ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20-ಐ: ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ 7 ವಿಕೆಟ್‌ ಜಯ

 One-off T20I: Eoin Morgan plays captains knock as England beat Pakistan

ಕ್ಯಾಪ್ಟನ್‌ ಮಾರ್ಗನ್‌ ಸ್ಫೋಟಕ ಅರ್ಧಶತಕ/ ಬಾಬರ್‌, ಸೊಹೇಲ್‌ ಹೋರಾಟ ವ್ಯರ್ಥ

ಕಾರ್ಡಿಫ್‌, ಮೇ 06: ನಾಯಕ ಐಯಾನ್‌ ಮಾರ್ಗನ್‌ (57*) ಅವರ ಅಜೇಯ ಅರ್ಧಶತಕದ ಬಲದಿಂದ ಮಿಂಚಿದ ಆತಿಥೇಯ ಇಂಗ್ಲೆಂಡ್‌ ತಂಡ, ಇಲ್ಲಿ ನಡೆದ ಪ್ರವಾಸಿ ಪಾಕಿಸ್ತಾನ ವಿರುದ್ಧದ ಏಕೈಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

 RCB ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ! RCB ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ!

ಇಲ್ಲಿನ ಸೋಫಿಯಾ ಗಾರ್ಡನ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 173 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು.

 ನಿನಗೆ ಚಿಕಿತ್ಸೆ ಅಗತ್ಯವಿದೆ, ಪಾಕಿಸ್ತಾನಕ್ಕೆ ಬಾ: ಗಂಭೀರ್‌ಗೆ ಅಫ್ರಿದಿ ಮತ್ತೆ ಟಾಂಗ್‌ ನಿನಗೆ ಚಿಕಿತ್ಸೆ ಅಗತ್ಯವಿದೆ, ಪಾಕಿಸ್ತಾನಕ್ಕೆ ಬಾ: ಗಂಭೀರ್‌ಗೆ ಅಫ್ರಿದಿ ಮತ್ತೆ ಟಾಂಗ್‌

ಪಕ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ ಬಾಬರ್‌ ಅಝಾಮ್‌ 42 ಎಸೆತಗಳಲ್ಲಿ5 ಫೋರ್‌ ಮತ್ತು 3 ಸಿಕ್ಸರ್‌ ಒಳಗೊಂಡ 65 ರನ್‌ಗಳನ್ನು ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಹ್ಯಾರಿಸ್‌ ಸೊಹೇಲ್‌ 36 ಎಸೆತಗಳಲ್ಲಿ 5 ಫೊರ್‌ ಮತ್ತು ಏಕೈಕ ಸಿಕ್ಸರ್‌ ಒಳಗೊಂಡ 50 ರನ್‌ಗಳ ಕಾಣಿಕೆ ನೀಡಿದರು. ಇಂಗ್ಲೆಂಡ್‌ ಪರ ಯುವ ವೇಗದ ಬೌಲರ್‌ ಜೋಫ್ರಾ ಆರ್ಚರ್‌ 29ಕ್ಕೆ 4 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದು, ವಿಶ್ವಕಪ್‌ಗೆ ಇಂಗ್ಲೆಂಡ್‌ ತಂಡ ಸೇರಿಕೊಳ್ಳುವ ಕದ ತಟ್ಟುತ್ತಿದ್ದಾರೆ. ಅವರೊಟ್ಟಿಗೆ ಪಾಕ್‌ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಟಾಮ್‌ ಕರ್ರನ್‌ (28ಕ್ಕೆ1) ಮತ್ತು ಕ್ರಿಸ್‌ ಜಾರ್ಡನ್‌ (41ಕ್ಕೆ 1) ತಲಾ ಒಂದು ವಿಕೆಟ್‌ ಸಂಪಾದಿಸಿದರು.

 ಅವಕಾಶ ಸಿಕ್ರೆ ಮಿ. ನ್ಯಾಗ್ಸ್‌ ಪಾತ್ರ ಮಾಡ್ತೇನೆಂದ ಕೊಹ್ಲಿ: ವಿಡಿಯೊ ಅವಕಾಶ ಸಿಕ್ರೆ ಮಿ. ನ್ಯಾಗ್ಸ್‌ ಪಾತ್ರ ಮಾಡ್ತೇನೆಂದ ಕೊಹ್ಲಿ: ವಿಡಿಯೊ

ಬಳಿಕ ಗುರಿ ಬೆನ್ನತ್ತಿದ ಆತಿಥೇಯ ತಂಡ 19.2 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 175 ರನ್‌ಗಳನ್ನು ಚಚ್ಚಿ ಗೆಲುವಿನ ಸಂಭ್ರಮ ಆಚರಿಸಿತು. ಇಂಗ್ಲೆಂಡ್‌ ಪರ ಅಗ್ರ ಕ್ರಮಾಂಕದಲ್ಲಿ ಜೇಮ್ಸ್‌ ವಿನ್ಸ್‌ (36) ಮತ್ತು ಜೋ ರೂಟ್‌ (47) ಉತ್ತಮ ಬ್ಯಾಟಿಂಗ್‌ ನಡೆಸಿದರೆ, ತಂಡವನ್ನು ಗುರಿ ಮುಟ್ಟಿಸುವ ಜವಾಬ್ದಾರಿ ಹೊತ್ತ ನಾಯಕ ಮಾರ್ಗನ್‌ 29 ಎಸೆತಗಳಲ್ಲಿ 5 ಫೋರ್‌ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 57 ರನ್‌ಗಳನ್ನು ಬಾರಿಸಿ ಪಂದ್ಯಶ್ರೇಷ್ಠ ಗೌರವ ಪಡೆದರು.

1
44031

ಇಂಗ್ಲೆಂಡ್‌ ತಂಡ ಪಾಕಿಸ್ತಾನ ವಿರುದ್ಧ 5 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನಾಡಲಿದ್ದು ಮೊದಲ ಹಣಾಹಣಿ ಮೇ 8 (ಬುಧವಾರ) ದಿ ಓವಲ್‌ನಲ್ಲಿ ನಡೆಯಲಿದೆ. ಇತ್ತಂಡಗಳು ಈ ಮೂಲಕ ಮೇ 30ರಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ.

Story first published: Monday, May 6, 2019, 11:10 [IST]
Other articles published on May 6, 2019
Read in English:
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X