ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅವಿಸ್ಮರಣೀಯ ನ್ಯಾಟ್‌ವೆಸ್ಟ್ ಫೈನಲ್ ಗೆಲುವಿನ ಸಂಭ್ರಮಕ್ಕೆ ಇಂದಿಗೆ 18 ವರ್ಷ

On this day: Team India won their memorable victory in Natwest Series final

ನವದೆಹಲಿ, ಜುಲೈ 13: ಕ್ರಿಕೆಟ್ ಇತಿಹಾಸದಲ್ಲಿ ಭಾರತ ಕ್ರಿಕೆಟ್ ತಂಡ ಅನೇಕ ಅವಿಸ್ಮರಣೀಯ ಗೆಲುವುಗಳನ್ನು ಕಂಡಿದೆ. ಅವುಗಳಲ್ಲಿ ನ್ಯಾಟ್ಸ್‌ವೆಸ್ಟ್ ಸರಣಿಯ ಫೈನಲ್‌ನಲ್ಲಿ ಭಾರತ ಗೆದ್ದಿತ್ತಲ್ಲ? ಆ ಜಯ ಭಾರತೀಯರ ಪಾಲಿಗೆ ಇನ್ನೂ ಸ್ಪೆಶಲ್. 18 ವರ್ಷಗಳ ಹಿಂದೆ ಜುಲೈ 13ರ ಇದೇ ದಿನ ಭಾರತ, ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವನ್ನಾಚರಿಸಿತ್ತು (ಸ್ಟೋರಿ ಕೆಳಗೆ ವೀಡಿಯೋ ಕೂಡ ಇದೆ).

12ರ ಹರೆಯದ ಬಾಲಕನ ಬಂಧನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜೋಫ್ರಾ ಆರ್ಚರ್12ರ ಹರೆಯದ ಬಾಲಕನ ಬಂಧನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜೋಫ್ರಾ ಆರ್ಚರ್

ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಸೌರವ್ ಗಂಗೂಲಿ ನಾಯಕತ್ವದ ಭಾರತ ತಂಡ ಅಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ನ್ಯಾಟ್‌ವೆಸ್ಟ್ ತ್ರಿಕೋನ ಸರಣಿಯಲ್ಲಿ ಪಾಲ್ಗೊಂಡಿತ್ತು. ಸರಣಿಯ ಫೈನಲ್ ಪಂದ್ಯ ನಡೆದಿದ್ದು 2002ರ ಜುಲೈ 13ರಂದು ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ. ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ ಮತ್ತು ಭಾರತ ಕಾದಾಡಿದ್ದವು.

On this day: Team India won their memorable victory in Natwest Series final

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳುಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡ, ಮಾರ್ಕಸ್ ಟ್ರೆಸ್ಕೊಥಿಕ್ 109, ನಾಯಕ ನಾಸೆರ್ ಹುಸೇನ್ 115 ರನ್‌ ಸೇರ್ಪಡೆಯೊಂದಿಗೆ 50 ಓವರ್‌ನಲ್ಲಿ 5 ವಿಕೆಟ್ ನಷ್ಟದಲ್ಲಿ 325 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ್ದ ಭಾರತ, ವೀರೇಂದ್ರ ಸೆಹ್ವಾಗ್ 45, ಸೌರವ್ ಗಂಗೂಲಿ 60, ಯುವರಾಜ್ ಸಿಂಗ್ 69, ಮೊಹಮ್ಮದ್ ಕೈಫ್ ಅಜೇಯ 87 ರನ್‌ನೊಂದಿಗೆ 49.3 ಓವರ್‌ನಲ್ಲಿ 8 ವಿಕೆಟ್ ಕಳೆದು 326 ರನ್ ಪೇರಿಸಿತ್ತು.

ಇಂಗ್ಲೆಂಡ್‌ ನೀಡಿದ್ದ 325 ರನ್ ಗುರಿಯನ್ನು ಭಾರತ ತಲುಪುತ್ತಲೇ ಈಗ ಬಿಸಿಸಿಐ ಅಧ್ಯಕ್ಷರಾಗಿರುವ, ಆಗಿನ ನಾಯಕ ಸೌರವ್ ಗಂಗೂಲಿ ಆವತ್ತು ತನ್ನ ಶರ್ಟ್ ಬಿಚ್ಚಿ ಸಂಭ್ರಮಾಚರಿಸಿದ್ದರು. ಭಾರತೀಯರ ಪಾಲಿಗೂ ಆವತ್ತಿನ ರೋಚಕ ಪಂದ್ಯದ ಗೆಲುವು ಅತೀವ ಖುಷಿ ಕೊಟ್ಟಿತ್ತು. ಆದಿನ ಝಹೀರ್ ಖಾನ್ 3 ವಿಕೆಟ್ ಮುರಿದು ಬೌಲಿಂಗ್ ವಿಭಾಗದಲ್ಲಿ ತಂಡವನ್ನು ಬೆಂಬಲಿಸಿದ್ದರು.

Story first published: Monday, July 13, 2020, 15:50 [IST]
Other articles published on Jul 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X