ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಗಂಗೂಲಿ-ದ್ರಾವಿಡ್ ಸ್ಫೋಟಕ ಶತಕ ಬಾರಿಸಿದ್ದು ಇದೇ ದಿನ!

On this day: Sourav Ganguly, Rahul Dravid formed 318-run stand against Sri Lanka

ನವದೆಹಲಿ: ಸುಮಾರು 22 ವರ್ಷಗಳ ಹಿಂದೆ ಇದೇ ದಿನ ವಿಶ್ವಕಪ್‌ ಪಂದ್ಯವೊಂದರಲ್ಲಿ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಸ್ಫೋಟಕ ಶತಕ ಬಾರಿಸಿ ಭಾರತ ತಂಡವನ್ನು ಭರ್ಜರಿ ರನ್‌ಗಳಿಂದ ಗೆಲ್ಲಿಸಿದ್ದರು. ಶ್ರೀಲಂಕಾ ವಿರುದ್ಧ 1999ರಲ್ಲಿ ನಡೆದಿದ್ದ 50 ಓವರ್‌ಗಳ ವಿಶ್ವಕಪ್‌ ಪಂದ್ಯದಲ್ಲಿ ಗಂಗೂಲಿ-ದ್ರಾವಿಡ್ ಇಬ್ಬರೂ 318 ರನ್‌ಗಳ ಕೊಡುಗೆ ನೀಡಿದ್ದರು. ಇಬ್ಬರ ಅದ್ಭುತ ಜೊತೆಯಾಟದೊಂದಿಗೆ ಭಾರತ ಪಂದ್ಯವನ್ನು 150+ ರನ್‌ಗಳಿಂದ ಗೆದ್ದಿತ್ತು.

ವಾಸಿಮ್ ಜಾಫರ್ ಈ ತಮಾಷೆಯ ಮೀಮ್‌ ಹಿಂದೆ ಗಂಭೀರ ಕತೆಯಿದೆ!ವಾಸಿಮ್ ಜಾಫರ್ ಈ ತಮಾಷೆಯ ಮೀಮ್‌ ಹಿಂದೆ ಗಂಭೀರ ಕತೆಯಿದೆ!

ಇಂಗ್ಲೆಂಡ್‌ನ ಟೌನ್‌ಟೌನ್‌ನಲ್ಲಿ ನಡೆದಿದ್ದ ವಿಶ್ವಕಪ್‌ 21ನೇ ಪಂದ್ಯದಲ್ಲಿ ಭಾರತೀಯರ ಪರ ಹೋರಾಟ ನಡೆಸಿದ್ದು ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಇಬ್ಬರೇ. ತಂಡದ ಗೆಲುವಿಗೆ ಶತಕದ ಕೊಡುಗೆ ನೀಡಿದ್ದ ಇಬ್ಬರ ಆಟ ಸ್ಮರಿಸಿ ಐಸಿಸಿ ಟ್ವೀಟ್ ಮಾಡಿದೆ.

ಸೌರವ್-ದ್ರಾವಿಡ್ ಸ್ಫೋಟಕ ಶತಕ

ಸೌರವ್-ದ್ರಾವಿಡ್ ಸ್ಫೋಟಕ ಶತಕ

1999ರ ಏಕದಿನ ವಿಶ್ವಕಪ್‌ನಲ್ಲಿ ಮೇ 26 ಇದೇ ದಿನ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಸೌರವ್ ಗಂಗೂಲಿ 158 ಎಸೆತಗಳಲ್ಲಿ 183 ರನ್ ಬಾರಿಸಿದ್ದರು. ಇದರಲ್ಲಿ 17 ಫೋರ್ಸ್, 7 ಸಿಕ್ಸರ್ ಸೇರಿತ್ತು. 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ರಾಹುಲ್ ದ್ರಾವಿಡ್ 129 ಎಸೆತಗಳಲ್ಲಿ 145 ರನ್ ಬಾರಿಸಿದ್ದರು. ಇದರಲ್ಲಿ 17 ಫೋರ್ಸ್, 1 ಸಿಕ್ಸರ್ ಸೇರಿತ್ತು. ಇಬ್ಬರು ಒಟ್ಟಿಗೆ 318ರನ್ ಕೊಡುಗೆ ನೀಡಿದ್ದರು. ಇದು ಐಸಿಸಿ ವಿಶ್ವಕಪ್‌ನಲ್ಲಿ ಎರಡನೇ ಅತ್ಯಧಿಕ ಜೊತೆಯಾಟವಾಗಿ ಗುರುತಿಸಿಕೊಂಡಿದೆ.

ಪಂದ್ಯದ ಸ್ಕೋರ್‌/ಫಲಿತಾಂಶ

ಪಂದ್ಯದ ಸ್ಕೋರ್‌/ಫಲಿತಾಂಶ

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಸಡಗೋಪನ್ ರಮೇಶ್ 5, ಗಂಗೂಲಿ 183, ದ್ರಾವಿಡ್ 145, ಸಚಿನ್ ತೆಂಡೂಲ್ಕರ್ 2, ಅಝರುದ್ದೀನ್ 12 ರನ್‌ನೊಂದಿಗೆ 50 ಓವರ್‌ಗೆ 6 ವಿಕೆಟ್ ಕಳೆದು 373 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಶ್ರೀಲಂಕಾ ಮಾರ್ವನ್ ಅತಪಟು 29, ಅರವಿಂದ ಡೆ ಸಿಲ್ವಾ 56, ಅರ್ಜುನ ರಣತುಂಗ 42, ರೋಶನ್ ಮಹಾನಮ 32 ರನ್‌ನೊಂದಿಗೆ 42.3ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 216 ರನ್ ಬಾರಿಸಿ 157 ರನ್‌ನಿಂದ ತಲೆ ಬಾಗಿತ್ತು (ಚಿತ್ರದಲ್ಲಿ ರಾಬಿನ್ ಸಿಂಗ್).

ರಾಬಿನ್ ಮಾರಕ ಬೌಲಿಂಗ್

ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಮಧ್ಯಮ ವೇಗಿ ರಾಬಿನ್ ಸಿಂಗ್ ಮಾರಕ ಬೌಲಿಂಗ್ ದಾಳಿ ನಡೆಸಿದ್ದರು. 9.3 ಓವರ್ ಎಸೆದಿದ್ದ ರಾಬಿನ್ 31 ರನ್‌ ನೀಡಿ 5 ವಿಕೆಟ್ ಮುರಿದಿದ್ದರು. ಆವತ್ತು ಭಾರತ ತಂಡದ ಅಭೂತಪೂರ್ವ ಗೆಲುವಿಗೆ ಕಾರಣರಾದ ದ್ರಾವಿಡ್, ಗಂಗೂಲಿ ಬ್ಯಾಟಿಂಗ್ ಸ್ಮರಿಸಿ ಐಸಿಸಿ ಟ್ವಿಟರ್‌ನಲ್ಲಿ ವಿಡಿಯೋ ಹಾಕಿಕೊಂಡಿದೆ.

Story first published: Wednesday, May 26, 2021, 18:36 [IST]
Other articles published on May 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X