ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಪರ ಸುರೇಶ್ ರೈನಾ ಇತಿಹಾಸ ನಿರ್ಮಿಸಿದ ದಿನವಿದು

On this day: Suresh Raina created history for India

ಬೆಂಗಳೂರು, ಮೇ 2: ಟೀಮ್ ಇಂಡಿಯಾದ ಡೈನಮಿಕ್ ಆಟಗಾರ ಆಗಿದ್ದವರು ಸುರೇಶ್ ರೈನಾ. ಬ್ಯಾಟಿಂಗ್, ಫೀಲ್ಡಿಂಗ್ ಎರಡರಲ್ಲೂ ಗಮನ ಸೆಳೆಯುತ್ತಿದ್ದ ರೈನಾ ಸುಮಾರು 10 ವರ್ಷಗಳ ಹಿಂದೆ ಇದೇ ದಿನ ಭಾರತೀಯರ ಪರ ವಿಶೇಷ ದಾಖಲೆ ನಿರ್ಮಿಸಿದ್ದರು. ಭಾರತ ತಂಡದಲ್ಲಿ ಮಧ್ಯಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುತ್ತಿದ್ದ ಅಗ್ರೆಸಿವ್ ಬ್ಯಾಟ್ಸ್‌ಮನ್ ಸುರೇಶ್, ಆವತ್ತು ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದರು.

ಐಪಿಎಲ್ ನಡೆಯುತ್ತೋ, ನಡೆಯಲ್ವಾ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ!ಐಪಿಎಲ್ ನಡೆಯುತ್ತೋ, ನಡೆಯಲ್ವಾ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ!

ಈ ದಿನಗಳಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕನ್ನಡಿಗ ಕೆಎಲ್ ರಾಹುಲ್ ಇಂಥ ಆಟಗಾರರು ವಿಶ್ವ ಕ್ರಿಕೆಟ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ ಮೆರೆದ ಮೊದಲ ಭಾರತೀಯನಾಗಿ ರೈನಾ ವಿಶ್ವದ ಚಿತ್ತ ತನ್ನತ್ತ ಹರಿಸಿಕೊಂಡಿದ್ದರು.

T20 Ranking: ಪಾಕ್‌ನಿಂದ ನಂ.1 ಸ್ಥಾನ ಕಸಿದು ದಾಖಲೆ ಬರೆದ ಆಸೀಸ್!T20 Ranking: ಪಾಕ್‌ನಿಂದ ನಂ.1 ಸ್ಥಾನ ಕಸಿದು ದಾಖಲೆ ಬರೆದ ಆಸೀಸ್!

ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಆವತ್ತು ನಿರ್ಮಿಸಿದ ದಾಖಲೆ, ಪಂದ್ಯದ ವಿವರ, ಚಿತ್ರಣ ಇಲ್ಲಿದೆ.

10 ವರ್ಷಗಳ ಹಿಂದಿನ ದಾಖಲೆ

10 ವರ್ಷಗಳ ಹಿಂದಿನ ದಾಖಲೆ

ಸುರೇಶ್ ರೈನಾ ಇತಿಹಾಸ ನಿರ್ಮಿಸಿದ್ದು 2 ಮೇ 2010ರ ಇದೇ ದಿನ. ಆವತ್ತು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 5ನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸ್ಯಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು.

ಚೊಚ್ಚಲ ಭಾರತೀಯ ಆಟಗಾರ

ಚೊಚ್ಚಲ ಭಾರತೀಯ ಆಟಗಾರ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯನಾಗಿ ಸುರೇಶ್ ರೈನಾ ಆವತ್ತು ದಾಖಲೆ ಬರೆದಿದ್ದರು. ಅದೂ ಕೇವಲ 60 ಎಸೆಗಳಲ್ಲಿ ರೈನಾ 101 ರನ್ ಸಿಡಿಸಿದ್ದರು. ಈ ವೇಳೆ 9 ಬೌಂಡರಿ, 5 ಸಿಕ್ಸರ್‌ಗಳು ಸುರೇಶ್ ಬ್ಯಾಟಿಂದ ಸಿಡಿದಿತ್ತು.

ರೈನಾ ಒಬ್ಬರೇ ಆಡಿದ್ದು

ರೈನಾ ಒಬ್ಬರೇ ಆಡಿದ್ದು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಪರ ಆವತ್ತು ದಿಟ್ಟ ಬ್ಯಾಟಿಂಗ್ ಮಾಡಿದ್ದು ರೈನಾ ಮಾತ್ರ. ಇನ್ನು ದಿನೇಶ್ ಕಾರ್ತಿಕ್ 16, ರೈನಾ 101, ಯುವರಾಜ್ ಸಿಂಗ್ 37, ಯೂಸುಫ್ ಪಠಾಣ್ 11, ಎಂಎಸ್ ಧೋನಿ 16 ರನ್ ಸೇರಿಸಿದ್ದರು. ಭಾರತ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 186 ರನ್ ಮಾಡಿತ್ತು.

ಗೆದ್ದು ಬೀಗಿದ್ದ ಭಾರತ

ಗೆದ್ದು ಬೀಗಿದ್ದ ಭಾರತ

ರೈನಾ ಬ್ಯಾಟಿಂಗ್ ಬಲದಿಂದಾಗಿ ಆವತ್ತು ಧೋನಿ ನಾಯಕತ್ವದ ಭಾರತ ತಂಡ ಗೆದ್ದು ಬೀಗಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಪ್ರಿಕಾ ತಂಡ, ಜಾಕ್ ಕ್ಯಾಲೀಸ್ 73, ಗ್ರೇಮ್ ಸ್ಮಿತ್ 36, ಎಬಿ ಡಿ ವಿಲಿಯರ್ಸ್ 36 ರನ್ ಕೊಡುಗೆಯೊಂದಿಗೆ 20 ಓವರ್‌ ಮುಕ್ತಾಯಕ್ಕೆ 5 ವಿಕೆಟ್ ಕಳೆದು 172 ರನ್ ಬಾರಿಸಿ 14ರನ್‌ನಿಂದ ಸೋತಿತ್ತು. ಸುರೇಶ್ ರೈನಾ ಪಂದ್ಯಶ್ರೇಷ್ಠರೆನಿಸಿದ್ದರು.

Story first published: Saturday, May 2, 2020, 14:10 [IST]
Other articles published on May 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X