ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

PAK vs ENG 2ನೇ ಟಿ20: ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಬಾಬರ್ ಅಜಂ

PAK vs ENG 2nd T20: Babar Azam Breaks Another Milestone Of Indias Virat Kohli

ನಾಯಕ ಬಾಬರ್ ಅಜಮ (ಔಟಾಗದೆ 110 ರನ್) ಅವರ ಅದ್ಭುತ ಶತಕದ ಜೊತೆಗೆ ಮೊಹಮ್ಮದ್ ರಿಜ್ವಾನ್ (ಅಜೇಯ 88 ರನ್) ಅವರ ಅದ್ಭುತ ಪ್ರದರ್ಶನದೊಂದಿಗೆ ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಲು ಮತ್ತು ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 1-1ರಿಂದ ಸರಣಿಯನ್ನು ಸಮಬಲಗೊಳಿಸಿದೆ.

PAK vs ENG: ರೋಹಿತ್-ಧವನ್ ಟಿ20 ದಾಖಲೆ ಜೊತೆಯಾಟ ಹಿಂದಿಕ್ಕಿದ ಬಾಬರ್-ರಿಜ್ವಾನ್ ಜೋಡಿPAK vs ENG: ರೋಹಿತ್-ಧವನ್ ಟಿ20 ದಾಖಲೆ ಜೊತೆಯಾಟ ಹಿಂದಿಕ್ಕಿದ ಬಾಬರ್-ರಿಜ್ವಾನ್ ಜೋಡಿ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ಗೆ ಅಲೆಕ್ಸ್ ಹೇಲ್ಸ್ ಮತ್ತು ಫಿಲ್ ಸಾಲ್ಟ್ ಮೊದಲ ಐದು ಓವರ್‌ಗಳಲ್ಲಿ 42 ರನ್‌ಗಳ ಜೊತೆಯಾಟವನ್ನು ನೀಡಿದರು. ಸಾಲ್ಟ್ ಅವರು ಮೊಹಮ್ಮದ್ ನವಾಜ್ ಬೌಲಿಂಗ್‌ನಲ್ಲಿ ಒಂದು ಸಿಕ್ಸರ್‌ನೊಂದಿಗೆ ಇಂಗ್ಲೆಂಡ್‌ಗೆ ರನ್ ಚಾಲನೆ ನೀಡಿದರು ಮತ್ತು ಹೇಲ್ಸ್ ಮುಂದಿನ ಓವರ್‌ನಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್‌ನೊಂದಿಗೆ ಅಬ್ಬರಿಸಿದರು.

ಬಾಬರ್ ಅಜಂ ತಮ್ಮ ಶತಕದ ಹಾದಿಯಲ್ಲಿ 8,000 ಟಿ20 ರನ್‌

ಬಾಬರ್ ಅಜಂ ತಮ್ಮ ಶತಕದ ಹಾದಿಯಲ್ಲಿ 8,000 ಟಿ20 ರನ್‌

ಇನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ತಮ್ಮ ಶತಕದ ಹಾದಿಯಲ್ಲಿ 8,000 ಟಿ20 ರನ್‌ಗಳನ್ನು ಪೂರ್ಣಗೊಳಿಸಿದರು. ವೆಸ್ಟ್ ಇಂಡಿಯಾದ ದಂತಕಥೆ ಕ್ರಿಸ್ ಗೇಲ್ ನಂತರ ಈ ಹೆಗ್ಗುರುತನ್ನು ಅತಿ ವೇಗವಾಗಿ ಸಾಧಿಸಿದ ಎರಡನೇ ಆಟಗಾರರಾದರು.

ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 243 ಇನ್ನಿಂಗ್ಸ್‌ಗಳಲ್ಲಿ 8,000 ರನ್ ಪೂರೈಸಿದ ದಾಖಲೆಯನ್ನು ಮುರಿದರು. ಬಾಬರ್ ಅಜಂ ಕೇವಲ 218 ಇನ್ನಿಂಗ್ಸ್‌ಗಳಲ್ಲಿ ಈ ಹೆಗ್ಗುರುತನ್ನು ತಲುಪಿದರು. ಕ್ರಿಸ್ ಗೇಲ್ 214 ಇನ್ನಿಂಗ್ಸ್‌ಗಳಲ್ಲಿ 8 ಸಾವಿರ ರನ್ ಗಳಿಸುವ ಮೂಲಕ ದಾಖಲೆ ಹೊಂದಿದ್ದಾರೆ.

ಟಿ20 ಪಂದ್ಯಗಳಲ್ಲಿ ವೇಗವಾಗಿ 8,000 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಟಿ20 ಪಂದ್ಯಗಳಲ್ಲಿ ವೇಗವಾಗಿ 8,000 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 214 ಇನ್ನಿಂಗ್ಸ್

ಬಾಬರ್ ಅಜಂ (ಪಾಕಿಸ್ತಾನ) - 218 ಇನ್ನಿಂಗ್ಸ್

ವಿರಾಟ್ ಕೊಹ್ಲಿ (ಭಾರತ) - 243 ಇನ್ನಿಂಗ್ಸ್

ಆರನ್ ಫಿಂಚ್ (ಆಸ್ಟ್ರೇಲಿಯ) - 254 ಇನ್ನಿಂಗ್ಸ್

ಡೇವಿಡ್ ವಾರ್ನರ್ (ಆಸ್ಟ್ರೇಲಿಯ) - 256 ಇನ್ನಿಂಗ್ಸ್

ಚೇಸಿಂಗ್ ಮಾಡುವಾಗ 203 ಅಜೇಯ ರನ್‌ ಗಳಿಸಿದ ಪಾಕ್ ಜೋಡಿ

ಚೇಸಿಂಗ್ ಮಾಡುವಾಗ 203 ಅಜೇಯ ರನ್‌ ಗಳಿಸಿದ ಪಾಕ್ ಜೋಡಿ

ಇನ್ನು ಪಾಕಿಸ್ತಾನ ಮತ್ತು ಇಂಗ್ಲೆಂಡ್ ಪಂದ್ಯದ ಕುರಿತು ಹೇಳುವುದಾದರೆ, ಕೊನೆಯ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳೊಂದಿಗೆ, ಮೊಯಿನ್ ಅಲಿ ತಮ್ಮ ಅರ್ಧಶತಕವನ್ನು ಗಳಿಸಿದರು ಮತ್ತು ಪಾಕಿಸ್ತಾನಕ್ಕೆ 20 ಓವರ್‌ಗಳಲ್ಲಿ 199-5 ರನ್ನುಗಳ ಸವಾಲಿನ ಮೊತ್ತ ನೀಡಲು ಕಾರಣರಾದರು.

ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಓವರ್‌ಗೆ 10 ರನ್‌ಗಳನ್ನು ಬೆನ್ನಟ್ಟುವ ಅಗತ್ಯವಿತ್ತು. ಮೊಹಮ್ಮದ್ ರಿಜ್ವಾನ್ ಮೊದಲ ಓವರ್‌ನಲ್ಲಿ ಎರಡು ಬೌಂಡರಿಗಳೊಂದಿಗೆ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದರು. ಬಾಬರ್ ಅಜಂ ಕೂಡ ಸ್ಯಾಮ್ ಕರ್ರಾನ್ ಅವರ ಮೂರನೇ ಓವರ್‌ನಲ್ಲಿ ತಾವೂ ಎರಡು ಬೌಂಡರಿಗಳನ್ನು ಗಳಿಸಿ, ಅಬ್ಬರಿಸುವ ಸೂಚನೆ ನೀಡಿದರು.

ಚೇಸಿಂಗ್ ಮಾಡುವಾಗ 203 ಅಜೇಯ ರನ್‌ಗಳನ್ನು ಗಳಿಸುವ ಮೂಲಕ ಇವರಿಬ್ಬರು ಅತ್ಯಧಿಕ ಆರಂಭಿಕ ಜೊತೆಯಾಟವನ್ನು ನೀಡಿದರು. ಕಳೆದ ವರ್ಷ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರು ಸ್ಥಾಪಿಸಿದ ತಮ್ಮದೇ ಆದ ದಾಖಲೆಯನ್ನು ಮುರಿದರು.

ಚೇಸಿಂಗ್ ಮಾಡುವಾಗ ಅತ್ಯಧಿಕ ಆರಂಭಿಕ ಜೊತೆಯಾಟ

ಚೇಸಿಂಗ್ ಮಾಡುವಾಗ ಅತ್ಯಧಿಕ ಆರಂಭಿಕ ಜೊತೆಯಾಟ

ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್- ಇಂಗ್ಲೆಂಡ್ ವಿರುದ್ಧ 203 ರನ್ (2022)

ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ - ದಕ್ಷಿಣ ಆಫ್ರಿಕಾ ವಿರುದ್ಧ 197 ರನ್ (2021)

ಆರೋನ್ ಫಿಂಚ್ ಮತ್ತು ಜೇಸನ್ ರಾಯ್ (ಸರ್ರೆ) - ಮಿಡಲ್‌ಸೆಕ್ಸ್ ವಿರುದ್ಧ 194 ರನ್ (2018)

ನಮನ್ ಓಜಾ ಮತ್ತು ಡೇವಿಡ್ ವಾರ್ನರ್ (ದೆಹಲಿ ಡೇರ್‌ಡೆವಿಲ್ಸ್) - ಡೆಕ್ಕನ್ ಚಾರ್ಜರ್ಸ್ ವಿರುದ್ಧ 189 ರನ್ (2012)

ನೀಲ್ ಬ್ರೂಮ್ ಮತ್ತು ಬ್ರೆಂಡನ್ ಮೆಕಲಂ (ಒಟಾಗೊ) - ಉತ್ತರ ಜಿಲ್ಲೆಗಳ ವಿರುದ್ಧ 188 ರನ್ (2012)

Story first published: Friday, September 23, 2022, 15:25 [IST]
Other articles published on Sep 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X