ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾಕ್‌ ಆಲ್ ರೌಂಡರ್ ಸನಾ ಮಿರ್ ನಿವೃತ್ತಿ

Pakistan allrounder Sana Mir retires from international cricket

ಕರಾಚಿ, ಏಪ್ರಿಲ್ 25: ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ಸನಾ ಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಸನಾ ಅವರ 15 ವರ್ಷಗಳ ಕ್ರಿಕೆಟ್ ವೃತ್ತಿ ಬದುಕು ಅಂತ್ಯಗೊಂಡಿದೆ. ಸನಾ ಅವರಿಗೀಗ 35ರ ಹರೆಯ.

ಧೋನಿಯಿಂದಾಗಿ ನಾನು ಬಾಲ್ಯದ ಕೋಚನ್ನು ಮಿಸ್‌ ಮಾಡಿಕೊಂಡಿಲ್ಲ: ಕುಲ್‌ದೀಪ್ ಯಾದವ್ಧೋನಿಯಿಂದಾಗಿ ನಾನು ಬಾಲ್ಯದ ಕೋಚನ್ನು ಮಿಸ್‌ ಮಾಡಿಕೊಂಡಿಲ್ಲ: ಕುಲ್‌ದೀಪ್ ಯಾದವ್

2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸನಾ ಮಿರ್, 120 ಏಕದಿನ ಪಂದ್ಯಗಳಲ್ಲಿ 24.27ರ ಸರಾಸರಿಯಲ್ಲಿ 151 ವಿಕೆಟ್, 106 ಟಿ20ಐ ಪಂದ್ಯಗಳಲ್ಲಿ 23.42ರ ಸರಾಸರಿಯಲ್ಲಿ 89 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಏಕದಿನದಲ್ಲಿ 17.91ರ ಸರಾಸರಿಯಲ್ಲಿ 1630 ರನ್, ಟಿ20ಐನಲ್ಲಿ 14.07ರ ಸರಾಸರಿಯಂತೆ 802 ರನ್ ಗಳಿಸಿದ್ದಾರೆ.

ಆರ್‌ಸಿಬಿ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ ನಾಯಕ ವಿರಾಟ್ ಕೊಹ್ಲಿ!ಆರ್‌ಸಿಬಿ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ ನಾಯಕ ವಿರಾಟ್ ಕೊಹ್ಲಿ!

ಕಳೆದ ನವೆಂಬರ್‌ನಲ್ಲಿ ಸನಾ ಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬ್ರೇಕ್ ಪಡೆದುಕೊಂಡಿದ್ದರು. ಹೀಗಾಗಿ ಪಾಕಿಸ್ತಾನ ತಂಡದ ಇಂಗ್ಲೆಂಡ್‌ ಪ್ರವಾಸವನ್ನು ಸನಾ ತಪ್ಪಿಸಿಕೊಂಡಿದ್ದರು. ಅಲ್ಲದೆ ಕಳಪೆ ಫಾರ್ಮ್‌ನ ಕಾರಣ ಆಸ್ಟ್ರೇಲಿಯಾದಲ್ಲಿ ಈ ಬಾರಿ ನಡೆದಿದ್ದ ಟಿ20 ವಿಶ್ವಕಪ್‌ ವೇಳೆ ಪಾಕಿಸ್ತಾನ ತಂಡದಲ್ಲಿ ಸ್ಥಾನ ಇವರು ಗಿಟ್ಟಿಸಿಕೊಂಡಿರಲಿಲ್ಲ.

ಚೆಂಡಿಗೆ ಎಂಜಲು ಸವರುವಂತಿಲ್ಲ, ಕ್ರಿಕೆಟ್‌ನಲ್ಲಿ ಬದಲಾಗಲಿವೆ ನಿಯಮಗಳುಚೆಂಡಿಗೆ ಎಂಜಲು ಸವರುವಂತಿಲ್ಲ, ಕ್ರಿಕೆಟ್‌ನಲ್ಲಿ ಬದಲಾಗಲಿವೆ ನಿಯಮಗಳು

'ಕಳೆದ ಕೆಲ ತಿಂಗಳುಗಳು ನನಗೆ ನಿವೃತ್ತಿಯತ್ತ ಯೋಚಿಸಲು ಅವಕಾಶ ಒದಗಿಸಿದವು. ಮುನ್ನಡೆಯಲು ಇದೇ ಸರಿಯಾದ ಸಮಯ ಅಂತ ನನಗನ್ನಿಸುತ್ತಿದೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನನ್ನ ಅತ್ಯತ್ತಮ ಕೊಡುಗೆಯನ್ನು ನನ್ನ ದೇಶಕ್ಕೆ ನೀಡಿದ್ದೇನೆ,' ಎಂದು ಸನಾ ನಿವೃತ್ತಿ ಘೋಷಿಸಿದ ಬಳಿಕ ಹೇಳಿದ್ದಾರೆ.

Story first published: Saturday, April 25, 2020, 19:09 [IST]
Other articles published on Apr 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X