ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

10 ವರ್ಷಗಳ ಹಿಂದಿನ ಸಚಿನ್ ವಿಶ್ವದಾಖಲೆ ಇಂದಿಗೂ ಯಾರೂ ಮುರಿದಿಲ್ಲ!

On this day Tendulkar became the only man to cross that ginormous number

ಮುಂಬೈ, ನವೆಂಬರ್ 20: ಸುಮಾರು 10 ವರ್ಷಗಳಿಗೆ ಹಿಂದೆ ಅಂದರೆ ನವೆಂಬರ್ 20ರ ಇದೇ ದಿನ ಭಾರತದ ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30,000 ರನ್ ಮಾಡಿದ ಮೊದಲ ಆಟಗಾರನಾಗಿ ವಿಶ್ವದಾಖಲೆ ನಿರ್ಮಿಸಿದ್ದರು. ಆ ಟೆಸ್ಟ್ ಪಂದ್ಯ ಅಹ್ಮದಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದಿತ್ತು.

ಕ್ರಿಸ್‌ ಲಿನ್ ಸ್ಫೋಟಕ ಬ್ಯಾಟಿಂಗ್, ಕೆಕೆಆರ್‌ನತ್ತ ಸಿಕ್ಸರ್ ಬೀಸಿದ ಯುವರಾಜ್!ಕ್ರಿಸ್‌ ಲಿನ್ ಸ್ಫೋಟಕ ಬ್ಯಾಟಿಂಗ್, ಕೆಕೆಆರ್‌ನತ್ತ ಸಿಕ್ಸರ್ ಬೀಸಿದ ಯುವರಾಜ್!

ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ, 2009 ನವೆಂಬರ್ 20ರಂದು ಮೊದಲ ಟೆಸ್ಟ್‌ನ ಕೊನೇ ದಿನದಾಟವನ್ನು ಆಡಿತ್ತು. ಈ ವೇಳೆ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸಚಿನ್ ಭರ್ತಿ 100 ರನ್ ಬಾರಿಸಿದ್ದರು. ಅಲ್ಲದೆ ಇದು ತೆಂಡೂಲ್ಕರ್ ಅವರಿಂದ ದಾಖಲಾದ 43ನೇ ಟೆಸ್ಟ್ ಶತಕವಾಗಿತ್ತು. ಈ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್ ದ್ರಾವಿಡ್ 177, ಯುವರಾಜ್ ಸಿಂಗ್ 68, ಎಂಎಸ್ ಧೋನಿ 110 ರನ್‌ನೊಂದಿಗೆ 246 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಗೌತಮ್ ಗಂಭೀರ್ 114, ವೀರೇಂದ್ರ ಸೆಹ್ವಾಗ್ 51, ಸಚಿನ್ ತೆಂಡೂಲ್ಕರ್ 100 ರನ್‌ನೊಂದಿಗೆ 412 ರನ್ ಬಾರಿಸಿತ್ತು. ಲಂಕಾ 760 ರನ್‌ನೊಂದಿಗೆ ಡಿಕ್ಲೇರ್ ಘೋಷಿಸಿತ್ತು.

ಫುಟ್ಬಾಲ್ ದಂತಕತೆ ಫೀಲೆ ಈ ದಾಖಲೆಗೆ ಐವತ್ತು ವರ್ಷಫುಟ್ಬಾಲ್ ದಂತಕತೆ ಫೀಲೆ ಈ ದಾಖಲೆಗೆ ಐವತ್ತು ವರ್ಷ

ಸಚಿನ್ ತನ್ನ ವೃತ್ತಿ ಬದುಕು ಅಂತ್ಯಗೊಳಿಸುವಾಗ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 34,357 ರನ್ ಗಳಿಸಿದ್ದರು. ಇನ್ನು ದ್ವಿತೀಯ ಅತ್ಯಧಿಕ ರನ್ ದಾಖಲೆ ಹೊಂದಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ 28,016 ರನ್ ಮಾಡಿದ್ದಾರೆ. ಕೊಹ್ಲಿ ಹೆಸರಿನಲ್ಲಿ 21,036 ರನ್‌ ಇವೆ. ಅಂದರೆ ಸಚಿನ್ 10 ವರ್ಷಗಳಿಗೆ ಹಿಂದೆ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಇಂದಿಗೂ ಯಾರೂ ಮುರಿದಿಲ್ಲ!

Story first published: Wednesday, November 20, 2019, 11:05 [IST]
Other articles published on Nov 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X