ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಕ್ರಿಕೆಟ್ ದೇವರು' ಆರಂಭಿಕರಾಗಿ ಚೊಚ್ಚಲ ಇನ್ನಿಂಗ್ಸ್‌ ಆಡಿದ್ದು ಇದೇ ದಿನ

On This Day: Sachin Tendulkar opened the innings in the ODIs for the first time

ನವದೆಹಲಿ: 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್‌ ವಿಶ್ವ ಕ್ರಿಕೆಟ್‌ನಲ್ಲಿ ಭಾರತ ದೇಶ ಎತ್ತರದಲ್ಲಿ ಮಿನುಗುವಂತೆ ನೋಡಿಕೊಂಡವರು. ಅನೇಕ ದಾಖಲೆಗಳು ಈಗಲೂ ಸಚಿನ್ ಹೆಸರಿನಲ್ಲಿ ಉಳಿದುಕೊಂಡಿದೆ. ಭಾರತ ಪರ ಆರಂಭಿಕರಾಗಿ ಆಡುತ್ತಿದ್ದ ಸಚಿನ್, ಬೆಸ್ಟ್ ಓಪನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು ಕೂಡ.

ಗ್ರೇಮ್‌ಸ್ಮಿತ್ ದಾಖಲೆ ಸರಿಗಟ್ಟಿದ ಭಾರತದ ನಾಯಕ ವಿರಾಟ್ ಕೊಹ್ಲಿಗ್ರೇಮ್‌ಸ್ಮಿತ್ ದಾಖಲೆ ಸರಿಗಟ್ಟಿದ ಭಾರತದ ನಾಯಕ ವಿರಾಟ್ ಕೊಹ್ಲಿ

ಭಾರತದ ಪರ ಆರಂಭಿಕರಾಗಿ ಮಾಜಿ ನಾಯಕ ಸೌರವ್ ಗಂಗೂಲಿಯೋ ಅಥವಾ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗೋ ಸಚಿನ್ ಇಳಿಯುತ್ತಾರೆಂದರೆ ಮುಗೀತು, ಭಾರತವನ್ನು ಗೆಲುವಿನೊಡೆಗೆ ತಂದು ನಿಲ್ಲಿಸುತ್ತಿತ್ತು ಈ ಜೋಡಿ. ಆದರೆ ಸಚಿನ್ ಆರಂಭದಿಂದಲೇ ಆರಂಭಿಕ ಬ್ಯಾಟ್ಸ್‌ಮನ್‌ ಆಗಿರಲಿಲ್ಲ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಕೊರೊನಾ ಪಾಸಿಟಿವ್!ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಕೊರೊನಾ ಪಾಸಿಟಿವ್!

ಸಚಿನ್ ತೆಂಡೂಲ್ಕರ್ ವೃತ್ತಿ ಬದುಕಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಬಾರಿಗೆ ಆರಂಭಿಕರಾಗಿ ಇನ್ನಿಂಗ್ಸ್‌ ಆಡಿದ್ದು 1994ರಲ್ಲಿ ನ್ಯೂಜಿಲೆಂಡ್ ವಿರುದ್ಧ. ನ್ಯೂಜಿಲೆಂಡ್‌ಗೆ ಪ್ರವಾಸ ಹೋಗಿದ್ದ ಭಾರತ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಆಡಿದ್ದ ದ್ವಿತೀಯ ಏಕದಿನ ಪಂದ್ಯವದು. ಮಾರ್ಚ್ 27ರ ಇದೇ ದಿನ ಆ ಪಂದ್ಯ ನಡೆದಿತ್ತು.

ಆವತ್ತು ಮೊದಲ ಬಾರಿಗೆ ಏಕದಿನದಲ್ಲಿ ಆರಂಭಿಕರಾಗಿ ಇನ್ನಿಂಗ್ಸ್‌ ಆಡಿದ್ದ ಸಚಿನ್‌ 49 ಎಸೆತಗಳಲ್ಲಿ 82 ರನ್ ಬಾರಿಸಿದ್ದರು. ಇದರಲ್ಲಿ 15 ಫೋರ್ಸ್, 2 ಸಿಕ್ಸರ್ ಸೇರಿತ್ತು. ಈ ಪಂದ್ಯದಲ್ಲಿ ಭಾರತ ಇನ್ನೂ 160 ಎಸೆತಗಳು ಬಾಕಿಯಿರುವಾಗಲೇ 7 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿತ್ತು. ಆವತ್ತು ತಂಡದ ಪರ ಗಮನಾರ್ಹ ಹೋರಾಟ ನಡೆಸಿದ್ದು ಸಚಿನ್ ಒಬ್ಬರೇ. ಈ ವಿಶೇಷ ದಿನವನ್ನು ಬಿಸಿಸಿಐ ಸ್ಮರಿಸಿ ಟ್ವೀಟ್‌ ಮಾಡಿದೆ.

Story first published: Saturday, March 27, 2021, 12:35 [IST]
Other articles published on Mar 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X