ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಬ್ಬರ್ ಅಬ್ಬರದ ನಡುವೆಯೂ ಆರೆಂಜ್ ಕ್ಯಾಪ್ ಬಿಟ್ಟುಕೊಡದ ಕನ್ನಡಿಗ

Orange Cap Remains With KL Rahul After Shikar Dhawan Second Consecutive Ton

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಕೆ.ಲ್ ರಾಹುಲ್, ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಆಧಾರ ಸ್ಥಂಭ. ಮತ್ತೊಬ್ಬ ಓಪನರ್ ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆಗೂಡಿ ಸೊಗಸಾದ ಇನ್ನಿಂಗ್ಸ್ ಕಟ್ಟುವ ಕೆ.ಎಲ್, ಐಪಿಎಲ್ 13ನೇ ಆವೃತ್ತಿಯಲ್ಲಿ ಪ್ರಸ್ತುತ ಟಾಪ್‌ ಸ್ಕೋರರ್.

ಟೂರ್ನಿ ಆರಂಭದಿಂದಲೂ ಭರ್ಜರಿ ಪ್ರದರ್ಶನದ ಮೂಲಕ ಮಿಂಚುತ್ತಿರುವ ಕೆ.ಎಲ್ ರಾಹುಲ್ 10 ಇನ್ನಿಂಗ್ಸ್‌ಗಳಲ್ಲಿ 67.50 ಸರಾಸರಿಯಲ್ಲಿ 540 ರನ್‌ ಕಲೆಹಾಕಿದ್ದಾರೆ. 135.68 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಕಿಂಗ್ಸ್‌ ಇಲೆವೆನ್ ಪಂಜಾಬ್ ಕ್ಯಾಪ್ಟನ್ 19 ಸಿಕ್ಸರ್, 46 ಬೌಂಡರಿ ಸಿಡಿಸಿದ್ದಾರೆ. ಜೊತೆಗೆ ಮೂರನೇ ವರ್ಷ ಐಪಿಎಲ್‌ನಲ್ಲಿ 500ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಸೋಲಿಗೆ ಮೂರು ಕಾರಣಗಳುಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಸೋಲಿಗೆ ಮೂರು ಕಾರಣಗಳು

ಈ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್‌ನ ಓಪನರ್ ಶಿಖರ್ ಧವನ್. ಐಪಿಎಲ್‌ನಲ್ಲಿ ಸತತ ಎರಡು ಶತಕ ಸಿಡಿಸದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿರುವ ಗಬ್ಬರ್ ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧವೂ ಸೆಂಚುರಿ ಸಿಡಿಸಿದ್ರು.

ಆರೆಂಜ್ ಕ್ಯಾಪ್‌ಗೆ ಪ್ರಬಲ ಸ್ಫರ್ಧಿಯಾಗಿರುವ ಶಿಖರ್ ಧವನ್ ಉತ್ತಮ ಪ್ರದರ್ಶನದ ಮೂಲಕ ಆರೆಂಜ್ ಕ್ಯಾಪ್ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಮಂಗಳವಾರ (ಅ. 20) ಗಬ್ಬರ್ ಅಬ್ಬರದ ನಡುವೆಯು ಆರೆಂಜ್ ಕ್ಯಾಪ್ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಕೆ.ಎಲ್ ರಾಹುಲ್ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಈ ಐಪಿಎಲ್‌ನಲ್ಲಿ ಸತತ ಮೂರು ಪಂದ್ಯಗಳನ್ನ ಗೆದ್ದು ಇನ್ನೂ ಪ್ಲೇ ಆಫ್‌ ಕನಸನ್ನು ಉಳಿಸಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ರಾಹುಲ್ ಮತ್ತಷ್ಟು ಮಿಂಚಲಿ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದರ ನಡುವೆ 398ರನ್‌ಗಳಿಸಿ ಮೂರನೇ ಟಾಪ್ ಸ್ಕೋರರ್ ಆಗಿರುವ ಮಯಾಂಕ್ ಅಗರ್ವಾಲ್‌ರಿಂದ ಕೂಡ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.

Story first published: Wednesday, October 21, 2020, 10:23 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X