ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

PAK vs ENG 4ನೇ ಟಿ20: ವಿರಾಟ್ ಕೊಹ್ಲಿಯ ಪ್ರಮುಖ ದಾಖಲೆ ಮೇಲೆ ಕಣ್ಣಿಟ್ಟಿರುವ ಬಾಬರ್ ಅಜಂ

PAK vs ENG 4th T20I: Babar Azam Eyes On Virat Kohlis Major Record In T20 Cricket

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆಯನ್ನು ಮುರಿಯುವ ಹೊಸ್ತಿಲಲ್ಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮಾರ್ಟಿನ್ ಗಪ್ಟಿಲ್ ಮತ್ತು ಪಾಲ್ ಸ್ಟಿರ್ಲಿಂಗ್ ನಂತರ ಟಿ20 ಪಂದ್ಯಗಳಲ್ಲಿ 3000 ರನ್ ಗಳಿಸಿದ ಐದನೇ ಬ್ಯಾಟರ್ ಆಗಲು ಪಾಕಿಸ್ತಾನದ ನಾಯಕನಿಗೆ ಕೇವಲ 97 ರನ್ ಅಗತ್ಯವಿದೆ.

ಇದಲ್ಲದೆ, 27 ವರ್ಷದ ಬಾಬರ್ ಅಜಂ ತನ್ನ ಮುಂದಿನ ಎರಡು ಇನ್ನಿಂಗ್ಸ್‌ಗಳಲ್ಲಿ ಆ ರನ್‌ಗಳನ್ನು ಪಡೆದರೆ, ಅವರು ಟಿ20 ಪಂದ್ಯಗಳಲ್ಲಿ 3000 ರನ್‌ಗಳ ಹೆಗ್ಗುರುತನ್ನು ತಲುಪಿದ ವೇಗದ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

IND vs AUS: ನಿರ್ಣಾಯಕ 3ನೇ ಪಂದ್ಯದಲ್ಲಿ ಆಸೀಸ್ ವಿರುದ್ಧ ಭಾರತದ ಆಡುವ 11ರ ಬಳಗ; ಪಂತ್ ಬದಲಿಗೆ ಭುವಿ?IND vs AUS: ನಿರ್ಣಾಯಕ 3ನೇ ಪಂದ್ಯದಲ್ಲಿ ಆಸೀಸ್ ವಿರುದ್ಧ ಭಾರತದ ಆಡುವ 11ರ ಬಳಗ; ಪಂತ್ ಬದಲಿಗೆ ಭುವಿ?

ಪ್ರಸ್ತುತ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 81 ಇನ್ನಿಂಗ್ಸ್‌ಗಳಲ್ಲಿ ಮೈಲಿಗಲ್ಲನ್ನು ಸಾಧಿಸಿದ ನಂತರ 3000 ರನ್‌ಗಳ ದಾಖಲೆಯನ್ನು ಹೊಂದಿದ್ದಾರೆ. 33 ವರ್ಷ ವಯಸ್ಸಿನ ಬಲಗೈ ಬ್ಯಾಟರ್ ಕೊಹ್ಲಿ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಭಾರತದ ದ್ವಿಪಕ್ಷೀಯ ಟಿ20 ಸರಣಿಯ ಸಂದರ್ಭದಲ್ಲಿ ಈ ಸಾಧನೆ ಮಾಡಿದರು.

ಬಾಬರ್ ಅಜಂ ಪ್ರಸ್ತುತ ಸಹ ಆಟಗಾರ ಮೊಹಮ್ಮದ್ ರಿಜ್ವಾನ್ ಜೊತೆಗೆ 2000 ಟಿ20 ರನ್‌ಗಳನ್ನು ವೇಗವಾಗಿ ಪೂರೈಸಿದ ದಾಖಲೆಯನ್ನು ಹೊಂದಿದ್ದಾರೆ. ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಇಬ್ಬರೂ 52 ಇನ್ನಿಂಗ್ಸ್‌ಗಳಲ್ಲಿ ಮೈಲಿಗಲ್ಲನ್ನು ತಲುಪಿದರು.

PAK vs ENG 4th T20I: Babar Azam Eyes On Virat Kohlis Major Record In T20 Cricket

ಲಾಹೋರ್ ಮೂಲದ ಬಾಬರ್ ಅಜಂ ಅವರು ಸೆಪ್ಟೆಂಬರ್ 25ರ ಭಾನುವಾರದಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಳು ಪಂದ್ಯಗಳ ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲಿ ಆಡಲು ಸಿದ್ಧರಾಗಿದ್ದಾರೆ.

ಸರಣಿಯ ಮೊದಲ ಪಂದ್ಯದಲ್ಲಿ ಬಾಬರ್ ಅಜಂ 31 ರನ್ ಗಳಿಸುವ ಮೂಲಕ ಸರಣಿಯನ್ನು ಪ್ರಾರಂಭಿಸಿದರು. ಅದರ ನಂತರ, ಅವರು ಎರಡನೇ ಟಿ20 ಪಂದ್ಯದಲ್ಲಿ ಅಜೇಯ 66 ಎಸೆತಗಳಲ್ಲಿ 110 ರನ್ ಗಳಿಸುವುದರೊಂದಿಗೆ ಪಾಕಿಸ್ತಾನವನ್ನು ಸರಣಿಯಲ್ಲಿ ಸಮಬಲಗೊಳಿಸಲು ಸಹಾಯ ಮಾಡಿದರು.

IND vs AUS 3rd T20: ಭಾರತ vs ಆಸ್ಟ್ರೇಲಿಯ ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ತಂಡಗಳುIND vs AUS 3rd T20: ಭಾರತ vs ಆಸ್ಟ್ರೇಲಿಯ ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ತಂಡಗಳು

ಆ ಪಂದ್ಯದಲ್ಲಿ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಆರಂಭಿಕ ವಿಕೆಟ್‌ಗೆ ಅಜೇಯ 203 ರನ್‌ಗಳ ಜೊತೆಯಾಟವನ್ನು ಆಡಿ ಪಾಕಿಸ್ತಾನವನ್ನು ಗೆಲುವಿನ ಗೆರೆ ದಾಟಿಸಿದರು. ಆದರೆ, ಸರಣಿಯ 3ನೇ ಟಿ20ಯಲ್ಲಿ ಬಾಬರ್ ಅಜಂ ಮತ್ತೆ ಎಡವಿದರು.

PAK vs ENG 4th T20I: Babar Azam Eyes On Virat Kohlis Major Record In T20 Cricket

ಬಾಬರ್ ಅಜಂ ಇತ್ತೀಚೆಗೆ ಲೀನ್ ಪ್ಯಾಚ್ (ಕಳಪೆ ಫಾರ್ಮ್) ಮೂಲಕ ಸಾಗುತ್ತಿದ್ದರು, ಮತ್ತೆ ಫಾರ್ಮ್‌ಗೆ ಮರಳಿದರು. ಅವರ ಫಾರ್ಮ್‌ನಲ್ಲಿನ ಕುಸಿತದಿಂದಾಗಿ ಅವರು ಟಿ20 ಬ್ಯಾಟರ್‌ಗಳಿಗಾಗಿ ಐಸಿಸಿ ಶ್ರೇಯಾಂಕದಲ್ಲಿ ರಿಜ್ವಾನ್, ಐಡೆನ್ ಮಾರ್ಕ್ರಾಮ್ ಮತ್ತು ಸೂರ್ಯಕುಮಾರ್ ಯಾದವ್‌ಗಿಂತ ಕೆಳಗೆ ನಂ.4ನೇ ಸ್ಥಾನಕ್ಕೆ ಕುಸಿದರು.

IND vs AUS: 3ನೇ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಬಲ್ಲ 3 ಆಟಗಾರರು ಇವರೇ!IND vs AUS: 3ನೇ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಬಲ್ಲ 3 ಆಟಗಾರರು ಇವರೇ!

ಟಿ20 ಪಂದ್ಯಗಳ 78 ಇನ್ನಿಂಗ್ಸ್‌ಗಳಲ್ಲಿ ಬಾಬರ್ ಅಜಂ 43.32ರ ಸರಾಸರಿಯಲ್ಲಿ 2903 ರನ್ ಗಳಿಸಿದ್ದಾರೆ ಮತ್ತು 129.94ರ ಸ್ಟ್ರೈಕ್‌ರೇಟ್ ಜೊತೆಗೆ ಎರಡು ಶತಕಗಳು ಮತ್ತು ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ.

Story first published: Sunday, September 25, 2022, 16:52 [IST]
Other articles published on Sep 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X