ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

PAK vs ENG 1st Test : ರೋಚಕ ಹಂತ ತಲುಪಿದ ಪಾಕಿಸ್ತಾನ-ಇಂಗ್ಲೆಂಡ್ ಟೆಸ್ಟ್ ಪಂದ್ಯ

PAK Vs ENG: Pakistan Need 263 Runs To Win First Test, England Looking For Wickets

ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯ ಮೊದಲನೇ ಪಂದ್ಯ 4ನೇ ದಿನದಾಟ ಮುಕ್ತಾಯವಾಗಿದ್ದು, ಕೊನೆಯ ದಿನ ರೋಚಕ ಹಣಾಹಣಿ ನಿರೀಕ್ಷಿಸಬಹುದಾಗಿದೆ. ಪಾಕಿಸ್ತಾನದ ಗೆಲುವಿಗೆ 263 ರನ್‌ಗಳ ಅಗತ್ಯವಿದೆ. ಇಂಗ್ಲೆಂಡ್‌ ಗೆಲುವು ಸಾಧಿಸಲು 8 ವಿಕೆಟ್ ಬೇಕಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 264 ಗಳಿಸಿದ್ದಾಗ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತು. ಜೋ ರೂಟ್, ಹ್ಯಾರಿ ಬ್ರೂಕ್ ಅರ್ಧ ಶತಕ ಗಳಿಸುವ ಮೂಲಕ ಇಂಗ್ಲೆಂಡ್‌ಗೆ ಆಸರೆಯಾದರು. ಪಾಕಿಸ್ತಾನ ಗೆಲುವಿಗೆ ಇಂಗ್ಲೆಂಡ್ 343 ರನ್‌ಗಳ ಗುರಿಯನ್ನು ನೀಡಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭದಲ್ಲೇ ಆಘಾತ ನೀಡಿದ್ದು ಇಂಗ್ಲಿಷ್ ಬೌಲರ್ ಗಳು.

ನಾಥನ್ ಲಿಯಾನ್ ಸ್ಪಿನ್ ಮೋಡಿ : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದ ಆಸ್ಟ್ರೇಲಿಯಾನಾಥನ್ ಲಿಯಾನ್ ಸ್ಪಿನ್ ಮೋಡಿ : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದ ಆಸ್ಟ್ರೇಲಿಯಾ

ಅಬ್ದುಲ್ ಶಫೀಕ್ 6 ರನ್ ಗಳಿಸಿ ಔಟಾದರೆ, ನಾಯಕ ಬಾಬರ್ ಅಜಮ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಆಘಾತ ಅನುಭವಿಸಿದರು. ಅಜರ್ ಅಲಿ ಶೂನ್ಯಕ್ಕೆ ರಿಟೈರ್ಡ್ ಹರ್ಟ್ ಆದರು. ಇಮಾಮ್ ಉಲ್ ಹಕ್ ಮತ್ತು ಸೌದ್ ಶಕೀಲ್ 55 ರನ್‌ಗಳ ಜೊತೆಯಾಟ ಆಡುವ ಮೂಲಕ ತಮ್ಮ ವಿಕೆಟ್ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನದ ಗೆಲುವಿಗೆ ಇನ್ನೂ 263 ರನ್‌ ಗಳಿಸುವ ಅಗತ್ಯವಿದ್ದು. ಕೊನೆಯ ದಿನದಾಟ ರೋಚಕವಾಗಿರಲಿದೆ.

PAK Vs ENG: Pakistan Need 263 Runs To Win First Test, England Looking For Wickets

ರೂಟ್, ಬ್ರೂಕ್ ಉತ್ತಮ ಜೊತೆಯಾಟ

ಒಂದೆಡೆ ವಿಕೆಟ್ ಬೀಳುತ್ತಿದ್ದರು ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ವೇಗವಾಗಿ ರನ್ ಗಳಿಸಿದರು. ರೂಟ್ 69 ಎಸೆತಗಳಲ್ಲಿ 6 ಬೌಂಡರಿ ಸಹಿತ 73 ರನ್ ಗಳಿಸಿದರೆ, ಹ್ಯಾರಿ ಬ್ರೂಕ್ 11 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 65 ಎಸೆತಗಳಲ್ಲಿ 87 ರನ್ ಗಳಿಸಿ ಮಿಂಚಿದರು.

ಕೇವಲ 35.5 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 264 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ 343 ರನ್‌ಗಳ ಗುರಿಯನ್ನು ನೀಡಿತು. ನಸೀಮ್ ಶಾ, ಮೊಹಮ್ಮದ್ ಅಲಿ, ಜಹೀದ್ ಮೊಹಮ್ಮದ್ ತಲಾ 2 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಅಘಾ ಸಲ್ಮಾನ್ 1 ವಿಕೆಟ್ ಪಡೆದರು.

Story first published: Sunday, December 4, 2022, 18:39 [IST]
Other articles published on Dec 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X