ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ಯಾನ್ಸರ್ ಗೆದ್ದ ಯುವಿ ಭಾರತಕ್ಕೆ ವಿಶ್ವಕಪ್‌ ಪಂದ್ಯ ಗೆಲ್ಲಿಸಿಕೊಟ್ಟಿದ್ದ ದಿನವಿದು!

On this day: Yuvraj Singh overcame illness to win match in 2011 World Cup

ನವದೆಹಲಿ: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅಂದರೇನೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೋಮಾಂಚನದ ಅನುಭವವಾಗುತ್ತದೆ. ಯುವಿ ಟೀಮ್ ಇಂಡಿಯಾಕ್ಕಾಗಿ ಸೆಣಸಾಡಿದ ಸಾಕಷ್ಟು ಕ್ಷಣಗಳಿವೆ. ಯುವಿ ಅಂದ ಕೂಡಲೇ ಇಂಗ್ಲೆಂಡ್ ವಿರುದ್ಧ ಬಾರಿಸಿದ್ದ ಸಿಕ್ಸ್ ಸಿಕ್ಸರ್ ನೆನಪಿಗೆ ಬರುತ್ತದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚಿನ ಕ್ರಿಕೆಟರ್ ಆಗಿದ್ದ ಸಿಂಗ್‌ ಅವರನ್ನು ಕ್ಯಾನ್ಸರ್ ಎಂಬ ಮಹಾಮಾರಿ ಕಾಡಿತ್ತು. ಆದರೂ ಕ್ಯಾನ್ಸರ್ ಗೆದ್ದು ಬಂದಿದ್ದ ಯುವಿ ವಿಶ್ವಕಪ್‌ನಲ್ಲಿ ಭಾರತವನ್ನು ಗೆಲ್ಲಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆಲ್ಲೋದು ಭಾರತವೇ ಎನ್ನುತ್ತಿವೆ ಅಂಕಿ-ಅಂಶಗಳು!ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆಲ್ಲೋದು ಭಾರತವೇ ಎನ್ನುತ್ತಿವೆ ಅಂಕಿ-ಅಂಶಗಳು!

ಕ್ಯಾನ್ಸರ್ ಅನ್ನು ಗೆದ್ದು ಬಂದಿದ್ದ ಪ್ರತಿಭಾನ್ವಿತ ಆಟಗಾರ ಯುವರಾಜ್ ಸಿಂಗ್ ಭಾರತ ತಂಡಕ್ಕಾಗಿ ವಿಶ್ವಕಪ್‌ನಲ್ಲಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಅಂದು ಯುವಿ ಆಲ್ ರೌಂಡರ್ ಆಟ ಆಡಿದ್ದರು. ಪಂದ್ಯ ಮಾತ್ರ ಅಲ್ಲ, ಆವತ್ತು ವಿಶ್ವಕಪ್‌ ಟ್ರೋಫಿಯನ್ನೇ ಭಾರತ ಮೇಲೆತ್ತಿ ಸಂಭ್ರಮಿಸುವಂತೆ ಮಾಡಿದ್ದರು.

ಐಸಿಸಿ ವಿಶ್ವಕಪ್ 42ನೇ ಪಂದ್ಯ

ಐಸಿಸಿ ವಿಶ್ವಕಪ್ 42ನೇ ಪಂದ್ಯ

ಕ್ಯಾನ್ಸರ್ ಖಾಯಿಲೆಯಿಂದ ಚೇತರಿಸಿಕೊಂಡು ಭಾರತ ತಂಡಕ್ಕೆ ಮರಳಿದ್ದ ಯುವರಾಜ್ ಸಿಂಗ್, ಇದೇ ಮಾರ್ಚ್ 20ರಂದು 2011ರ ವಿಶ್ವಕಪ್‌ನಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಶತಕ (113 ರನ್) ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತ ಭರ್ಜರಿ 80 ರನ್‌ಗಳಿಂದ ಗೆದ್ದಿತ್ತು. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ 2011ರ ಐಸಿಸಿ ವಿಶ್ವಕಪ್ 42ನೇ ಪಂದ್ಯವಿದು.

ಕೊಹ್ಲಿ, ಯುವಿ ಭರ್ಜರಿ ಬ್ಯಾಟಿಂಗ್

ಕೊಹ್ಲಿ, ಯುವಿ ಭರ್ಜರಿ ಬ್ಯಾಟಿಂಗ್

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ, ಗೌತಮ್ ಗಂಭೀರ್ 22, ವಿರಾಟ್ ಕೊಹ್ಲಿ 59, ಯುವರಾಜ್ ಸಿಂಗ್ 113, ನಾಯಕ ಎಂಎಸ್ ಧೋನಿ 22 ರನ್ ನೊಂದಿಗೆ 49.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 268 ರನ್ ಬಾರಿಸಿತ್ತು. ವಿಂಡೀಸ್ 43 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 188 ರನ್ ಬಾರಿಸಿ ಶರಣಾಗಿತ್ತು.

ಬೌಲಿಂಗ್‌ನಲ್ಲೂ ಯುವಿ ಮಿಂಚು

ಬೌಲಿಂಗ್‌ನಲ್ಲೂ ಯುವಿ ಮಿಂಚು

ಅಂದಿನ ಭಾರತ-ವೆಸ್ಟ್‌ ಇಂಡೀಸ್ ಪಂದ್ಯದಲ್ಲಿ ವಿಂಡೀಸ್ ಇನ್ನಿಂಗ್ಸ್‌ನಲ್ಲಿ ಝಹೀರ್ ಖಾನ್ 3, ಯುವಿ 2, ಆರ್‌ ಅಶ್ವಿನ್ 2, ಹರ್ಭಜನ್ ಸಿಂಗ್ 1, ಸುರೇಶ್ ರೈನಾ 1 ವಿಕೆಟ್‌ನೊಂದಿಗೆ ಗಮನ ಸೆಳೆದಿದ್ದರು. ಆಲ್ ರೌಂಡರ್ ಪ್ರದರ್ಶನ ನೀಡಿದ್ದ ಯುವಿ ಅಂದು ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡಿದ್ದರು. ಸದ್ಯ ಯುವಿ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ನಲ್ಲಿ ಆಡುತ್ತಿದ್ದಾರೆ. ಮಾರ್ಚ್ 21ರಂದು ಇಂಡಿಯಾ ಲೆಜೆಂಡ್ಸ್‌-ಶ್ರೀಲಂಕಾ ಲೆಜೆಂಡ್ಸ್‌ ಮಧ್ಯೆ ಫೈನಲ್ ಪಂದ್ಯ ನಡೆಯಲಿದೆ. 7 pmಗೆ ಪಂದ್ಯ ಶುರುವಾಗಲಿದೆ.

Story first published: Saturday, March 20, 2021, 17:12 [IST]
Other articles published on Mar 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X