ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಮ್ಮ ವಿವಾಹಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸಲಿರುವ ಪಾಕ್‌ ಕ್ರಿಕೆಟಿಗ

Pak Pacer Hasan Ali 2019

ಕರಾಚಿ, ಆಗಸ್ಟ್‌ 05: ಪಾಕಿಸ್ತಾನ ತಂಡದ ವೇಗದ ಬೌಲರ್‌ ಹಸನ್‌ ಅಲಿ ಭಾರತೀಯ ವಧುವನ್ನು ವರಿಸಲಿರುವುದು ಖಾತ್ರಿಯಾಗಿದ್ದು, ಸೆಪ್ಟೆಂಬರ್‌ 20ರಂದು ದುಬೈನಲ್ಲಿ ನಡೆಯಲಿರುವ ವಿವಾಹ ಸಮಾರಂಭಕ್ಕೆ ಭಾರತೀಯ ಕ್ರಿಕೆಟಿಗರನ್ನೂ ಆಹ್ವಾನಿಸುವುದಾಗಿ ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ತಮ್ಮ ಮದುವೆ ಸುದ್ದಿ ಹೊರ ಬೀಳುತ್ತಿದ್ದಂತೇ ಹೇಳಿಕೆ ನೀಡಿ, ಇನ್ನೂ ಖಾತ್ರಿಯಾಗಿಲ್ಲ ಎರಡೂ ಮನೆ ಕಡೆಯಿಂದ ಮಾತೂಕತೆ ನಡೆಯುತ್ತಿದೆ ಎಂದಿದ್ದ ಅಲಿ, ಇದೀಗ ಭಾರತೀಯ ಕ್ರಿಕೆಟಿಗರನ್ನು ಆಹ್ವಾನಿಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ನಿರ್ದಿಷ್ಟವಾಗಿ ಯಾರನ್ನು ಆಹ್ವಾನಿಸುತ್ತಿರುವುದಾಗಿ ಅವರು ಬಾಯ್ಬಿಟ್ಟಿಲ್ಲ.

ಅತಿಯಾಗಿ ವರ್ತಿಸಿದ ನವದೀಪ್‌ ಸೈನಿಗೆ ಐಸಿಸಿಯಿಂದ ಖಢಕ್‌ ವಾರ್ನಿಂಗ್‌!ಅತಿಯಾಗಿ ವರ್ತಿಸಿದ ನವದೀಪ್‌ ಸೈನಿಗೆ ಐಸಿಸಿಯಿಂದ ಖಢಕ್‌ ವಾರ್ನಿಂಗ್‌!

"ವಿವಾಹ ಸಮಾರಂಭಕ್ಕೆ ಭಾರತೀಯ ಕ್ರಿಕೆಟ್‌ ತಂಡದ ಆಟಗಾರರನ್ನು ಆಹ್ವಾನಿಸುತ್ತೇನೆ. ನಾವೆಲ್ಲರೂ ಕ್ರಿಕೆಟ್‌ ಆಟಗಾರರು," ಎಂದು ಸ್ಥಳೀಯ ಪತ್ರಿಕೆ ಉರ್ದು ಎಕ್ಸ್‌ಪ್ರೆಸ್‌ಗೆ ಅಲಿ ಹೇಳಿಕೆ ನೀಡಿದ್ದಾರೆ.

"ದುಬೈನಲ್ಲಿ ನಡೆಯಲಿರುವ ವಿವಾಹ ಸಮಾರಂಭಕ್ಕೆ ಭಾರತೀಯ ಕ್ರಿಕೆಟಿಗರು ಆಗಮಿಸಿದರೆ ಬಹಳ ಸಂತಸವಾಗಲಿದೆ. ಸ್ಪರ್ಧೆ ಏನಿದ್ದರೂ ಕ್ರಿಕೆಟ್‌ ಮೈದಾನದ ಒಳಗೆ ಹೊರಗಲ್ಲ. ಅಂತಿಮವಾಗಿ ನಾವೆಲ್ಲರೂ ವೃತ್ತಿಪರ ಕ್ರಿಕೆಟಿಗರು. ಸಂಭ್ರಮವನ್ನು ಹಂಚಿಕೊಳ್ಳಬೇಕು," ಎಂದು ಹೇಳಿದ್ದಾರೆ.

ಕಿಂಗ್‌ ಕೊಹ್ಲಿ ದಾಖಲೆ ಪುಡಿಗಟ್ಟಿದ ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌!ಕಿಂಗ್‌ ಕೊಹ್ಲಿ ದಾಖಲೆ ಪುಡಿಗಟ್ಟಿದ ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌!

ಹಸನ್‌ ಮತ್ತು ಶಮಿಯಾ ಅವರ ವಿವಾವ ದುಬೈನ ಅಟ್ಲಾಂಟಿಸ್‌ ಪಾಮ್‌ ಹೋಟೆಲ್‌ನಲ್ಲಿ ನಡೆಯಲಿದ್ದು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹ ನಡೆಯಲಿದೆ. ಈ ವಿಚಾರವನ್ನು ಶಮಿಯಾ ಅವರ ತಂದೆ ಲಿಯಾಖತ್‌ ಅಲಿ ಈ ಮೊದಲು ಖಾತ್ರಿ ಪಡಿಸಿದ್ದರು.

ಮಾನವ್‌ ರಚನಾ ಯೂನಿವರ್ಸಿಟಿಯಲ್ಲಿ ಏರೊನಾಟಿಕಲ್ಸ್‌ನಲ್ಲಿ ಬಿ.ಟೆಕ್‌ ಪದವಿ ಪಡೆದಿರುವ ಶಮಿಯಾ, ಸದ್ಯ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯಲ್ಲಿ ಫ್ಲೈಟ್‌ ಎಂಜಿನೀಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ದುಬೈನಲ್ಲಿ ನೆಲೆಸಿದ್ದಾರೆ. ಆದರೆ ಅವರ ಕುಟುಂಬ ಸದಸ್ಯರು ದಿಲ್ಲಿಯಲ್ಲಿ ನೆಲೆಸಿದ್ದಾರೆ.

ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!

ಪಾಕಿಸ್ತಾನದ ಕ್ರಿಕೆಟಿಗರು ಭಾರತೀಯ ವಧುವನ್ನು ವರಿಸುತ್ತಿರುವುದು ಇದು ಮೊದಲೇನಲ್ಲ. ಪಾಕ್‌ ಕ್ರಿಕೆಟ್‌ ತಂಡದ ಮಾಜಿ ದಿಗ್ಗಜರಾದ ಜಾಹಿರ್‌ ಅಬ್ಬಾಸ್‌ ಮತ್ತು ಮೊಹ್ಸಿನ್‌ ಖಾನ್‌ ಈ ಪಟ್ಟಿಯಲ್ಲಿ ಮುಂದಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಡೆದ ವಿಶ್ವಕಪ್‌ ಟೂರ್ನಿಯೊಂದಿಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ರೌಂಡರ್‌ ಶೊಯೇಬ್‌ ಮಲಿಕ್‌, ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಝಾ ಅವರೊಟ್ಟಿಗೆ 2010ರ ಏಪ್ರಿಲ್‌ 12ರಂದು ವಿವಾಹ ಬಂಧನಕ್ಕೆ ಕಾಲಿಟ್ಟಿದ್ದರು.

Story first published: Monday, August 5, 2019, 16:13 [IST]
Other articles published on Aug 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X