ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿದೇಶಿ ಪ್ರವಾಸ: ಕೊಹ್ಲಿ-ಅನುಷ್ಕಾ ಕೋರಿಕೆಗೆ ಒಪ್ಪಿಗೆ ನೀಡಿದ ಬಿಸಿಸಿಐ

On Virat Kohlis plea, BCCI says WAGs can stay put for entire overseas tour

ನವದೆಹಲಿ, ಅಕ್ಟೋಬರ್ 17: ಅಂತಾರಾಷ್ಟ್ರೀಯ ಪ್ರವಾಸ ಪಂದ್ಯಕ್ಕೆ ತೆರಳುವಾಗ ಮಡದಿಯನ್ನೂ ಕರೆದೊಯ್ಯಲು ಅನುಮತಿ ನೀಡಬೇಕು ಎಂಬ ವಿರಾಟ್ ಕೊಹ್ಲಿ ಕೋರಿಕೆಗೆ ಬಿಸಿಸಿಐ ಒಪ್ಪಿಗೆ ನೀಡಿದೆ. ಆದರೆ ಜೊತೆಗೆ ಷರತ್ತನ್ನೂ ವಿಧಿಸಿ ಪತ್ನಿಯನ್ನು ಜೊತೆಗಿರಿಸಿಕೊಳ್ಳಲು ಅನುಮತಿ ನೀಡಿದೆ.

ವಿಂಡೀಸ್ ವಿರುದ್ಧ ಪೃಥ್ವಿ ಶಾ- ರೋಹಿತ್ ಶರ್ಮ ಆರಂಭಿಕರಾಗಿ ಕಣಕ್ಕೆ?ವಿಂಡೀಸ್ ವಿರುದ್ಧ ಪೃಥ್ವಿ ಶಾ- ರೋಹಿತ್ ಶರ್ಮ ಆರಂಭಿಕರಾಗಿ ಕಣಕ್ಕೆ?

ಕಳೆದು ಸುಮಾರು 15 ದಿನಗಳಿಂದಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಪ್ರವಾಸದ ವೇಳೆ ಪತ್ನಿಯೂ ಜೊತೆಗಿರಲು ಬಿಡುವಂತೆ ಬಿಸಿಸಿಐಯನ್ನು ವಿನಂತಿಸುತ್ತಿದ್ದರು. ಇದಕ್ಕೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ ನಿಂದ ಆರಿಸಲ್ಪಟ್ಟ ಆಡಳಿತ ಸಮಿತಿಯು, ಆಟಗಾರನ ಪತ್ನಿ ಯಾ ಸ್ನೇಹಿತೆ ಪ್ರವಾಸದ ಮೊದಲ 10 ದಿನಗಳ ಬಳಿಕ ಉಳಿದ ದಿನಗಳಲ್ಲಿ ಆಟಗಾರನೊಂದಿಗೆ ಇರಬಹುದು ಎಂಬ ಷರತ್ತಿನೊಂದಿಗೆ ಅನುಮತಿ ನೀಡಿದೆ.

'ಜಂಬೋ' ಕುಂಬ್ಳೆ ಹುಟ್ಟುಹಬ್ಬಕ್ಕೆ ಟಾಪ್ 5 ಕ್ರಿಕೆಟ್ ಕ್ಷಣಗಳು'ಜಂಬೋ' ಕುಂಬ್ಳೆ ಹುಟ್ಟುಹಬ್ಬಕ್ಕೆ ಟಾಪ್ 5 ಕ್ರಿಕೆಟ್ ಕ್ಷಣಗಳು

11 ಡಿಸೆಂಬರ್ 2017ರಂದು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತ್ತು. ಈಗಿನ್ನೂ ದಾಂಪತ್ಯದ ಹೊಸತನದಲ್ಲಿರುವ ಜೋಡಿ ಅಂತಾರಾಷ್ಟ್ರೀಯ ಪ್ರವಾಸ ಪಂದ್ಯಗಳ ವೇಳೆಯೂ ಜೊತೆಗಿರಲು ಬಯಸಿತ್ತು. ಹೀಗಾಗಿ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಯಾ ಅವರನ್ನು ಕರೆದೊಯ್ಯಲು ಅನುಮತಿ ನೀಡುವಂತೆ ಬಿಸಿಸಿಐಯನ್ನು ವಿನಂತಿಸಿಕೊಂಡಿದ್ದರು.

ನಿಯಮವೇನು?

ನಿಯಮವೇನು?

ಬಿಸಿಸಿಐ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಪ್ರವಾಸದ ವೇಳೆ ಆಟಗಾರ ತನ್ನ ಮಡದಿ ಅಥವಾ ಪ್ರೇಯಸಿಯನ್ನು ಎರಡು ವಾರಕ್ಕೂ ಹೆಚ್ಚು ಕಾಲ ಜೊತೆಗಿರಿಸಿಕೊಳ್ಳುವಂತಿಲ್ಲ. ಈ ಬಗ್ಗೆ ಅಸಮಾಧಾನಗೊಂಡಿದ್ದ ಕೊಹ್ಲಿ, ಪ್ರವಾಸದುದ್ದಕ್ಕೂ ಮಡದಿ ತನ್ನ ಜೊತೆಗೆ ಕರೆದೊಯ್ಯಲು ಅನುಮತಿ ನೀಡಬೇಕೆಂದು ಕೇಳಿಕೊಂಡಿದ್ದರು.

ಕೊಹ್ಲಿ-ಜೊತೆ ಅನುಷ್ಕಾ

ಕೊಹ್ಲಿ-ಜೊತೆ ಅನುಷ್ಕಾ

ಕಳೆದ ಕೆಲ ವಾರಗಳಿಂದ ಈ ವಿಚಾರ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಲೇ ಇತ್ತು. ಇತ್ತೀಚಿನ ಎಲ್ಲಾ ಪ್ರವಾಸ ಪಂದ್ಯದ ವೇಳೆಯೂ ಕೊಹ್ಲಿ ಜೊತೆ ಅನುಷ್ಕಾ ಕಾಣಿಸಿಕೊಂಡಿದ್ದರಿಂದ ಈ ವಿಚಾರ ಚರ್ಚೆಗೀಡಾಗಿತ್ತು. ಅಂತೂ ಕೊನೆಗೂ ಕೊಹ್ಲಿ ಮನವಿಗೆ ಬಹುತೇಕ ಸಮ್ಮತಿ ದೊರೆತಂತಾಗಿದೆ.

ಷರತ್ತೂಂದ್ರೆ ಶರತ್ತೆ!

ಷರತ್ತೂಂದ್ರೆ ಶರತ್ತೆ!

ಪ್ರವಾಸದ ಮೊದಲ ಹತ್ತು ದಿನಗಳ ಬಳಿಕ ಅಂದರೆ, ಪ್ರವಾಸ ಪ್ರಾರಂಭಗೊಂಡ ನಂತರದ ಮೊದಲ ಹತ್ತು ದಿನಗಳವರೆಗೆ ಆಟಗಾರನ ಪ್ರೇಯಸಿ ಅಥವಾ ಮಡದಿ ಕಾಯಲೇಬೇಕು. ಪ್ರವಾಸ ಆರಂಭಕ್ಕೂ ಮೊದಲಿನ ದಿನಗಳನ್ನು '10'ರಲ್ಲಿ ಸೇರಿಸಿ ವಿದೇಶಕ್ಕೆ ಹಾರುವಂತಿಲ್ಲ!

ಆಸ್ಟ್ರೇಲಿಯಾದಲ್ಲೂ ಇಂಥದ್ದೇ ನಿಯಮ

ಆಸ್ಟ್ರೇಲಿಯಾದಲ್ಲೂ ಇಂಥದ್ದೇ ನಿಯಮ

ಆಸ್ಟ್ರೇಲಿಯಾದಲ್ಲೂ ಇಂಥದ್ದೇ ನಿಯಮ ಜಾರಿಗೆ ತರಲಾಗಿತ್ತು. ಆಟಗಾರರ ಜೊತೆ ಪತ್ನಿ ಅಥವಾ ಸ್ನೇಹಿತೆಯ ಉಪಸ್ಥಿತಿ ಆಸೀಸ್ ಸೀರೀಸ್ ನಲ್ಲಿ ತಂಡದ ಹಿನ್ನಡೆಗೆ ಕಾರಣ ಎಂದು ಗೊತ್ತಾದ ಬಳಕವೂ 2015ರಲ್ಲಿ ಸಿಇಒ ಜೇಮ್ಸ್ ಸುದರ್ಲ್ಯಾಂಡ್ ಆಟಗಾರರ ಜೊತೆ ಪತ್ನಿ ಯಾ ಪ್ರೇಯಸಿ ಜೊತೆಗಿರಲು ಅನುಮತಿ ನೀಡಿದ್ದರು.

ಏಕಾಗ್ರತೆಯ ಕೊರತೆ

ಏಕಾಗ್ರತೆಯ ಕೊರತೆ

ಪ್ರವಾಸ ಪಂದ್ಯಗಳ ವೇಳೆ ಆಟಗಾರರ ಜೊತೆ ಪತ್ನಿ ಅಥವಾ ಪ್ರೇಯಸಿ ಜೊತೆಗಿರಿಸಿಕೊಳ್ಳುವುದರ ಬಗ್ಗೆ ಯಾಕೆ ನಿರ್ಬಂಧವಿದೆಯೆಂದರೆ; ಆಟಗಾರರ ಏಕಾಗ್ರತೆಗೆ ಇದು ಅಡ್ಡಿಯಾಗುತ್ತೆ. ಈ ವೇಳೆ ಆಟಗಾರರು ಸಂಪೂರ್ಣ ಸ್ವಾತಂತ್ರ್ಯ ಅನುಭವಿಸಲಾರರು. ಜೊತೆಗೆ ತಂಡದ ಫಲಿತಾಂಶದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

Story first published: Wednesday, October 17, 2018, 16:37 [IST]
Other articles published on Oct 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X