ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

82 ವರ್ಷದಲ್ಲಿ ಅಶಿಸ್ತಿಗಾಗಿ ಭಾರತಕ್ಕೆ ಮರಳಿದ ಮೊದಲಿಗರು ಪಾಂಡ್ಯ-ರಾಹುಲ್!

Only second time in 82 years, Indian cricketers sent home for disciplinary

ನವದೆಹಲಿ, ಜನವರಿ 12: ದಾಖಲೆಗಳಲ್ಲಿ ಎರಡು ವಿಧವಿದೆ. ಅವು ಸಕಾರಾತ್ಮಕ ಮತ್ತು ನಕಾರಾತ್ಮಕ. ಭಾರತದ ಕ್ರಿಕೆಟ್ ಆಟಗಾರರು ಸಕಾರಾತ್ಮಕ ದಾಖಲೆಗಾಗಿ ಗುರುತಿಸಿಕೊಂಡಿದ್ದೇ ಹೆಚ್ಚು. ಆದರೆ ನಕಾರಾತ್ಮಕವಾಗಿಯೂ ಕಾಣಿಸಿಕೊಂಡವರಿದ್ದಾರೆ. ನಕಾರಾತ್ಮಕ ದಾಖಲೆಗಾಗಿ ಭಾರತದ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಸದ್ಯ ಗುರುತಿಸಿಕೊಂಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ Live Score ಕೆಳಗಿದೆ

1
43627

ಹಾರ್ದಿಕ್ ಪಾಂಡ್ಯ, ರಾಹುಲ್‌ಗೆ ಬಿಸಿಸಿಐನಿಂದ ಏಕದಿನ ಪಂದ್ಯ ನಿಷೇಧ!ಹಾರ್ದಿಕ್ ಪಾಂಡ್ಯ, ರಾಹುಲ್‌ಗೆ ಬಿಸಿಸಿಐನಿಂದ ಏಕದಿನ ಪಂದ್ಯ ನಿಷೇಧ!

ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ಪಾಲ್ಗೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಸಜೆಯಾಗಿ ಪಾಂಡ್ಯ ಮತ್ತು ರಾಹುಲ್ ಅವರನ್ನು ಬಿಸಿಸಿಐ ಆಸ್ಟ್ರೇಲಿಯಾದಿಂದ ಭಾರತಕ್ಕೆ ಕಳುಹಿಸಿತ್ತು. ಅಂದರೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಸಿಡ್ನಿಗೆ ತೆರಳಿದ್ದ ಯುವ ಆಟಗಾರರಿಬ್ಬರೂ ಭಾರತಕ್ಕೆ ವಾಪಸ್ಸಾಗಿದ್ದರು. ಇಂಥದ್ದೇ ಸಂಗತಿ ಸುಮಾರು 82 ವರ್ಷಗಳ ಹಿಂದೆಯೂ ನಡೆದಿತ್ತು.

1936ರಲ್ಲಿ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆಗ ಪ್ರಥಮದರ್ಜೆ ಪಂದ್ಯ ಆಡಬೇಕಿದ್ದ ಭಾರತ ತಂಡದಲ್ಲಿದ್ದ ದಂತಕತೆ ಲಾಲ ಅಮರ್‌ನಾಥ್ ಅವರು ಭಾರತಕ್ಕೆ ವಾಪಸ್ಸಾಗಿ ಬರಬೇಕಾಗಿ ಬಂದಿತ್ತು. ಕಾರಣ ಆಗಿನ ತಂಡದ ನಾಯಕ ಮಹಾರಾಜ ಆಫ್ ವಿಜಯನಗರಮ್ ಅಥವಾ ವಿಜಿ ಅವರು ಅಮರ್‌ನಾಥ್ ಮೇಲೆ ದೌರ್ಜನ್ಯದ ಆರೋಪ ಹೊರಿಸಿದ್ದರು (ಟ್ವೀಟ್‌ನಲ್ಲಿ ಅಮರ್‌ನಾಥ್).

ಬಂದ ದಾರಿಗೆ ಸುಂಕವಿಲ್ಲ ಎಂದು ಪಾಂಡ್ಯ-ರಾಹುಲ್ ಭಾರತಕ್ಕೆ ವಾಪಸ್!ಬಂದ ದಾರಿಗೆ ಸುಂಕವಿಲ್ಲ ಎಂದು ಪಾಂಡ್ಯ-ರಾಹುಲ್ ಭಾರತಕ್ಕೆ ವಾಪಸ್!

ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೊಹರ್ ನಡೆಸಿಕೊಡುವ ಜನಪ್ರಿಯ 'ಕಾಫಿ ವಿತ್ ಕರಣ್' ಟಾಕ್ ಶೋನಲ್ಲಿ ಮಹಿಳೆಯರ ಬಗ್ಗೆ, ಲೈಂಗಿಕತೆಯ ಬಗ್ಗೆ ಪಾಂಡ್ಯ-ರಾಹುಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿವಾದ ಇಬ್ಬರೂ ಆಟಗಾರರನ್ನು ಸರಣಿಗೂ ಮುನ್ನ ಭಾರತಕ್ಕೆ ವಾಪಸ್ಸು ಕರೆಸಿತ್ತು.

Story first published: Saturday, January 12, 2019, 13:33 [IST]
Other articles published on Jan 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X