ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇವದತ್ ಪಡಿಕ್ಕಲ್‌ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಿ: ನೆಟ್ಟಿಗರ ಕೂಗು

Padikkal 4 Consecutive Centuries in Vijay Hazare Trophy, Fans demad his inclusion in Indian Team

ಕಳೆದ ಬಾರಿಯ ಐಪಿಎಲ್‌ನಲ್ಲಿ ಮಿಂಚಿದ್ದ ದೇವದತ್ ಪಡಿಕ್ಕಲ್ ಅವರು ಇದೀಗ ವಿಜಯ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಸತತವಾಗಿ 4 ಶತಕಗಳನ್ನು ಬಾರಿಸಿರುವ ದೇವದತ್ ಪಡಿಕ್ಕಲ್ ಅವರು ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್ ಮುಂದುವರೆಸಿದ್ದಾರೆ.

ತಮ್ಮ ಉತ್ತಮ ಆಟದಿಂದ ಮಿಂಚುತ್ತಿರುವ ದೇವದತ್ ಪಡಿಕ್ಕಲ್ ಅವರು ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಒಟ್ಟು 6 ಪಂದ್ಯಗಳನ್ನು ಆಡಿದ್ದು , ಅದರಲ್ಲಿ ಅವರು ಗಳಿಸಿರುವ ಅತಿ ಕನಿಷ್ಠ ಮೊತ್ತ 52 ಮತ್ತು ಗರಿಷ್ಠ ಮೊತ್ತ 152 ಆಗಿದೆ.

ಸೋಮವಾರ ( ಮಾರ್ಚ್ 08 ) ದಂದು ದೇವದತ್ ಪಡಿಕ್ಕಲ್ ಅವರು ಕೇರಳ ತಂಡದ ವಿರುದ್ಧ 101 ರನ್ ಬಾರಿಸುವುದರ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಸತತ ನಾಲ್ಕನೇ ಶತಕವನ್ನು ಸಿಡಿಸಿದರು. ದೇವದತ್ ಪಡಿಕ್ಕಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ 52 ರನ್ ಬಾರಿಸಿದ್ದರು , ಎರಡನೇ ಪಂದ್ಯದಲ್ಲಿ ಬಿಹಾರ ವಿರುದ್ಧ 97 ರನ್ ಗಳಿಸಿ ಶತಕವಂಚಿತರಾಗಿದ್ದರು.

ಆದರೆ ಮೂರನೇ ಪಂದ್ಯದಿಂದ ದೇವದತ್ ಪಡಿಕಲ್ ಅವರು ಶತಕವನ್ನು ಮಿಸ್ ಮಾಡಿಕೊಳ್ಳದೇ ಸತತವಾಗಿ 4 ಶತಕಗಳನ್ನು ಸಿಡಿಸಿದ್ದಾರೆ. ದೇವದತ್ ಪಡಿಕ್ಕಲ್ ಅವರು ಬಾರಿಸಿದ 4 ಶತಕಗಳ ಪೈಕಿ ಮೊದಲನೆಯ ಶತಕ ಒಡಿಶಾ ವಿರುದ್ಧ 152 ರನ್ ಗಳಿಸುವುದರ ಬಂದಿದೆ. ಕೇರಳ ವಿರುದ್ಧ 126 ರನ್ ಬಾರಿಸುವುದರ ಮೂಲಕ ಸತತ ಎರಡನೇ ಶತಕವನ್ನು ದೇವದತ್ ಪಡಿಕ್ಕಲ್ ಪೂರೈಸಿದರು. ರೈಲ್ವೇಸ್ ವಿರುದ್ಧ ಮೂರನೆ ಶತಕ ಸಿಡಿಸಿದ ದೇವದತ್ ಪಡಿಕ್ಕಲ್ ಆ ಪಂದ್ಯದಲ್ಲಿ ಆಕರ್ಷಕ 145 ರನ್ ಗಳಿಸಿದರು. ಪಡಿಕ್ಕಲ್ ಅವರ ಈ ಭರ್ಜರಿ ಆಟದ ನೆರವಿನಿಂದ ಕರ್ನಾಟಕ ತಂಡ ಗ್ರೂಪ್ ಸಿ ಟಾಪರ್ ಆಗಿದ್ದಷ್ಟೇ ಅಲ್ಲದೆ ಕ್ವಾರ್ಟರ್ ಫೈನಲ್‌ಗೂ ಸಹ ಅರ್ಹತೆ ಪಡೆದುಕೊಂಡಿತು.



ಕ್ವಾರ್ಟರ್ ಫೈನಲ್‌ನಲ್ಲಿಯೂ ಸಹ ದೇವದತ್ ಪಡಿಕ್ಕಲ್ ಅವರು 101 ರನ್ ಕಲೆ ಹಾಕಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು. ನಾಯಕ ಸಮರ್ಥ್ ಆರ್ ಅವರ ಜತೆಗೂಡಿ 249 ರನ್ ಜತೆಯಾಟ ನೀಡಿದರು. 119 ಎಸೆತಗಳಲ್ಲಿ 101 ರನ್ ಬಾರಿಸಿದ ಪಡಿಕ್ಕಲ್ ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಸೇರಿತ್ತು.


ಹೀಗೆ ಅತ್ಯುನ್ನತ ಫಾರ್ಮ್ ಹೊಂದಿರುವ ದೇವದತ್ ಪಡಿಕ್ಕಲ್ ಅವರನ್ನು ಟೀಮ್ ಇಂಡಿಯಾಗೆ ಸೆಲೆಕ್ಟ್ ಮಾಡಬೇಕು ಎಂದು ಟ್ವಿಟ್ಟರ್‌ನಲ್ಲಿ ಅಭಿಯಾನ ಆರಂಭವಾಗಿದೆ. ಕಳೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಸಹ ಉತ್ತಮ ಪ್ರದರ್ಶನವನ್ನು ನೀಡಿರುವ ದೇವದತ್ ಪಡಿಕ್ಕಲ್ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲೇಬೇಕು ಎಂದು ಟ್ವಿಟ್ಟಿಗರು ಸಾಲು ಸಾಲು ಟ್ವೀಟ್ ಮಾಡುತ್ತಿದ್ದಾರೆ.


Story first published: Tuesday, March 9, 2021, 18:51 [IST]
Other articles published on Mar 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X