ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೇಗಿ ಸುದೀಪ್ ತ್ಯಾಗಿ

Pacer Sudeep Tyagi retires from all forms of cricket

ಲಕ್ನೋ: ಉತ್ತರಪ್ರದೇಶದ ಬಲಗೈ ವೇಗಿ ಸುದೀಪ್ ತ್ಯಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೀಮ್ ಇಂಡಿಯಾ ಪರ ನಾಲ್ಕು ಏಕದಿನ ಪಂದ್ಯಗಳು ಮತ್ತು ಒಂದು ಟಿ20ಐ ಪಂದ್ಯದಲ್ಲಿ ತ್ಯಾಗಿ ಆಡಿದ್ದರು. ಅವರಿಗೀಗ 33ರ ಹರೆಯ.

ದೀಪಾವಳಿ ಸಂದೇಶಕ್ಕಾಗಿ ವಿರಾಟ್ ಕೊಹ್ಲಿ ಟ್ರೋಲ್: ಆರ್‌ಸಿಬಿ ಸ್ಪಷ್ಟನೆದೀಪಾವಳಿ ಸಂದೇಶಕ್ಕಾಗಿ ವಿರಾಟ್ ಕೊಹ್ಲಿ ಟ್ರೋಲ್: ಆರ್‌ಸಿಬಿ ಸ್ಪಷ್ಟನೆ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡಿದ್ದ ಸುದೀಪ್ ತ್ಯಾಗಿ, ನಿವೃತ್ತಿ ನಿರ್ಧಾರ ಪ್ರಕಟಿಸಾಗ, ತಾನು ಭಾರತ ತಂಡಕ್ಕಾಗಿ ಆಡುವಾಗ ತಂಡದಲ್ಲಿದ್ದು ಮಾರ್ಗದರ್ಶನ ಮಾಡಿದ ಎಂಎಸ್ ಧೋನಿ, ಮೊಹಮ್ಮದ್ ಕೈಫ್, ಸುರೇಶ್ ರೈನಾ ಮತ್ತು ಆರ್‌ಪಿ ಸಿಂಗ್‌ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಟೀಮ್ ಇಂಡಿಯಾದ ಭವಿಷ್ಯದ ನಾಯಕನಾಗುವ ಎಲ್ಲಾ ಆರ್ಹತೆಗಳೂ ಆತನಲ್ಲಿದೆ: ಅಲೆಕ್ಸ್ ಕ್ಯಾರಿಟೀಮ್ ಇಂಡಿಯಾದ ಭವಿಷ್ಯದ ನಾಯಕನಾಗುವ ಎಲ್ಲಾ ಆರ್ಹತೆಗಳೂ ಆತನಲ್ಲಿದೆ: ಅಲೆಕ್ಸ್ ಕ್ಯಾರಿ

ಮಂಗಳವಾರ (ನವೆಂಬರ್ 17) ಟ್ವೀಟ್ ಮೂಲಕ ನಿವೃತ್ತಿ ನಿರ್ಧಾರ ಪ್ರಕಟಿಸಿರುವ ತ್ಯಾಗಿ, 'ನಾನು ನನ್ನ ಬದುಕಿನಲ್ಲಿ ಕೈಗೊಂಡಿರುವ ನಿರ್ಧಾರಗಳಲ್ಲಿ ಬಲು ಕಠಿಣ ನಿರ್ಧಾರ. ನನ್ನ ಕನಸಿಗೆ ನಾನಿಂದು ಗುಡ್‌ಬೈ ಹೇಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

'ಕ್ರಿಕೆಟ್ ನನ್ನ ಅಸ್ತಿತ್ವ ಮತ್ತು ಆತ್ಮ. ಈ ನಿರ್ಧಾರ ತುಂಬಾ ಕಷ್ಟ. ಆದರೆ ಮುಂದೆ ಹೋಗಲೇಬೇಕು. ನಾನು ಇನ್ನೂ ಹೆಚ್ಚು ಆಡಬಹುದು ಮತ್ತು ದೇಶಕ್ಕೆ ಹೆಚ್ಚಿನದನ್ನು ನೀಡಬಹುದಿತ್ತು,' ಎಂದು ತ್ಯಾಗಿ ಹೇಳಿಕೊಂಡಿದ್ದಾರೆ. ತ್ಯಾಗಿ 4 ಏಕದಿನ ಪಂದ್ಯಗಳಲ್ಲಿ 3 ವಿಕೆಟ್, 14 ಐಪಿಎಲ್ ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ.

Story first published: Wednesday, November 18, 2020, 9:54 [IST]
Other articles published on Nov 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X