ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ಷಣದಲ್ಲೇ ಅಣುಬಾಂಬ್‌ನಿಂದ ಭಾರತ ಸ್ವಚ್ಛಗೊಳಿಸ್ತೀವಿ ಎಂದ ಪಾಕ್ ಮಾಜಿ ಕ್ರಿಕೆಟಿಗ

Pak Cricketer Javed Miandad Threatens Indian With Nuclear Bomb

ಇಸ್ಲಾಮಾಬಾದ್, ಆಗಸ್ಟ್ 22: 'ಕ್ಷಣಮಾತ್ರದಲ್ಲಿ ಅಣುಬಾಂಬ್ ಸಿಡಿಸಿ ಭಾರತವನ್ನು ಸ್ವಚ್ಛ ಮಾಡಿಬಿಡ್ತೀವಿ'ಇದು ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರ ದುರಹಂಕಾರದ ಮಾತುಗಳು.

ಇದು ಪಾಕ್ ಜನರ ಹಗಲು ಕನಸು ಎಂದೇ ಹೇಳಬಹುದು. ಒಂದಲ್ಲಾ ಒಂದು ವಿಚಾರಕ್ಕೆ ಭಾರತದ ಕಾಲೆಳೆಯದಿದ್ದರೇ ಪಾಕಿಸ್ತಾನದವರಿಗೆ ತಿನ್ನುವ ಊಟ ರುಚಿಸಲ್ಲ ಎಂದೆನಿಸುತ್ತದೆ.

ಭಯೋತ್ಪಾದನೆ ಬರಹ: ಆಸ್ಟ್ರೇಲಿಯಾ ಕ್ರಿಕೆಟಿಗ ಖವಾಜಾ ಸಹೋದರ ಬಂಧನ

ಇದೀಗ ಪ್ರಧಾನಿಯದ್ದಾಯ್ತು ಮಾಜಿ ಕ್ರಿಕೆಟಿಗ ಹೊಸ ವರಸೆ ಆರಂಭಿಸಿದ್ದಾನೆ.ಪಾಕ್ ಬಳಿ ಅಣ್ವಸ್ತ್ರ ಇದ್ದು, ಭಾರತವನ್ನು ಕ್ಷಣಾರ್ಧದಲ್ಲಿ ಉಡಾಯಿಸುವ ಸಾಮರ್ಥ್ಯ ಅದಕ್ಕಿದೆ ಎಂದು ಮಿಯಾಂದಾದ್ ನೇರವಾಗಿ ಅಣ್ವಸ್ತ್ರ ಬೆದರಿಕೆ ಹಾಕಿದ್ದಾನೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ವಿಧಿ ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಹೆಂಡ ಕುಡಿದ ಕೋತಿಯಂತೆ ಆಡುತ್ತಿದೆ.

ನಿನ್ನನ್ನು ನೀನು ರಕ್ಷಣೆ ಮಾಡಿಕೊಳ್ಳಲು ಯಾರನ್ನು ಬೇಕಾದರೂ ಕೊಲ್ಲಬಹುದು ಎಂಬ ನಿಯಮ ವಿಶ್ವಾದ್ಯಂತ ಇದೆ. ಹೀಗಾಗಿ ಮೊದಲು ಪಾಕಿಸ್ತಾನವೇ ದಾಳಿ ಮಾಡಬೇಕು. ಆಗ ಭಾರತಕ್ಕೆ ತನ್ನ ತಪ್ಪಿನ ಅರಿವಾಗುತ್ತದೆ ಮಿಯಾಂದಾದ್ ಹೇಳಿದ್ದಾರೆ.

ವಿಶ್ವದ ಐದನೇ ಪರಮಾಣು ಶಕ್ತಿಯಾಗಿ ಪಾಕ್? ಟಾಪ್ 10 ಪರಮಾಣು ರಾಷ್ಟ್ರಗಳ ಪಟ್ಟಿ

ಪಾಕಿಸ್ಥಾನ ಒಂದೇ ಒಂದು ಅಣುಬಾಂಬ್​ ಮೂಲಕ ಭಾರತವನ್ನು ಗುಡಿಸಿ ಸ್ವಚ್ಛಗೊಳಿಸುತ್ತೆ ಎಂದು ಎಚ್ಚರಿಕೆ ನೀಡಿದ್ದಾನೆ. ಪಾಕಿಸ್ತಾನ ಲೈಸೆನ್ಸ್​ ಹೊಂದಿರೋ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದಿರುವ ಮಿಯಾಂದಾದ್, ನಮ್ಮನ್ನ ನಾವು ರಕ್ಷಣೆ ಮಾಡ್ಕೊಳ್ಳೋಕೆ ಯಾರನ್ನೂ ಬೇಕಾದ್ರೂ ಕೊಲ್ಲಬಹುದು ಎಂಬ ನಿಯಮ ಜಗತ್ತಿನಾದ್ಯಂತ ಇದೆ.

ಹೀಗಾಗಿ ಪಾಕಿಸ್ತಾನವೇ ಮೊದಲು ದಾಳಿ ಮಾಡಿ ಎಚ್ಚರಿಕೆ ನೀಡಬೇಕು. ಆಗ ಭಾರತಕ್ಕೆ ತನ್ನ ತಪ್ಪಿನ ಅರಿವಾಗಿ ಸುಮ್ಮನಾಗುತ್ತೆ ಎಂದು ಮೊಂಡು ಹೇಳಿಕೆ ನೀಡಿದ್ದಾನೆ.

Story first published: Friday, August 23, 2019, 13:28 [IST]
Other articles published on Aug 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X