India Pakistan Match: ಭಾರತದ ವಿರುದ್ಧ ದಾಖಲೆ ಬರೆದ ಪಾಕಿಸ್ತಾನದ ವೇಗಿಗಳು!
ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕ್ ಪಡೆಗೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲಿ ಹಿನ್ನಡೆ ಅನುಭವಿಸಿ ಸಂಕಷ್ಟದಲ್ಲಿದ್ದರೂ ಬಳಿಕ ಅದ್ಭುತವಾಗಿ ಚೇತರಿಸಿಕೊಂಡಿದ್ದು ಗೌರವಯುತ ಮೊತ್ತ ಪೇರಿಸಲು ಸಾಧ್ಯವಾಗಿದೆ. ಆದರೆ ಈ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್‌ಗಳು ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ 266 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಅಮೋಘ ಜೊತೆಯಾಟದ ಕಾರಣದಿಂದಾಗಿ ಈ ಗೌರವಯುತ ಮೊತ್ತವನ್ನು ಗಳಿಸಲು ಭಾರತ ತಂಡಕ್ಕೆ ಸಾಧ್ಯವಾಯಿತು. ಆದರೆ ಭಾರತ ತಂಡದ ಎಲ್ಲಾ ವಿಕೆಟ್‌ಗಳನ್ನು ಕೂಡ ಪಾಕಿಸ್ತಾನದ ವೇಗಿಗಳೇ ಹಂಚಿಕೊಂಡಿರುವುದು ವಿಶೇಷ.

ಏಷ್ಯಾಕಪ್ ಇತಿಹಾಸದಲ್ಲೇ ದಾಖಲೆ
ಈ ಪಂದ್ಯದಲ್ಲಿ ಭಾರತದ ಎಲ್ಲಾ 10 ವಿಕೆಟ್‌ಗಳು ಕೂಡ ವೇಗಿಗಳ ಪಾಲಾಗಿದೆ. ಇದು ಏಷ್ಯಾಕಪ್ ಇತಿಹಾಸದಲ್ಲೇ ವಿಶೇಷ ದಾಖಲೆ. ಸುಮಾರು ನಾಲ್ಕು ದಶಕಗಳ ಇತಿಹಾಸವನ್ನು ಹೊಂದಿರುವ ಏಷ್ಯಾಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ತಂಡವೊಂದರ ಎಲ್ಲಾ 10 ವಿಕೆಟ್‌ಗಳನ್ನು ಕೂಡ ವೇಗದ ಬೌಲರ್‌ಗಳು ಹಂಚಿಕೊಂಡಿರುವುದು ಇದು ಪ್ರಪ್ರಥಮ ಬಾರಿ. ಈ ಪಂದ್ಯದಲ್ಲಿ ಶಾಹೀನ್ ಶಾ ಅಫ್ರಿದಿ 4 ವಿಕೆಟ್ ಪಡೆದುಕೊಂಡಿದ್ದರೆ ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ತಲಾ 3 ವಿಕೆಟ್ ಪಡೆದುಕೊಂಡಿದ್ದು ಈ ಸಾಧನೆ ಮಾಡಿದ್ದಾರೆ.
ಭಾರತಕ್ಕೆ ದೊಡ್ಡ ಆಘಾತ ನೀಡಿದ ಅಫ್ರಿದಿ
ಇನ್ನು ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಭಾರೀ ದೊಡ್ಡ ಆಘಾತ ನೀಡಿದ್ದ ಶಾಹೀನ್ ಅಫ್ರಿದಿ. ಭಾರತ ತಂಡದ ಪ್ರಮುಖ ನಾಲ್ಕು ವಿಕೆಟ್‌ಗಳು ಶಾಹಿನ್ ಪಾಲಾಗಿದ್ದವು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಈ ನಾಲ್ವರ ವಿಕೆಟ್‌ಗಳನ್ನು ಶಾಹಿನ್ ಕಬಳಿಸಿದ್ದಾರೆ. ಅದರಲ್ಲೂ ರೋಹಿತ್ ಹಾಗೂ ಕೊಹ್ಲಿ ಅವರನ್ನು ಅಗ್ಗಕ್ಕೆ ಔಟ್ ಮಾಡುವ ಮೂಲಕ ಪಾಕ್‌ಗೆ ಆರಂಭಿಕ ಮುನ್ನಡೆ ಒದಗಿಸುವಲ್ಲಿ ಈ ವೇಗಿ ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನ ಆಡುವ ಬಳಗ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್
ಬೆಂಚ್: ಫಹೀಮ್ ಅಶ್ರಫ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಾಸಿಂ ಜೂನಿಯರ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಉಸಾಮಾ ಮಿರ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications