ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

PAK vs SL 2ನೇ ಟೆಸ್ಟ್: ಬೃಹತ್ ಮೊತ್ತ ದಾಖಲಿಸುವತ್ತ ಶ್ರೀಲಂಕಾ; 4ನೇ ದಿನದಾಟದ ಲೈವ್ ಸ್ಕೋರ್

PAK vs SL: Pakistan vs Sri Lanka 2nd test match 4th day live score

ಪಾಕಿಸ್ತಾನ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದು, 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರಥಮ ಪಂದ್ಯದಲ್ಲಿ ಜಯ ಸಾಧಿಸಿದ ಪಾಕಿಸ್ತಾನ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೂ ಇದೇ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಾಟವನ್ನು ನಡೆಸುತ್ತಿದೆ.

2011ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಜೊತೆಗಿದ್ದ ಈ ಕೋಚ್ ಭಾರತಕ್ಕೆ ಮರು ಸೇರ್ಪಡೆ2011ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಜೊತೆಗಿದ್ದ ಈ ಕೋಚ್ ಭಾರತಕ್ಕೆ ಮರು ಸೇರ್ಪಡೆ

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ಬ್ಯಾಟಿಂಗ್ ಆಯ್ದುಕೊಂಡಿದ್ದು, ಶ್ರೀಲಂಕಾ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ 378 ರನ್ ಕಲೆಹಾಕಿತ್ತ. ಇತ್ತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ 231 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಈ ಮೂಲಕ ಶ್ರೀಲಂಕಾ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ 147 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಪಾಕ್ ತಂಡವನ್ನು ಸಾಮಾನ್ಯ ಮೊತ್ತಕ್ಕೆ ಕಟ್ಟಿಹಾಕಿದ ಶ್ರೀಲಂಕಾ ಮೂರನೇ ದಿನದಾಟದಂದು ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್‌ ಆರಂಭಿಸಿ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿ 323 ರನ್‌ಗಳ ಮುನ್ನಡೆಯನ್ನು ಸಾಧಿಸಿತ್ತು.

2025ರ ಮಹಿಳಾ ವಿಶ್ವಕಪ್‌ಗೆ ಭಾರತ ಆತಿಥ್ಯ?; ಬಿಡ್ ಮಾಡಲು ಬಿಸಿಸಿಐ ಸಜ್ಜು: ವರದಿ2025ರ ಮಹಿಳಾ ವಿಶ್ವಕಪ್‌ಗೆ ಭಾರತ ಆತಿಥ್ಯ?; ಬಿಡ್ ಮಾಡಲು ಬಿಸಿಸಿಐ ಸಜ್ಜು: ವರದಿ

ಹೀಗೆ ಬೃಹತ್ ಮುನ್ನಡೆಯನ್ನು ಕಾಯ್ದುಕೊಂಡಿರುವ ಶ್ರೀಲಂಕಾ ಇದೀಗ ನಾಲ್ಕನೇ ದಿನದಾಟವನ್ನು ಆರಂಭಿಸಿದ್ದು, ಉಳಿದಿರುವ 5 ವಿಕೆಟ್‍ಗಳಲ್ಲಿ ಎಷ್ಟು ರನ್ ದಾಖಲಿಸಬಹುದು ಎಂಬುದನ್ನು ಕಾದುನೋಡಬೇಕಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಲೈವ್ ಸ್ಕೋರ್ ಈ ಕೆಳಕಂಡಂತಿದೆ.

1
54229
ಕುಸಿದಿದ್ದ ತಂಡಕ್ಕೆ ಕರುಣರತ್ನೆ, ಧನಂಜಯ ಡಿ ಸಿಲ್ವಾ ಆಸರೆ

ಕುಸಿದಿದ್ದ ತಂಡಕ್ಕೆ ಕರುಣರತ್ನೆ, ಧನಂಜಯ ಡಿ ಸಿಲ್ವಾ ಆಸರೆ

ಇನ್ನು ಮೂರನೇ ದಿನದಾಟದಲ್ಲಿ ಶ್ರೀಲಂಕಾ ತಂಡ 117 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತ ಕಂಡಿತ್ತು. ಈ ಸಂದರ್ಭದಲ್ಲಿ ಆರನೇ ವಿಕೆಟ್‌ಗೆ ಜತೆಯಾದ ನಾಯಕ ದಿಮುತ್ ಕರುಣರತ್ನೆ ಮತ್ತು ಧನಂಜಯ ಡಿ ಸಿಲ್ವಾ ನೆಲಕಚ್ಚಿ ನಿಂತಿದ್ದು, ಆಸರೆಯಾಗಿದ್ದಾರೆ. ಇಬ್ಬರೂ ಸಹ ಅರ್ಧಶತಕ ಪೂರೈಸಿದ್ದು, ತಂಡ ಎದುರಾಳಿ ಪಾಕಿಸ್ತಾನಕ್ಕೆ ಉತ್ತಮ ಗುರಿಯನ್ನು ನೀಡುವಲ್ಲಿ ಸಹಕಾರಿಯಾಗಲಿದ್ದಾರೆ. ತಂಡದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ನಿರೋಷನ್ ಡಿಕ್ವೆಲ್ಲಾ 15 ರನ್, ಒಶಾಡಾ ಫೆರ್ನಾಂಡೋ 19 ರನ್, ಕುಸಾಲ್ ಮೆಂಡಿಸ್ 15 ರನ್, ಏಂಜೆಲೋ ಮ್ಯಾಥ್ಯೂಸ್ 35 ರನ್ ಮತ್ತು ದಿನೇಶ್ ಚಾಂಡಿಮಾಲ್ 21 ರನ್ ಕಲೆಹಾಕಿದ್ದಾರೆ.

ದಿಮುತ್ ಕರುಣರತ್ನೆ 61 ರನ್ ಗಳಿಸಿ ನೌಮನ್ ಅಲಿ ಎಸೆತದಲ್ಲಿ ಅಬ್ದುಲ್ಲಾ ಶಫೀಕ್‌ಗೆ ಕ್ಯಾಚ್ ನೀಡಿ ಔಟ್ ಆಗಿದ್ದು, ಈ ಇನ್ನಿಂಗ್ಸ್ ಮೂಲಕ ಕುಸಿದಿದ್ದ ತನ್ನ ತಂಡಕ್ಕೆ ಆಸರೆಯಾಗುವುದರ ಜೊತೆಗೆ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ವಿಶೇಷ ಮೈಲಿಗಲ್ಲನ್ನು ತಲುಪಿದ್ದಾರೆ. ದಿಮುತ್ ಕರುಣರತ್ನೆ ಟೆಸ್ಟ್ ಕ್ರಿಕೆಟ್‌ನಲ್ಲಿ 6000 ರನ್ ಪೂರೈಸಿದ ಮೈಲಿಗಲ್ಲನ್ನು ತಲುಪಿದ್ದಾರೆ. ಇಲ್ಲಿಯವರೆಗೂ 82 ಟೆಸ್ಟ್ ಪಂದ್ಯಗಳನ್ನಾಡಿ 158 ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿರುವ ದಿಮುತ್ ಕರುಣರತ್ನೆ 6023 ರನ್ ಕಲೆಹಾಕಿದ್ದಾರೆ. 14 ಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿರುವ ದಿಮುತ್ ಕರುಣರತ್ನೆ ಒಂದು ದ್ವಿಶತಕವನ್ನೂ ಸಹ ಬಾರಿಸಿದ್ದಾರೆ ಹಾಗೂ 244 ಇವರು ಗಳಿಸಿರುವ ಗರಿಷ್ಟ ಟೆಸ್ಟ್ ರನ್ ಆಗಿದೆ.

ಶ್ರೀಲಂಕಾ ಆಡುವ ಬಳಗ

ಶ್ರೀಲಂಕಾ ಆಡುವ ಬಳಗ

ದಿಮುತ್ ಕರುಣಾರತ್ನೆ (ನಾಯಕ), ಓಶದ ಫೆರ್ನಾಂಡೊ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುನಿತ್ ವೆಲ್ಲಲಾಗೆ, ಅಸಿತ ಫೆರ್ನಾಂಡೊ

ನನ್ನ ಮತ್ತು ವೀರೇಂದ್ರ ಸೆಹ್ವಾಗ್ ಆಟದ ವ್ಯತ್ಯಾಸ ಏನು ಅಂತ ಹೇಳಿದ ರಾಹುಲ್ ದ್ರಾವಿಡ್ | OneIndia Kannada
ಪಾಕಿಸ್ತಾನ ಆಡುವ ಬಳಗ

ಪಾಕಿಸ್ತಾನ ಆಡುವ ಬಳಗ

ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫವಾದ್ ಆಲಂ, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಯಾಸಿರ್ ಶಾ, ಹಸನ್ ಅಲಿ, ನಸೀಮ್ ಶಾ

Story first published: Wednesday, July 27, 2022, 11:16 [IST]
Other articles published on Jul 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X