ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

PAK vs WI: ಮೂರನೇ ಏಕದಿನ ಪಂದ್ಯವನ್ನೂ ಸೋತು ವೈಟ್‌ವಾಷ್ ಮುಖಭಂಗಕ್ಕೆ ಒಳಗಾದ ವಿಂಡೀಸ್

PAK vs WI: Pakistan won 3rd ODI and white wash West Indies

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಆಯೋಜನೆಯಾಗಿದ್ದ ಟಿ ಟ್ವೆಂಟಿ ಹಾಗೂ ಏಕದಿನ ಸರಣಿಗಳನ್ನಾಡಲು ವೆಸ್ಟ್ ಇಂಡೀಸ್ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿತ್ತು. ಆದರೆ ಟಿ ಟ್ವೆಂಟಿ ಸರಣಿ ಮುಕ್ತಾಯವಾದ ಬೆನ್ನಲ್ಲೇ ಕೊರೋನಾವೈರಸ್ ಕಾರಣದಿಂದಾಗಿ ಏಕದಿನ ಸರಣಿ ಮುಂದೂಡಲ್ಪಟ್ಟಿತ್ತು.

ಎರಡೆರಡು ತಂಡಗಳ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಐವರು ಕ್ರಿಕೆಟಿಗರು ಇವರೇ!ಎರಡೆರಡು ತಂಡಗಳ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಐವರು ಕ್ರಿಕೆಟಿಗರು ಇವರೇ!

ಹೀಗೆ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ 3 ಪಂದ್ಯಗಳ ಏಕದಿನ ಸರಣಿ ಇದೀಗ ಆಯೋಜನೆಯಾಗಿದ್ದು, ಯಾವುದೇ ಅಡೆತಡೆಯಿಲ್ಲದೇ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಈ ಸರಣಿಯ ಎಲ್ಲಾ 3 ಪಂದ್ಯಗಳಲ್ಲಿಯೂ ಜಯ ಸಾಧಿಸಿದ ಪಾಕಿಸ್ತಾನ ಪ್ರವಾಸಿ ವೆಸ್ಟ್ ಇಂಡೀಸ್ ತಂಡಕ್ಕೆ ವೈಟ್ ವಾಷ್ ಬಳಿದಿದೆ. ಜೂನ್ 8ರಂದು ನಡೆದಿದ್ದ ಪ್ರಥಮ ಏಕದಿನ ಪಂದ್ಯದಲ್ಲಿ 5 ವಿಕೆಟ್‍ಗಳ ಜಯ ಸಾಧಿಸಿದ ಪಾಕಿಸ್ತಾನ ದ್ವಿತೀಯ ಏಕದಿನ ಪಂದ್ಯದಲ್ಲಿ 120 ರನ್‌ಗಳ ಗೆಲುವನ್ನು ಕಂಡಿತ್ತು ಹಾಗೂ ನಿನ್ನೆ ( ಜೂನ್ 12 ) ರಾವಲ್ಪಿಂಡಿ ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಪಂದ್ಯದಲ್ಲಿ ಪಾಕಿಸ್ತಾನ 53 ರನ್‌ಗಳ ಜಯ ಕಂಡಿದೆ.

ಪಾಕಿಸ್ತಾನ ಇನ್ನಿಂಗ್ಸ್

ಪಾಕಿಸ್ತಾನ ಇನ್ನಿಂಗ್ಸ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡರು. ಅದರಂತೆ ಪಾಕಿಸ್ತಾನದ ಪರ ಫಾಖರ್ ಜಮಾನ್ ಮತ್ತು ಇಮಾಮ್ ಉಲ್ ಹಕ್ ಆರಂಭಿಕರಾಗಿ ಕಣಕ್ಕಿಳಿದರು. ಫಾಖರ್ ಜಮಾನ್ 35 ರನ್ ಗಳಿಸಿದರೆ, ಇಮಾಮ್ ಉಲ್ ಹಕ್ 65 ರನ್ ಕಲೆ ಹಾಕಿದರು. ಇನ್ನುಳಿದಂತೆ ನಾಯಕ ಬಾಬರ್ ಅಜಮ್ 1, ಮೊಹಮ್ಮದ್ ರಿಜ್ವಾನ್ 11, ಮಹಮ್ಮದ್ ಹ್ಯಾರಿಸ್ ೦, ಖುಷ್ ದಿಲ್ ಷಾ 34, ಶದಾಬ್ ಖಾನ್ 86, ಮೊಹಮ್ಮದ್ ನವಾಜ್ 8, ಮಹಮ್ಮದ್ ವಾಸಿಂ ಜೂ 6, ಹಸನ್ ಅಲಿ ಅಜೇಯ 8 ರನ್ ಮತ್ತು ಶಹನಾವಾಜ್ ದಹನಿ ಅಜೇಯ 4 ರನ್ ಕಲೆ ಹಾಕಿದರು. ಇನ್ನು ಪಾಕಿಸ್ತಾನದ ಇನ್ನಿಂಗ್ಸ್‌ನಲ್ಲಿ 33 ಓವರ್ ಮುಕ್ತಾಯವಾದಾಗ ನಗರದಲ್ಲಿ ಧೂಳಿನ ಸುಂಟರಗಾಳಿ ಎದ್ದಿದ್ದ ಕಾರಣ ಮೈದಾನದ ತುಂಬಾ ಧೂಳಿನ ಗಾಳಿ ಆವರಿಸಿಕೊಂಡಿತ್ತು. ಹೀಗಾಗಿ ಆಟಗಾರರು ಕೆಲ ಸಮಯ ಪೆವಿಲಿಯನ್ ಸೇರಿಕೊಂಡಿದ್ದರು. ಹೀಗಾಗಿ 2 ಓವರ್ ಕಡಿತಗೊಳಿಸಿ 48 ಓವರ್‌ಗಳ ಪಂದ್ಯವನ್ನು ಆಡಿಸಲಾಯಿತು. ಈ ಮೂಲಕ 48 ಓವರ್‌ಗಳಲ್ಲಿ ಪಾಕಿಸ್ತಾನ 9 ವಿಕೆಟ್ ನಷ್ಟಕ್ಕೆ 269 ರನ್ ಕಲೆಹಾಕಿ ಎದುರಾಳಿ ವೆಸ್ಟ್ ಇಂಡೀಸ್ ತಂಡಕ್ಕೆ 270 ರನ್‌ಗಳ ಗುರಿಯನ್ನು ನೀಡಿತು.

ಇನ್ನು ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಬೌಲಿಂಗ್ ಮಾಡಿ ಅಚ್ಚರಿ ಮೂಡಿಸಿದರು. 10 ಓವರ್ ಎಸೆದ ಪೂರನ್ 48 ರನ್ ನೀಡಿ 4 ವಿಕೆಟ್ ಪಡೆದರೆ, ಕೀಮೋ ಪೌಲ್ 2 ವಿಕೆಟ್‌, ಜೇಡನ್ ಸೇಲ್ಸ್, ಹೇಡನ್ ವಾಲ್ಷ್ ಮತ್ತು ಅಖೆಲ್ ಹೊಸೈನ್ ತಲಾ ಒಂದೊಂದು ವಿಕೆಟ್ ಪಡೆದರು.

216ಕ್ಕೆ ವಿಂಡೀಸ್ ಆಲ್ ಔಟ್

216ಕ್ಕೆ ವಿಂಡೀಸ್ ಆಲ್ ಔಟ್

ಪಾಕಿಸ್ತಾನ ನೀಡಿದ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಪರ ಶೈ ಹೋಪ್ 21, ಕೈಲ್ ಮೇಯರ್ಸ್ 5, ಶಾಮ್ರಾ ಬ್ರೂಕ್ಸ್ 18 ರನ್, ಕೀಸಿ ಕಾರ್ಟಿ 33 ರನ್, ನಾಯಕ ನಿಕೋಲಸ್ ಪೂರನ್ 11, ರೋವ್ಮನ್ ಪೊವೆಲ್ 10, ಅಖೆಲ್ ಹೊಸೈನ್ 60 ರನ್, ಕೀಮೊ ಪೌಲ್ 21, ರೊಮಾರಿಯೋ ಶೆಫರ್ಡ್ 16, ಹೇಡನ್ ವಾಲ್ಶ್ 3 ರನ್ ಮತ್ತು ಜೇಡನ್ ಸೇಲ್ಸ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ಈ ಮೂಲಕ 37.2 ಓವರ್‌ಗಳಲ್ಲಿಯೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ವೆಸ್ಟ್ ಇಂಡೀಸ್ 216 ರನ್ ಕಲೆಹಾಕಿ 53 ರನ್‌ಗಳ ಸೋಲನ್ನು ಅನುಭವಿಸಿದೆ. ಪಾಕಿಸ್ತಾನದ ಪರ ಶದಾಬ್ ಖಾನ್ 4 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ನವಾಜ್ ಮತ್ತು ಹಸನ್ ಅಲಿ ತಲಾ 2 ವಿಕೆಟ್ ಪಡೆದರು ಹಾಗೂ ಶಹನವಾಜ್ ದಹಾನಿ ಮತ್ತು ಮಹಮ್ಮದ್ ವಾಸಿಂ ತಲಾ ಒಂದೊಂದು ವಿಕೆಟ್ ಪಡೆದರು.

ಮಾಸ್ಕ್ ಧರಿಸಿ ಕಣಕ್ಕಿಳಿದಿದ್ದ ಆಟಗಾರರು

ಮಾಸ್ಕ್ ಧರಿಸಿ ಕಣಕ್ಕಿಳಿದಿದ್ದ ಆಟಗಾರರು

ಇನ್ನು ಈ ಪಂದ್ಯದ ವೇಳೆ ಧೂಳಿನ ಗಾಳಿಯ ಪರಿಣಾಮ ಎಷ್ಟಿತ್ತೆಂದರೆ ವೆಸ್ಟ್ ಇಂಡೀಸ್ ತಂಡದ ಆಟಗಾರರು ಮಾಸ್ಕ್ ಧರಿಸಿ ಕಣಕ್ಕಿಳಿದಿದ್ದರು. ಹೀಗೆ ಆಟಗಾರರು ಮಾಸ್ಕ್ ಧರಿಸಿ ಕಣಕ್ಕಿಳಿದಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಾಗಿ ನೆಟ್ಟಿಗರು ಬಗೆಬಗೆಯ ಟ್ರೋಲ್ ಕೂಡ ಮಾಡಿದ್ದಾರೆ.

Story first published: Monday, June 13, 2022, 12:15 [IST]
Other articles published on Jun 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X