ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Pak vs SL: 2ನೇ ಪಂದ್ಯದ ಗೆಲುವಿನ ಮೇಲೆ ಲಂಕಾ ಕಣ್ಣು: ಬಾಬರ್ ಏಕಾಂಗಿ ಹೋರಾಟ

Pak vs SL: 2 test, Lanka near to win the match, Live score and highlights

ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ಗಾಲೆಯಲ್ಲಿ ನಡೆಯುತ್ತಿದ್ದು ಅಂತಿಮ ದಿನದಾಟ ಆರಂಭವಾಗಿದೆ. ಕೊನೆಯ ದಿನ ಪಾಕಿಸ್ತಾನದ ಮುಂದೆ ದೊಡ್ಡ ಸವಾಲಿದ್ದು ದೊಡ್ಡ ಪ್ರತಿಕ್ರಿಯೆ ನೀಡುವ ಪ್ರಯತ್ನದಲ್ಲಿದೆ ಪಾಕಿಸ್ತಾನ. ಪಂದ್ಯದ ಆರಂಭದಿಂದಲೂ ಸಂಪೂರ್ಣ ಹಿಡಿತ ಸಾಧಿಸಿರುವ ಶ್ರೀಲಂಕಾ ಅಂತಿಮ ದಿನ ಹಿಡಿತ ಸಡಿಲಿಸದಿರುವ ಮುನ್ಸೂಚನೆ ನೀಡಿದೆ.

ಪಾಕಿಸ್ತಾನ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ಬಾಬರ್ ಅಜಂ ಆಸರೆಯಾಗಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಸಿಡಿಸಿರುವ ಬಾಬರ್ ಅಜಂ ತಂಡವನ್ನು ಸೋಲಿನಿಂದ ಪಾರು ಮಾಡುವ ಪ್ರಯತ್ನದಲ್ಲಿದ್ದಾರೆ. ಮತ್ತೊಂದು ತುದಿಯಲ್ಲಿ ಪಾಕ್ ನಾಯಕನಿಗೆ ಯಾವ ರೀತಿಯ ಬೆಂಬಲ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

IND vs WI 3rd ODI: ಭಾರತಕ್ಕೆ ಭರ್ಜರಿ ಜಯ; ವೆಸ್ಟ್ ಇಂಡೀಸ್‌ನಲ್ಲಿ ಚೊಚ್ಚಲ ಕ್ಲೀನ್‌ಸ್ವೀಪ್ ಗರಿIND vs WI 3rd ODI: ಭಾರತಕ್ಕೆ ಭರ್ಜರಿ ಜಯ; ವೆಸ್ಟ್ ಇಂಡೀಸ್‌ನಲ್ಲಿ ಚೊಚ್ಚಲ ಕ್ಲೀನ್‌ಸ್ವೀಪ್ ಗರಿ

Live ಸ್ಕೋರ್‌ಕಾರ್ಡ್ ಹೀಗಿದೆ

1
54229
ಬೃಹತ್ ಗುರಿ ನೀಡಿದ ಶ್ರೀಲಂಕಾ

ಬೃಹತ್ ಗುರಿ ನೀಡಿದ ಶ್ರೀಲಂಕಾ

ಶ್ರೀಲಂಕಾ ಈ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನಕ್ಕೆ ಬೃಹತ್ ಗುರಿಯನ್ನು ನಿಗದಿಪಡಿಸಿದೆ. ಎರಡು ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೀಲಂಕಾ ಪಂದ್ಯದಲ್ಲಿ ಸಂಪೂರ್ಣ ಹಿಡಿತ ದಾಧಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಮೊದಲ ಇನ್ನಿಂಗ್ಸ್‌ನ ಬೌಲಿಂಗ್‌ನಲ್ಲಿಯೂ ಮೇಲುಗೈ ಸಾಧಿಸಿದ ಶ್ರೀಲಂಕಾ ಪಾಕಿಸ್ತಾನ ತಂಡವನ್ನು 231 ರನ್‌ಗಳಿಗೆ ಆಲೌಟ್ ಮಾಡುವಲ್ಲಿಯೂ ಯಶಸ್ವಿಯಾಯಿತು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಮುನ್ನಡೆ ಸಾಧಿಸಿತ್ತು.

ಲಂಕಾ ಭರ್ಜರಿ ಬ್ಯಾಟಿಂಗ್

ಲಂಕಾ ಭರ್ಜರಿ ಬ್ಯಾಟಿಂಗ್

ಶ್ರೀಲಂಕಾ ಈ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ನಲ್ಲಿಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ದಿನೇಶ್ ಚಾಂಡಿಮಲ್, ಒಶಾಡಾ ಫೆರ್ನಾಂಡೋ ಅರ್ಧ ಶತಕದ ನೆರವಿನಿಂದಾಗಿ 378 ರನ್‌ಗಳಿಸಿ ಲಂಕಾ ಆಲೌಟ್ ಆಗಿತ್ತು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಲಂಕಾ ತಂಡಕ್ಕೆ ಆಸರೆಯಾಗಿದ್ದು ಧನಂಜಯ ಡಿಸಿಲ್ವ ಹಾಗೂ ನಾಯಕ ಕರುಣರತ್ನೆ. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ 30 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 508 ರನ್‌ಗಳ ಬೃಹತ್ ಗುರಿ ನಿಗದಿಪಡಿಸಿದೆ.

ಸರಣಿ ಸಮಬಲಗೊಳಿಸುತ್ತಾ ಲಂಕಾ

ಸರಣಿ ಸಮಬಲಗೊಳಿಸುತ್ತಾ ಲಂಕಾ

ಶ್ರೀಲಂಕಾ ಈ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ಹೀಗಾಗಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಹಿನ್ನಡೆ ಅನುಭವಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ತಿರುಗಿಬಿದ್ದಿದ್ದು ಪ್ರವಾಸಿ ತಂಡಕ್ಕೆ ಆಘಾತ ನೀಡಿದೆ. ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿದ್ಧ ಲಂಕಾ ಗೆಲುವಿನ ಸನಿಹದಲ್ಲಿದೆ. ಈ ಮೂಲಕ ಸರಣಿಯನ್ನು ಸಮಬಲಗೊಳಿಸುವ ಅವಕಾಶ ಶ್ರೀಲಂಕಾ ತಂಡಕ್ಕಿದೆ.

ಎರಡು ತಂಡಗಳ ಆಡುವ ಬಳಗ

ಎರಡು ತಂಡಗಳ ಆಡುವ ಬಳಗ

ಶ್ರೀಲಂಕಾ: ದಿಮುತ್ ಕರುಣಾರತ್ನೆ (ನಾಯಕ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (WK), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುನಿತ್ ವೆಲ್ಲಲಾಗೆ, ಅಸಿತ ಫೆರ್ನಾಂಡೋ
ಬೆಂಚ್: ಲಕ್ಷಿತಾ ಮಾನಸಿಂಗ್, ಕಸುನ್ ರಜಿತಾ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ಕಮಿಂದು ಮೆಂಡಿಸ್, ಪಾತುಮ್ ನಿಸ್ಸಾಂಕ, ದಿಲ್ಶಾನ್ ಮಧುಶಂಕ

ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫವಾದ್ ಆಲಂ, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಯಾಸಿರ್ ಶಾ, ಹಸನ್ ಅಲಿ, ನಸೀಮ್ ಶಾ
ಬೆಂಚ್: ಅಜರ್ ಅಲಿ, ಫಹೀಂ ಅಶ್ರಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಹ್ಯಾರಿಸ್ ರೌಫ್

Story first published: Thursday, July 28, 2022, 12:35 [IST]
Other articles published on Jul 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X