ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಏಕದಿನ ವಿಶ್ವದಾಖಲೆಯ ರನ್ ಸಿಡಿಸಿದ್ದು ನ.13ರ ಇದೇ ದಿನ!

Rohit Sharma created history on the same day 5 years back | Oneindia Kannada
On this day, Rohit Sharma scored highest individual score in ODIs

ಕೋಲ್ಕತ್ತಾ, ನವೆಂಬರ್ 13: ಟೀಮ್ ಇಂಡಿಯಾದ ಉಪನಾಯಕ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಏಕದಿನದಲ್ಲಿ ವಿಶ್ವದಾಖಲೆಯ ಅತ್ಯಧಿಕ ವೈಯಕ್ತಿಕ ರನ್ ಸಿಡಿಸಿದ್ದು ನವೆಂಬರ್ 13ರ ಇದೇ ದಿನ. 2014ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ, ಶ್ರೀಲಂಕಾ ವಿರುದ್ಧದ 4ನೇ ಏಕದಿನದಲ್ಲಿ ರೋಹಿತ್ ಇತಿಹಾಸ ನಿರ್ಮಿಸಿದ್ದರು.

ಮೊದಲ ಟೆಸ್ಟ್‌ಗೂ ಮುನ್ನವೇ ಬಾಂಗ್ಲಾ ಬೌಲರ್‌ಗಳು ಬೆದರಿದ್ದು ಯಾಕೆ?ಮೊದಲ ಟೆಸ್ಟ್‌ಗೂ ಮುನ್ನವೇ ಬಾಂಗ್ಲಾ ಬೌಲರ್‌ಗಳು ಬೆದರಿದ್ದು ಯಾಕೆ?

ರೋಹಿತ್ ಅವರಿಂದ ಸೃಷ್ಟಿಯಾದ ಆ ಸ್ಫೋಟಕ ಬ್ಯಾಟಿಂಗ್ ದಾಖಲೆಗೆ ಇಂದಿಗೆ 5 ವರ್ಷಗಳಾಗುತ್ತಿವೆ. ಇಂದಿಗೂ ಆ ದಾಖಲೆ ಮುರಿಯಲಾಗಿಲ್ಲ. ಅಂದಿನ ಪಂದ್ಯದಲ್ಲಿ 173 ಎಸೆತಗಳನ್ನು ಎದುರಿಸಿದ್ದ ಶರ್ಮಾ, 264 ರನ್ ಚಚ್ಚಿದ್ದರು. ಇದರಲ್ಲಿ 33 ಫೋರ್‌ಗಳು, 9 ಸಿಕ್ಸರ್‌ಗಳು ಸೇರಿದ್ದವು.

ಮದುವೆಗೆ ಒಪ್ಪಲಿಲ್ಲವೆಂದು ಟೇಕ್ವಾಂಡೋ ಆಟಗಾರ್ತಿಗೆ ಗುಂಡಿಕ್ಕಿದ ಕೋಚ್!ಮದುವೆಗೆ ಒಪ್ಪಲಿಲ್ಲವೆಂದು ಟೇಕ್ವಾಂಡೋ ಆಟಗಾರ್ತಿಗೆ ಗುಂಡಿಕ್ಕಿದ ಕೋಚ್!

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ಅಂದು, ಆರಂಭಿಕ ಆಟಗಾರ ಅಜಿಂಕ್ಯ ರಹಾನೆ 28, ರೋಹಿತ್ 264, ನಾಯಕ ವಿರಾಟ್ ಕೊಹ್ಲಿ 66, ಸುರೇಶ್ ರೈನಾ 11, ರಾಬಿನ್ ಉತ್ತಪ್ಪ 16 ರನ್‌ನೊಂದಿಗೆ 50 ಓವರ್‌ಗೆ 5 ವಿಕೆಟ್ ಕಳೆದು 404 ರನ್ ಮಾಡಿತ್ತು.

ಗುರಿ ಬೆನ್ನತ್ತಿದ್ದ ಶ್ರೀಲಂಕಾ, ತಿಲಕರತ್ನೆ ದಿಲ್ಶನ್ 34, ನಾಯಕ ಏಂಜಲೋ ಮ್ಯಾಥ್ಯೂಸ್ 75, ಲಹಿರು ತಿರುಮನ್ನೆ 59, ತಿಸೆರ ಪೆರೆರ 29 ರನ್‌ ಬೆಂಬಲದೊಂದಿಗೆ 43.1 ಓವರ್‌ಗೆ ಸರ್ವ ಪತನ ಕಂಡು 251 ರನ್ ಪೇರಿಸಿ ಶರಣಾಗಿತ್ತು. ಭಾರತದ ಸ್ಟುವರ್ಟ್ ಬಿನ್ನಿ 2, ಉಮೇಶ್ ಯಾದವ್ 2, ಧವಲ್ ಕುಲಕರ್ಣಿ 4, ಅಕ್ಸರ್ ಪಟೇಲ್ 2 ವಿಕೆಟ್ ಪಡೆದು ಪ್ರವಾಸಿಗರನ್ನು ಕಾಡಿದ್ದರು.

Story first published: Wednesday, November 13, 2019, 10:55 [IST]
Other articles published on Nov 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X