ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಯುವ ಬೌಲಿಂಗ್ ವಿಭಾಗದ ಬಗ್ಗೆ ಪೂಜಾರ ಮೆಚ್ಚುಗೆಯ ಮಾತು

Our Young bowling unit was remarkabl: Cheteshwar Pujara praises youngsters on Australia series

ಇಂಗ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಭಾಗಿಯಾಗಿದೆ. ಈ ಸಂದರ್ಭದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಟೀಮ್ ಇಂಡಿಯಾದ ಯುವ ಬೌಲರ್‌ಗಳ ಆಸ್ಟ್ರೇಲಿಯಾದಲ್ಲಿನ ಸಾಧನೆಯನ್ನು ಸ್ಮರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯುವ ಬೌಲರ್‌ಗಳಿಂದ ಬಂದ ಪ್ರದರ್ಶನವನ್ನು ಪೂಜಾರ ಕೊಂಡಾಡಿದ್ದಾರೆ. ಐಸಿಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಚೇತೇಶ್ವರ್ ಪೂಜಾರ ಆಸಿಸ್ ವಿರುದ್ಧದ ಸರಣಿಯನ್ನು ಸ್ಮರಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಗಾಬಾದಲ್ಲಿ ನಡೆದ ಟೆಸ್ಟ್ ಪಂದ್ಯ ತಾನಾಡಿದ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ಸ್ಮರಣೀಯ ಎಂದು ಹೇಳಿದ್ದಾರೆ. "ನಾನು ಭಾಗಿಯಾದ ಟೆಸ್ಟ್ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ಸ್ಮರಣೀಯವೆಂದರೆ ಅದು ಗಾಬಾ ಟೆಸ್ಟ್ ಪಂದ್ಯ. ಸಾಕಷ್ಟು ಗಾಯಗಳಿಂದ ನಮ್ಮ ತಂಡ ಹಿನ್ನಡೆ ಅನುಭವಿಸಿತ್ತು. ಅತ್ಯುತ್ತಮ ಬೌಲರ್‌ಗಳನ್ನು ಹೊಂದಲು ನಾವು ಹೆಣಗಾಡಿದ್ದೆವು. ಆದರೆ ನಮ್ಮಲ್ಲಿದ್ದ ಯುವ ಬೌಲರ್‌ಗಳು ಈ ಸವಾಲನ್ನು ಎದುರಿಸಲು ಸಿದ್ಧರಾಗಿದ್ದರು" ಎಂದು ಪೂಜಾರ ಹೇಳಿದ್ದಾರೆ.

ಇಂಥ ಪ್ರಮುಖ ಪಂದ್ಯ ಯುಕೆಯಲ್ಲಿ ನಡೆಯಬಾರದಿತ್ತು: ಕೆವಿನ್ ಪೀಟರ್ಸನ್ಇಂಥ ಪ್ರಮುಖ ಪಂದ್ಯ ಯುಕೆಯಲ್ಲಿ ನಡೆಯಬಾರದಿತ್ತು: ಕೆವಿನ್ ಪೀಟರ್ಸನ್

"ಆಸ್ಟ್ರೇಲಿಯಾ ವಿರುದ್ಧದ ಸವಾಲನ್ನು ಎದುರಿಸಲು ಎಲ್ಲಾ ಆಟಗಾರರು ಸಿದ್ಧರಾಗಿದ್ದರು. ವಿಶೇಷವಾಗಿ ಯುವ ಆಟಗಾರರು ಎದುರಾಳಿಗಳ ಸವಾಲಿಗೆ ಅವರು ಸಜ್ಜಾಗಿದ್ದರು. ನಾವು ತಂಡವಾಗಿ ಆಡಿದ್ದೆವು. ಆದರೆ ಆ ಪಂದ್ಯದಲ್ಲಿ ನಮ್ಮ ಬೌಲರ್‌ಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿತ್ತು" ಎಂದು ಪೂಜಾರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಯಾವುದೇ ಸರಣಿಗಳು ಇಲ್ಲದಿದ್ದಾಗ ಹೆಚ್ಚಾಗಿ ಕ್ರಿಕೆಟ್ ಆಡದಿರಲು ಬಯಸುವುದಾಗಿ ಹೇಳಿದ್ದಾರೆ. ಈ ಮೂಲಕ ಹೊಸ ಸರಣಿಗೆ ಹೆಚ್ಚು ಹೊಸತನದೊಂದಿಗೆ ಸಜ್ಜಾಗಲು ಸಾಧ್ಯವಾಗುತ್ತದೆ. ಆದರೆ ಸಾಧ್ಯವಾದಾಗಲೆಲ್ಲಾ ಬ್ಯಾಟ್ ಜೊತೆಗೆ ಅಭ್ಯಾಸ ಮಾಡುವುದನ್ನು ನಾನು ಬಯಸುತ್ತೇನೆ ಎಂದು ಚೇತೇಶ್ವರ್ ಪೂಜಾರ ಹೇಳಿದ್ದಾರೆ.

Story first published: Tuesday, June 22, 2021, 14:29 [IST]
Other articles published on Jun 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X