ರೀಸಿಗಂಟಿ ನಿಂತರೆ ಅಪಾಯಕಾರಿ ಆಗಬಲ್ಲರು. ಸ್ಫೋಟಕ ಬ್ಯಾಟಿಂಗ್‌ ಶಕ್ತಿ ರೋಹಿತ್ ಶರ್ಮಾ ಅವರಲ್ಲಿದೆ. ಅನೇಕ ಪಂದ್ಯಗಳಲ್ಲಿ ಶರ್ಮಾ ಬಿರುಸಿನ ಬ್ಯಾಟಿಂಗ್‌ ನಡೆಸಿದ್ದಿದೆ.

ಭಾರತ vs ಆಸ್ಟ್ರೇಲಿಯಾ: ಟೀಕಾಕಾರರಿಗೆ ತಿರುಗೇಟು ನೀಡಿದ ಪೃಥ್ವಿ ಶಾಭಾರತ vs ಆಸ್ಟ್ರೇಲಿಯಾ: ಟೀಕಾಕಾರರಿಗೆ ತಿರುಗೇಟು ನೀಡಿದ ಪೃಥ್ವಿ ಶಾ

ಡಿಸೆಂಬರ್ 22ರ ಇದೇ ದಿನ ರೋಹಿತ್ ಶರ್ಮಾ ಸ್ಫೋಟಕ ಶತಕ ಬಾರಿಸಿದ್ದರು. 2017 ಡಿಸೆಂಬರ್ 22ರಂದು ಇಂದೋರ್‌ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ರೋಹಿತ್ ಕೇವಲ 35 ಎಸೆತಗಳಲ್ಲಿ 100 ರನ್ ಬಾರಿಸಿದ್ದರು.

ಆವತ್ತು ಶರ್ಮಾ ಒಟ್ಟಾರೆ 43 ಎಸೆತಗಳಲ್ಲಿ 118 ರನ್ ಬಾರಿಸಿದ್ದರು. ಇದರಲ್ಲಿ 4 ಫೋರ್ಸ್, 10 ಸಿಕ್ಸರ್‌ಗಳು ಸೇರಿದ್ದವು. ಅಂದಿನ ಪಂದ್ಯದಲ್ಲಿ ಶರ್ಮಾ ಜೊತೆ ಆರಂಭಿಕರಾಗಿ ಬಂದಿದ್ದ ಮತ್ತೊಬ್ಬ ಬ್ಯಾಟ್ಸ್‌ಮನ್‌ ಕೆಎಲ್ ರಾಹುಲ್ ಕೂಡ ಸ್ಫೋಟಕ ಅರ್ಧ ಶತಕ ಸಿಡಿಸಿದ್ದರು.

2020ರ ಐಪಿಎಲ್‌ನ ಪ್ರಮುಖ ಸಂಗತಿಗಳು, ಇಣುಕು ನೋಟಗಳು2020ರ ಐಪಿಎಲ್‌ನ ಪ್ರಮುಖ ಸಂಗತಿಗಳು, ಇಣುಕು ನೋಟಗಳು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಭಾರತ, ರೋಹಿತ್ ಶರ್ಮಾ 118, ಕೆಎಲ್ ರಾಹುಲ್ 89 (49 ಎಸೆತ), ಎಂಎಸ್ ಧೋನಿ 28, ಹಾರ್ದಿಕ್ ಪಾಂಡ್ಯ 10 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 260 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಶ್ರೀಲಂಕಾ, 17.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 172 ರನ್ ಬಾರಿಸಿ ಶರಣಾಯಿತು.

Story first published: Tuesday, December 22, 2020, 11:05 [IST]
Other articles published on Dec 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X