ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಕ್ರಿಕೆಟ್ ದೇವರು' ಸಚಿನ್ ಅಂತಾರಾಷ್ಟ್ರೀಯ ಆಟ ನಿಲ್ಲಿಸಿದ ದಿನವಿದು

On This Day: Sachin Tendulkar ends his long international career

ಬೆಂಗಳೂರು: ಭಾರತದ ಕ್ರಿಕೆಟ್ ದಂತಕತೆ, 'ಕ್ರಿಕೆಟ್ ದೇವರು' ಎಂದು ಕರೆಯಲ್ಪಡುತ್ತಿದ್ದ ಭಾರತದ ಹೆಮ್ಮೆ ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಲ್ಲಿಸಿ ನವೆಂಬರ್ 16ಕ್ಕೆ 31 ವರ್ಷಗಳು ತುಂಬುತ್ತದೆ. ನವೆಂಬರ್ 16 ವೃತ್ತಿಪರ ಕ್ರಿಕೆಟ್‌ನಿಂದ ಸಚಿನ್ ದೂರ ಸರಿದ ದಿನವಾಗಿದೆ.

ಐಪಿಎಲ್ 2021: ರಣಜಿಗೆ ಮುನ್ನ ಮುಷ್ತಾಕ್ ಅಲಿ ನಡೆಸುವ ಸಾಧ್ಯತೆಐಪಿಎಲ್ 2021: ರಣಜಿಗೆ ಮುನ್ನ ಮುಷ್ತಾಕ್ ಅಲಿ ನಡೆಸುವ ಸಾಧ್ಯತೆ

ಮಾಸ್ಟರ್ ಬ್ಲಾಸ್ಟರ್ ಎಂದು ಖ್ಯಾತರಾಗಿದ್ದ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ನವೆಂಬರ್ 1989ರಲ್ಲಿ ಪಾಕಿಸ್ತಾನದ ವಿರುದ್ಧ. ಕರಾಚಿಯಲ್ಲಿ ನಡೆದಿದ್ದ ಪಾಕಿಸ್ತಾನ-ಭಾರತ ಮೊದಲನೇ ಟೆಸ್ಟ್‌ನಲ್ಲಿ ಸಚಿನ್ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು.

ಪಾದಾರ್ಪಣೆ ವೇಳೆ 6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಸಚಿನ್, ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್ ಬಾರಿಸಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಅವಕಾಶ ಲಭಿಸಿರಲಿಲ್ಲ. ಈ ಪಂದ್ಯದಲ್ಲಿ ಪಾಕಿಸ್ತಾನ 409+305 ರನ್ ಗಳಿಸಿದ್ದರೆ, ಭಾರತ 262+303 ರನ್ ಬಾರಿಸಿ ಪಂದ್ಯ ಡ್ರಾ ಮಾಡಿಕೊಂಡಿತ್ತು.

ಭಾರತ vs ಆಸೀಸ್: ಅಡಿಲೇಡ್‌ನಲ್ಲಿ ಕೊರೊನಾ ಭೀತಿ, ಪೈನ್ ಕ್ವಾರಂಟೈನ್ಭಾರತ vs ಆಸೀಸ್: ಅಡಿಲೇಡ್‌ನಲ್ಲಿ ಕೊರೊನಾ ಭೀತಿ, ಪೈನ್ ಕ್ವಾರಂಟೈನ್

ತೆಂಡೂಲ್ಕರ್ ವೃತ್ತಿ ಬದುಕಿನ ಕಡೇ ಪಂದ್ಯ ಆಡಿದ್ದು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ನವೆಂಬರ್‌ 14ರಿಂದ 18ರ ವರೆಗೆ ನಡೆದಿದ್ದ ಈ ಪಂದ್ಯದಲ್ಲಿ ಸಚಿನ್ ನವೆಂಬರ್ 16ರಂದು ಭಾರತ ಪರ ಬ್ಯಾಟಿಂಗ್ ಮಾಡಿ 74 ರನ್ ಬಾರಿಸಿ ವೃತ್ತಿ ಜೀವನದ ಕೊನೇ ಇನ್ನಿಂಗ್ಸ್‌ ಮುಗಿಸಿದ್ದರು. ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಸಹಿತ 126 ರನ್‌ ಜಯ ಗಳಿಸಿತ್ತು.

Story first published: Monday, November 16, 2020, 13:48 [IST]
Other articles published on Nov 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X