ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'42ರಲ್ಲಿ ಪೇಸ್ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲಬಲ್ಲರು, ನಾನೊಂದಿಷ್ಟು ಕ್ರಿಕೆಟ್ ಆಡಬಲ್ಲೆ'

Paes won Grand Slams at 42, I can at least still play some cricket: Sreesanth

ನವದೆಹಲಿ, ಮಾರ್ಚ್ 15: ಭಾರತದ ಟೆನಿಸ್ ಸ್ಟಾರ್ ಲಿಯಾಂಡರ್ ಪೇಸ್ 42ರ ಹರೆಯದಲ್ಲಿ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲೋದಾದರೆ 36ರಲ್ಲಿ ನಾನೂ ಒಂದಿಷ್ಟು ಕ್ರಿಕೆಟ್ ಆಡಬಲ್ಲೆ ಎಂದು ಕ್ರಿಕೆಟರ್ ಶ್ರೀಶಾಂತ್ ಹೇಳಿದ್ದಾರೆ. 2013ರಲ್ಲಿ ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿ ಬಿಸಿಸಿಐ ಶ್ರೀಶಾಂತ್ ಮೇಲೆ ಹೇರಿದ್ದ ಜೀವನಪರ್ಯಂತ ನಿಷೇಧವನ್ನು ತೆರವುಗೊಳಿಸುವಂತೆ ಸುಪ್ರೀಮ್ ಕೋರ್ಟ್ ತೀರ್ಪಿತ್ತ ಬಳಿಕ ಶ್ರೀಶಾಂತ್ ಖುಷಿ ಹಂಚಿಕೊಂಡರು (ಚಿತ್ರಕೃಪೆ: ಪಿಟಿಐ).

ಧೋನೀನಾ-ಕೊಹ್ಲೀನಾ?: ಅದ್ದೂರಿ ಐಪಿಎಲ್‌ಗೊಂದು ಕಲರ್‌ಫುಲ್ ವಿಡಿಯೋಧೋನೀನಾ-ಕೊಹ್ಲೀನಾ?: ಅದ್ದೂರಿ ಐಪಿಎಲ್‌ಗೊಂದು ಕಲರ್‌ಫುಲ್ ವಿಡಿಯೋ

2013ರಲ್ಲಿ ಬಿಸಿಸಿಐ ಶಿಸ್ತು ಸಮಿತಿಯಿಂದ ಶ್ರೀಶಾಂತ್ ಸೇರಿ ಮುಂಬೈ ಸ್ಪಿನ್ನರ್ ಅಂಕಿತ್ ಚೌವಾಣ್, ಹರ್ಯಾಣದ ಅಜಿತ್ ಚಾಂಡಿಲಾ ಜೀವನ ಪರ್ಯಂತ ನಿಷೇಧಕ್ಕೆ ಗುರಿಯಾಗಿದ್ದರು. ಬಿಸಿಸಿಐಯ ಈ ನಿರ್ಧಾರವನ್ನು ಆಟಗಾರರು ಕೋರ್ಟ್ ಮೂಲಕ ಪ್ರಶ್ನಿಸಿದ್ದರು.

ಶುಕ್ರವಾರ (ಮಾರ್ಚ್ 15) ಅಪೆಕ್ಸ್ ಕೋರ್ಟ್ ನಿಂದ ತಮ್ಮ ಪರವಾಗಿ ತೀರ್ಪು ಪ್ರಕಟವಾದ ಬಳಿಕ ಮಾತನಾಡಿದ ಶ್ರೀಶಾಂತ್, 'ಈ ಇಷ್ಟು ವರ್ಷಗಳನ್ನು ಹೀಗೆ ಕಳೆದ ಮೇಲೆ ಬದುಕಿನಲ್ಲಿ ಇನ್ನೇನು ಉಳಿದಿದೆಯೋ ನಂಗೆ ಗೊತ್ತಿಲ್ಲ. ನನ್ನ ಬದುಕೇ ಆಗಿದ್ದ ಕ್ರಿಕೆಟನ್ನು ನಾನು 6 ವರ್ಷಗಳ ಕಾಲ ಆಡಲೇ ಆಗಲಿಲ್ಲ' ಎಂದು ಭಾವುಕರಾದರು.

ಶ್ರೀಶಾಂತ್ ಮೇಲಿನ ನಿಷೇಧ ತೆರವುಗೊಳಿಸುವಂತೆ ಬಿಸಿಸಿಐಗೆ ಸೂಚನೆಶ್ರೀಶಾಂತ್ ಮೇಲಿನ ನಿಷೇಧ ತೆರವುಗೊಳಿಸುವಂತೆ ಬಿಸಿಸಿಐಗೆ ಸೂಚನೆ

'ದೇಶದ ಹೈಕೋರ್ಟ್ ನಿಂದ ಬಂದ ತೀರ್ಪನ್ನು ಗೌರವಿಸಿ, ನಾನು ಮೈದಾನಕ್ಕಿಳಿಯಲಾದರೂ ಬಿಸಿಸಿಐ ಅವಕಾಶ ಮಾಡಿಕೊಡುತ್ತದೆ ಎಂದು ನಾನು ಭಾವಿಸಿದ್ದೇನೆ. ನಾನು ಆಡುವಂತಿಲ್ಲ ಅಂತ ನಾನು ಹೇಳುತ್ತಿದ್ದ ಅದೇ ಶಾಲಾ ಕ್ರಿಕೆಟ್ ಮೈದಾನಕ್ಕೆ ತೆರಳಿ ನಾನು ಅಭ್ಯಾಸ ಮಾಡಬಲ್ಲೆ ಅಂದುಕೊಳ್ಳುತ್ತಿದ್ದೇನೆ' ಎಂದು ಶ್ರೀಶಾಂತ್ ಹೇಳಿದರು.

Story first published: Friday, March 15, 2019, 17:26 [IST]
Other articles published on Mar 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X