ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಯಲ್ಲಿ ಡಬಲ್ ಸೆಂಚುರಿ ಹೊಡೆಯಬಲ್ಲ ವಿಶ್ವದ ಏಕೈಕ ಕ್ರಿಕೆಟಿಗ

ಸದ್ಯ, ಕೊರೊನಾ ವೈರಸ್ ನಿಂದ ಬಹುತೇಕ ವಿಶ್ವದ ಎಲ್ಲಾ ಕ್ರೀಡೆಗಳಿಗೆ ಬ್ರೇಕ್ ಬಿದ್ದಿದೆ. ಇದೇ ಮಾಸಾಂತ್ಯದಲ್ಲಿ ಆರಂಭವಾಗ ಬೇಕಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವೂ ಮುಂದೂಡಲ್ಪಟ್ಟಿದೆ.

ಭಾರತ - ದಕ್ಷಿಣ ಆಫ್ರಿಕಾ ಸರಣಿ ರದ್ದಾದರೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ಸಿಡ್ನಿಯಲ್ಲಿ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು.

ಸದ್ಯ, ಕ್ರಿಕೆಟ್ ನಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿರುವ ಟಿ20ಯಲ್ಲೂ ದ್ವಿಶತಕವನ್ನು ಭಾರಿಸಬಲ್ಲ ಏಕೈಕ ಕ್ರಿಕೆಟಿಗ ಒಬ್ಬರು ಇದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಒಬ್ಬರು ಹೇಳಿದ್ದಾರೆ.

ವಿರಾಟ್‌ or ಸಚಿನ್ : ಇಶಾಂತ್ ಶರ್ಮಾ ಆಯ್ಕೆ ಮಾಡಿದ ಬೆಸ್ಟ್ ಬ್ಯಾಟ್ಸ್‌ಮನ್!ವಿರಾಟ್‌ or ಸಚಿನ್ : ಇಶಾಂತ್ ಶರ್ಮಾ ಆಯ್ಕೆ ಮಾಡಿದ ಬೆಸ್ಟ್ ಬ್ಯಾಟ್ಸ್‌ಮನ್!

ಈ ಪ್ರಾಕಾರದ ಕ್ರಿಕೆಟ್ ನಲ್ಲಿ, ಇಪ್ಪತ್ತು ಓವರ್ ನಲ್ಲಿ 150ರ ಮೇಲೆ ರನ್ ಹೊಡೆದರೆ, ಸ್ಪರ್ಧಾತ್ಮಕ ಮೊತ್ತ ಎಂದು ಹೇಳಬಹುದು. ಹೀಗಿರುವಾಗ, ಒಬ್ಬ ಆಟಗಾರ ಡಬಲ್ ಸೆಂಚುರಿ ಹೊಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದರೆ, ಅದು ನಿಜಕ್ಕೂ ಆಶ್ಚರ್ಯದ ಸಂಗತಿ. ಆ ಟೀಂ ಇಂಡಿಯಾದ ಆಟಗಾರ ಯಾರು?

ಮಾಜಿ ಸ್ಪಿನ್ನರ್ ಕಮ್ ಆಲ್ರೌಂಡರ್ ಬ್ರಾಡ್ ಹಾಗ್

ಮಾಜಿ ಸ್ಪಿನ್ನರ್ ಕಮ್ ಆಲ್ರೌಂಡರ್ ಬ್ರಾಡ್ ಹಾಗ್

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಕಮ್ ಆಲ್ರೌಂಡರ್ ಬ್ರಾಡ್ ಹಾಗ್ ಪ್ರಕಾರ, ಸದ್ಯ ಚುಟುಕು ಕ್ರಿಕೆಟ್ ನಲ್ಲಿ ಡಬಲ್ ಸೆಂಚುರಿ ಹೊಡೆಯಬಲ್ಲ ಏಕೈಕ ಆಟಗಾರನೊಬ್ಬನಿದ್ದಾನೆ. ಏಕದಿನ ಮತ್ತು ಟಿ20 ಕ್ರಿಕೆಟ್ ನಲ್ಲಿ ಈತ ಪ್ರಚಂಡ ಫಾರಂನಲ್ಲಿದ್ದಾನೆ. ಈತ ಉತ್ತಮ ಸ್ಟ್ರೈಕ್ ರೇಟ್ ಅನ್ನೂ ಹೊಂದಿದ್ದಾನೆ.

ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ

ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ

ಬ್ರಾಡ್ ಹಾಗ್ ಪ್ರಕಾರ, ಡಬಲ್ ಸೆಂಚುರಿ ಹೊಡೆಯಬಲ್ಲ ಸದ್ಯದ ಏಕೈಕ ಕ್ರಿಕೆಟಿಗೆ ಎಂದರೆ, ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ. ಈತನ ಬ್ಯಾಟಿಂಗ್ ಶೈಲಿ, ಬೌಲರ್ ಗಳನ್ನು ದಂಡಿಸುವ ರೀತಿ, ಎಲ್ಲಾ ಯುವ ಕ್ರಿಕೆಟಿಗರಿಗೆ ಮಾದರಿ. ಉತ್ತಮ ಫಾರಂನಲ್ಲಿರುವ ಈತ ಈ ವಿಶಿಷ್ಟ ದಾಖಲೆಯನ್ನು ಬರೆಯಬಲ್ಲ ಎಂದು ಹಾಗ್ ಹೇಳಿದ್ದಾರೆ.

ಕೊಹ್ಲಿ ತರದ ನಾಯಕನೇ ನಮಗೆ ಬೇಕು ಎಂದ ಮಾಜಿ ಕ್ರಿಕೆಟಿಗ

ಕಿವೀಸ್ ಸರಣಿಯಲ್ಲಿ ಅದ್ಭುತ ಫಾರಂನಲ್ಲಿದ್ದರು

ಕಿವೀಸ್ ಸರಣಿಯಲ್ಲಿ ಅದ್ಭುತ ಫಾರಂನಲ್ಲಿದ್ದರು

ರೋಹಿತ್ ಶರ್ಮಾ ಇದುವರೆಗೆ 107 ಟಿ20 ಪಂದ್ಯವನ್ನು ಆಡಿದ್ದು, ಇದುವರೆಗೆ ನಾಲ್ಕು ಶತಕ, ಇಪ್ಪತ್ತು ಅರ್ಧಶತಕವನ್ನು ಬಾರಿಸಿದ್ದಾರೆ. 2,713 ರನ್ ಗಳನ್ನು ಹೊಡೆದಿರುವ ಶರ್ಮಾ ಅವರ ಇದುವರೆಗಿನ ವೈಯಕ್ತಿಕ ಗರಿಷ್ಠ ಸ್ಕೋರ್ 118. ಶರ್ಮಾ, ಇತ್ತೀಚೆಗೆ ಮುಕ್ತಾಯಗೊಂಡ ಕಿವೀಸ್ ಸರಣಿಯಲ್ಲಿ ಅದ್ಭುತ ಫಾರಂನಲ್ಲಿದ್ದರು.

ಬ್ರಾಡ್ ಹಾಗ್

ಬ್ರಾಡ್ ಹಾಗ್

ಎಡಗೈ ಬ್ಯಾಟ್ಸ್ ಮ್ಯಾನ್ ಮತ್ತು ಸ್ಪಿನ್ನರ್ ಆಗಿರುವ ಬ್ರಾಡ್ ಹಾಗ್, 123 ಏಕದಿನ, ಏಳು ಟೆಸ್ಟ್ ಮತ್ತು ಹದಿನೈದು ಟಿ20 ಪಂದ್ಯವನ್ನು ಆಡಿದ್ದಾರೆ. ಫೆಬ್ರವರಿ 2006ರಲ್ಲಿ ಚುಟುಕು ಕ್ರಿಕೆಟ್ ಗೆ ಹಾಗ್ ಪಾದಾರ್ಪಣೆ ಮಾಡಿದ್ದರು.

Story first published: Tuesday, March 17, 2020, 14:31 [IST]
Other articles published on Mar 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X