ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್‌ಗೆ ಮಾತ್ರ ಆ ದೊಡ್ಡ ಜವಾಬ್ದಾರಿ ಕೊಡಲೇಬೇಡಿ ಎಂದ ಗಂಭೀರ್!

Opener KL Rahul shouldnt do wicket keeping in test cricket says Gautam Gambhir

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಮೊದಲಿಗೆ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಇತ್ತಂಡಗಳ ನಡುವಿನ ಈ 3 ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ಈಗಾಗಲೇ ಮೊದಲೆರಡು ಪಂದ್ಯಗಳು ಮುಗಿದಿದ್ದು ಎರಡೂ ಪಂದ್ಯಗಳು ಸಹ ಫಲಿತಾಂಶವನ್ನು ನೀಡಿವೆ. ಸೆಂಚೂರಿಯನ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಹರಿಣಗಳಿಗೆ ಸೋಲುಣಿಸಿದ ಟೀಮ್ ಇಂಡಿಯಾ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿತ್ತು ಹಾಗೂ ಜೊಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆದ್ದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸಮಬಲವನ್ನು ಸಾಧಿಸಿತು.

ಭಾರತ vs ದ.ಆಫ್ರಿಕಾ: ಕೊಹ್ಲಿ ಪೆವಿಲಿಯನ್‌ನಲ್ಲಿ ಬ್ಯಾಟ್ ಬೀಸಿದ ಕೂಡಲೇ ವಿಕೆಟ್ ಒಪ್ಪಿಸಿದ ಅಗರ್ವಾಲ್, ವಿಡಿಯೋ ವೈರಲ್ಭಾರತ vs ದ.ಆಫ್ರಿಕಾ: ಕೊಹ್ಲಿ ಪೆವಿಲಿಯನ್‌ನಲ್ಲಿ ಬ್ಯಾಟ್ ಬೀಸಿದ ಕೂಡಲೇ ವಿಕೆಟ್ ಒಪ್ಪಿಸಿದ ಅಗರ್ವಾಲ್, ವಿಡಿಯೋ ವೈರಲ್

ಈ ಮೂಲಕ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಸದ್ಯ ಕೇಪ್ ಟೌನ್ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯ ಇತ್ತಂಡಗಳಿಗೂ ಕೂಡ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಪರಿಣಮಿಸಿದೆ. ಹೀಗಾಗಿ ಎರಡೂ ತಂಡಗಳು ಸಹ ಈ ಟೆಸ್ಟ್ ಪಂದ್ಯವನ್ನು ಗೆಲ್ಲುವತ್ತ ಚಿತ್ತ ನೆಟ್ಟಿದ್ದು ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೊದಲನೇ ಇನ್ನಿಂಗ್ಸ್‌ನಲ್ಲಿ 223 ರನ್ ಕಲೆಹಾಕಿದೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಈ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ 50 ಎಸೆತಗಳನ್ನು ಎದುರಿಸಿ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಸದ್ಯ ಈತನ ರೀತಿಯ ನತದೃಷ್ಟ ಕ್ರಿಕೆಟಿಗ ಮತ್ತೊಬ್ಬನಿಲ್ಲ: ಹನುಮ ವಿಹಾರಿ ಪರಿಸ್ಥಿತಿಗೆ ನೆಟ್ಟಿಗರ ಬೇಸರಸದ್ಯ ಈತನ ರೀತಿಯ ನತದೃಷ್ಟ ಕ್ರಿಕೆಟಿಗ ಮತ್ತೊಬ್ಬನಿಲ್ಲ: ಹನುಮ ವಿಹಾರಿ ಪರಿಸ್ಥಿತಿಗೆ ನೆಟ್ಟಿಗರ ಬೇಸರ

ಹೀಗೆ 50 ಎಸೆತಗಳನ್ನು ಎದುರಿಸಿ ದೊಡ್ಡ ಇನಿಂಗ್ಸ್ ಕಟ್ಟುವ ಭರವಸೆಯನ್ನು ಮೂಡಿಸಿದ್ದ ರಿಷಭ್ ಪಂತ್ ಔಟ್ ಆಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಹೌದು, ಟೆಸ್ಟ್ ಕ್ರಿಕೆಟ್‍ನಲ್ಲಿ ರಿಷಭ್ ಪಂತ್ ಹಲವಾರು ತಿಂಗಳುಗಳಿಂದ ದೊಡ್ಡ ಆಟವನ್ನು ಆಡುವಲ್ಲಿ ಪದೇಪದೇ ವಿಫಲವಾಗುತ್ತಿದ್ದು ಸದ್ಯ ಸಾಕಷ್ಟು ದೊಡ್ಡ ಮಟ್ಟದ ಚರ್ಚೆ ಹಾಗೂ ಟೀಕೆಗಳಿಗೆ ಗುರಿಯಾಗಿದ್ದಾರೆ. ಅದರಲ್ಲಿಯೂ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ರಿಷಭ್ ಪಂತ್ ಬೇಡದ ಹೊಡೆತಕ್ಕೆ ಕೈಹಾಕಿದ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಒಳಗಾಗಿದ್ದರು. ಇನ್ನು ರಿಷಭ್ ಪಂತ್ ಬದಲು ಕೆ ಎಲ್ ರಾಹುಲ್ ಅವರಿಗೆ ಟೆಸ್ಟ್ ಕ್ರಿಕೆಟ್ ವಿಕೆಟ್ ಕೀಪಿಂಗ್ ಮಾಡುವ ಅವಕಾಶವನ್ನು ನೀಡಬೇಕು ಎಂಬ ಅಭಿಪ್ರಾಯಗಳು ಕೂಡ ಇದೇ ಸಮಯದಲ್ಲಿ ವ್ಯಕ್ತವಾದವು. ಈ ರೀತಿಯ ಆಲೋಚನೆಗಳ ಕುರಿತಾಗಿ ಇದೀಗ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಯಾವುದೇ ಕಾರಣಕ್ಕೂ ಕೆಎಲ್ ರಾಹುಲ್ ಅವರಿಗೆ ವಿಕೆಟ್ ಕೀಪಿಂಗ್ ಮಾಡುವ ಅವಕಾಶವನ್ನು ನೀಡಬಾರದು ಎಂದು ಈ ಕೆಳಕಂಡಂತೆ ಕಾರಣವನ್ನು ಕೊಟ್ಟು ಹೇಳಿಕೆಯನ್ನು ನೀಡಿದ್ದಾರೆ.

ಆರಂಭಿಕ ಆಟಗಾರ ವಿಕೆಟ್ ಕೀಪಿಂಗ್ ಮಾಡುವುದು ಅಸಾಧ್ಯ

ಆರಂಭಿಕ ಆಟಗಾರ ವಿಕೆಟ್ ಕೀಪಿಂಗ್ ಮಾಡುವುದು ಅಸಾಧ್ಯ

ಕೆ ಎಲ್ ರಾಹುಲ್ ಅವರಿಗೆ ಟೆಸ್ಟ್ ಕ್ರಿಕೆಟ್ ವಿಕೆಟ್ ಕೀಪಿಂಗ್ ಮಾಡುವ ಅವಕಾಶ ನೀಡಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಗೌತಮ್ ಗಂಭೀರ್ ಅದನ್ನು ತಪ್ಪು ಎಂದಿದ್ದಾರೆ. ಕೆಎಲ್ ರಾಹುಲ್ ವಿಕೆಟ್ ಕೀಪರ್ ಹಾಗೂ ಆರಂಭಿಕ ಆಟಗಾರನಾದರೆ, ಮೊದಲು 150 ಓವರ್‌ ವಿಕೆಟ್ ಕೀಪಿಂಗ್ ಮಾಡಿ ನಂತರ ತನ್ನ ತಂಡದ ಬ್ಯಾಟಿಂಗ್ ಆರಂಭಗೊಂಡಾಗ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವುದು ಅಸಾಧ್ಯ ಎಂದಿದ್ದಾರೆ. ಅಷ್ಟು ಸಮಯದವರೆಗೆ ಮೈದಾನದಲ್ಲಿ ಶ್ರಮಿಸಿ ಮತ್ತೆ ಬ್ಯಾಟ್ ಹಿಡಿದು ತಂಡದ ಪರ ಆರಂಭವನ್ನು ಮಾಡುವುದು ಟೆಸ್ಟ್ ಕ್ರಿಕೆಟ್‍ನಲ್ಲಿ ಸರಿಯಾದ ಆಯ್ಕೆಯಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಿದರೆ ಆರಂಭಿಕನಾಗಿ ಹೆಚ್ಚು ರನ್ ಬಾರಿಸಲು ಆಗುವುದಿಲ್ಲ

ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಿದರೆ ಆರಂಭಿಕನಾಗಿ ಹೆಚ್ಚು ರನ್ ಬಾರಿಸಲು ಆಗುವುದಿಲ್ಲ

ಇನ್ನೂ ಮುಂದುವರಿದು ಮಾತನಾಡಿರುವ ಗೌತಮ್ ಗಂಭೀರ್ ಕೆಎಲ್ ರಾಹುಲ್ ಒಂದುವೇಳೆ ಟೆಸ್ಟ್ ಕ್ರಿಕೆಟ್‍ನಲ್ಲಿ ವಿಕೆಟ್ ಕೀಪಿಂಗ್ ಮಾಡಲು ಮುಂದಾದರೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಹೆಚ್ಚಿನ ರನ್ ಬಾರಿಸುತ್ತಾರೆ ಎಂಬುದನ್ನು ನಿರೀಕ್ಷಿಸಲಾಗುವುದಿಲ್ಲ ಎಂದಿದ್ದಾರೆ. ಆತ ಸದ್ಯದ ರೀತಿಯಲ್ಲಿ ಹೆಚ್ಚು ರನ್ ಗಳಿಸಬೇಕೆಂದರೆ ಆತನ ಮೇಲೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹೇರಬಾರದು ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

Jaspreet Bumrah ಸೇಡು ತೀರಿಸಿಕೊಂಡ ರೀತಿ ಇದು | Oneindia Kannada
ಸೀಮಿತ ಓವರ್‌ ಪಂದ್ಯಗಳಾದರೆ ಸಮಸ್ಯೆಯಿಲ್ಲ

ಸೀಮಿತ ಓವರ್‌ ಪಂದ್ಯಗಳಾದರೆ ಸಮಸ್ಯೆಯಿಲ್ಲ

ಕೆ ಎಲ್ ರಾಹುಲ್ ಅವರಿಗೆ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ವಿಕೆಟ್ ಕೀಪಿಂಗ್ ಮಾಡುವ ಜವಾಬ್ದಾರಿಯನ್ನು ಹೇರಬಾರದು ಎಂದಿರುವ ಗೌತಮ್ ಗಂಭೀರ್ ಸೀಮಿತ ಓವರ್ ಪಂದ್ಯಗಳಲ್ಲಿ ಬೇಕಾದರೆ ಆತ ವಿಕೆಟ್ ಕೀಪಿಂಗ್ ಮಾಡಬಹುದು ಎಂದಿದ್ದಾರೆ. ಸೀಮಿತ ಓವರ್ ಪಂದ್ಯಗಳಲ್ಲಿ ಟೆಸ್ಟ್ ಕ್ರಿಕೆಟ್ ರೀತಿ ಹೆಚ್ಚಿನ ಒತ್ತಡವಿರುವುದಿಲ್ಲ ಹಾಗೂ ಹೆಚ್ಚು ಸಮಯ ಮೈದಾನದಲ್ಲಿ ಕಾಲ ಕಳೆಯ ಬೇಕಾಗಿರುವುದಿಲ್ಲ, ಹೀಗಾಗಿ ಏಕದಿನ ಹಾಗೂ ಟಿ ಟ್ವೆಂಟಿ ಪಂದ್ಯಗಳಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಬಹುದು ಎಂದು ಗೌತಮ್ ಗಂಭೀರ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

Story first published: Wednesday, January 12, 2022, 17:59 [IST]
Other articles published on Jan 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X