ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ವೆಸ್ಟ್‌ ಇಂಡೀಸ್‌ v/s ಪಾಕಿಸ್ತಾನ ಹಣಾಹಣಿಯ ಮುನ್ನೋಟ

Pakistan and West Indies will take on each other in their first WC game

ಟ್ರೆಂಟ್‌ಬ್ರಿಡ್ಜ್‌, ಮೇ 30: ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಅಚ್ಚರಿಯ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿರುವ ತಂಡಗಳಾದ ವೆಸ್ಟ್‌ ಇಂಡೀಸ್‌ ಮತ್ತು ಪಾಕಿಸ್ತಾನ ತಂಡಗಳು ಶುಕ್ರವಾರ ಮುಖಾಮುಖಿಯಾಗಲಿದ್ದು, ಟೂರ್ನಿಯಲ್ಲಿ ಶುಭಾರಂಭ ಮಾಡುವ ತವಕದಲ್ಲಿವೆ.

1
43645

ಅಂದಹಾಗೆ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಗಳಾಗದೇ ಇದ್ದರು ಕೂಡ, ಯಾವುದೇ ಬಲಿಷ್ಠ ತಂಡಕ್ಕೆ ಆಘಾತ ನೀಡಬಲ್ಲ ತಾಕತ್ತು ಈ ತಂಡಗಳಿಗೆ ಇವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

<strong>ವೆಸ್ಟ್‌ ಇಂಡೀಸ್‌ ತಂಡಕ್ಕೆ 500 ರನ್‌ ಚಚ್ಚುವ ತಾಕತ್ತಿದೆಯಂತೆ!</strong>ವೆಸ್ಟ್‌ ಇಂಡೀಸ್‌ ತಂಡಕ್ಕೆ 500 ರನ್‌ ಚಚ್ಚುವ ತಾಕತ್ತಿದೆಯಂತೆ!

2017ರಲ್ಲಿ ಇಂಗ್ಲೆಂಡ್‌ನಲ್ಲೇ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಗೆದ್ದ ಅನುಭವ ಹೊಂದಿರುವ ಪಾಕಿಸ್ತಾನ ತಂಡ ಈ ಬಾರಿಯೂ ಅಂಥದ್ದೇ ಪ್ರದರ್ಶನ ನೀಡುವುದನ್ನು ಎದುರು ನೋಡುತ್ತಿದೆ. ಆದರೆ, ವಿಶ್ವಕಪ್‌ ಸಲುವಾಗಿ ಅಫಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್‌ ಪಡೆ ಸೋಲನುಭವಿಸಿದ್ದು, ಮೊದಲ ಪಂದ್ಯದಲ್ಲಿ ವಿಂಡೀಸ್‌ ವಿರುದ್ಧ ಜಯದ ಲಯ ಕಂಡುಕೊಳ್ಳುವ ಪ್ರಯತ್ನ ನಡೆಸಲಿದೆ.

{headtohead_cricket_8_5}

ಬಾಬರ್‌ ಅಝಾಮ್‌, ಫಖರ್‌ ಝಮಾನ್‌ ಹಾಗೂ ಇಮಾಮ್‌ ಉಲ್‌ ಹಕ್‌ ತಂಡದ ಬ್ಯಾಟಿಂಗ್‌ ಬಲವಾದರೆ, ಮೊಹಮ್ಮದ್‌ ಹಫೀಜ್‌ ಮತ್ತು ಶೊಯೇಬ್‌ ಮಲಿಕ್‌ ಮಧ್ಯಮ ಕ್ರಮಾಂಕದಲ್ಲಿರುವ ಅನುಭವಿ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ವಹಾಬ್‌ ರಿಯಾಜ್‌ ಸಾರಥ್ಯದಲ್ಲಿ ಶಹೀನ್‌ ಶಾ ಅಫ್ರೀದಿ ಮತ್ತು ಹಸನ್‌ ಅಲಿ ಯಾವುದೇ ಎದುರಾಳಿಯನ್ನು ಕಾಡಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ, ತಂಡದ ಫೀಲ್ಡಿಂಗ್‌ ಮಾತ್ರ ಕೊಂಚ ಮಂಕಾಗಿ ಕಾಣಿಸುತ್ತಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಮತ್ತೊಂದೆಡೆ ಎರಡು ಬಾರಿಯ ವಿಶ್ವ ಚಾಂಪಿಯನ್ಸ್‌ ವೆಸ್ಟ್‌ ಇಂಡೀಸ್‌, ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಆಡುತ್ತಿರುವ ಬ್ಯಾಟಿಂಗ್‌ ಬಲಿಷ್ಠ ತಂಡವಾಗಿದೆ. ಅಭ್ಯಾಸ ಪಂದ್ಯಲ್ಲಿ ನ್ಯೂಜಿಲೆಂಡ್‌ ವಿರುದ್ಧ 421 ರನ್‌ಗಳನ್ನು ಚಚ್ಚಿ 91 ರನ್‌ಗಳ ಭರ್ಜರಿ ಜಯ ದಾಖಲಿಸಿರುವುದು ಇದಕ್ಕೆ ಉತ್ತಮ ಉದಾಹರಣೆ.

ಗೆಲ್ಲುವ ನೆಚ್ಚಿನ ತಂಡ ಯಾವುದು ಎಂದು ಪ್ರಿಡಿಕ್ಟ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ತಂಡದ ಅಗ್ರ ಕ್ರಮಾಂಕದಲ್ಲಿ ವೈಟ್‌ ಬಾಲ್‌ ಕ್ರಿಕೆಟ್‌ನ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್‌ ಗೇಲ್‌, ಶೇಯ್‌ ಹೋಪ್‌ ಮತ್ತು ಎವಿನ್‌ ಲೂಯಿಸ್‌ ಅವರಂತಹ ದೈತ್ಯರಿದ್ದಾರೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್‌ ಹೆಟ್ಮಾಯೆರ್‌ ಮತ್ತು ನಿಕೊಲಾಸ್‌ ಪೂರನ್‌ ಅವರಂತಹ ಯುವ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಜೊತೆಗೆ ವಿಸ್ಫೋಟಕ ಆಲ್‌ರೌಂಡರ್‌ಗಳಾದ ಆಂಡ್ರೆ ರಸೆಲ್‌, ಕಾರ್ಲೊಸ್‌ ಬ್ರಾತ್‌ವೇಟ್‌ ಹಾಗೂ ಜೇಸನ್‌ ಹೋಲ್ಡರ್‌ ಅವರನ್ನು ಹೊಂದಿರುವ ವೆಸ್ಟ್‌ ಇಂಡೀಸ್‌ ಟೂರ್ನಿಯಲ್ಲಿ ಉಳಿದೆಲ್ಲಾ ತಂಡಗಳಿಗೆ ಹೋಲಿಸಿದ ಬಲಿಷ್ಠ ಬ್ಯಾಟಿಂಗ್‌ ಹೊಂದಿದೆ.

ಹೀಗಾಗಿ ಶುಕ್ರವಾರದ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆ ಎಂಬ ಕುತೂಹಲ ಕ್ರಿಕೆಟ್‌ ಪ್ರಿಯರನ್ನು ಹಿಡಿದಿಟ್ಟಿದೆ.

ತಂಡಗಳ ವಿವರ

ಪಾಕಿಸ್ತಾನ: ಸರ್ಫರಾಝ್‌ ಅಹ್ಮದ್‌ (ನಾಯಕ), ಆಸಿಫ್‌ ಅಲಿ, ಫಖರ್‌ ಝಮಾನ್‌, ಹಸನ್‌ ಅಲಿ, ಇಮಾಮ್‌ ಉಲ್‌ ಹಕ್‌, ಮೊಹಮ್ಮದ್‌ ಹಫೀಝ್‌, ಶದಾಬ್‌ ಖಾನ್‌, ಶೊಯೇಬ್‌ ಮಲಿಕ್‌, ಬಾಬರ್‌ ಅಝಾಮ್‌, ಹ್ಯಾರಿಸ್‌ ಸೊಹೇಲ್‌, ಇಮಾದ್‌ ವಾಸಿಮ್‌, ಮೊಹಮ್ಮದ್‌ ಆಮಿರ್‌, ಮೊಹಮ್ಮದ್‌ ಹಸನಾಯ್‌, ಶಹೀನ್‌ ಶಾ ಅಫ್ರೀದಿ, ವಹಾಬ್‌ ರಿಯಾಜ್‌.

ವೆಸ್ಟ್‌ ಇಂಡೀಸ್‌: ಜೇಸನ್‌ ಹೋಲ್ಡರ್‌ (ನಾಯಕ), ಫಾಬಿಯಾನ್‌ ಆಲೆನ್‌, ಡರ್ರೆನ್‌ ಬ್ರಾವೋ, ಶನಾನ್‌ ಗೇಬ್ರಿಯಲ್‌, ಶಿಮ್ರಾನ್‌ ಹೆಟ್ಮಾಯೆರ್‌, ಎವಿನ್‌ ಲೂಯಿಸ್‌, ನಿಕೊಲಾಸ್‌ ಪೂರನ್‌, ಆಂಡ್ರೆ ರಸೆಲ್‌, ಕಾರ್ಲೋಸ್‌ ಬ್ರಾತ್‌ವೇಟ್‌, ಶೆಲ್ಡನ್‌ ಕಾಟ್ರೆಲ್‌, ಕ್ರಿಸ್‌ ಗೇಲ್‌, ಶೇಯ್‌ ಹೋಪ್‌, ಆಷ್ಲೇ ನರ್ಸ್‌, ಕೆಮಾರ್‌ ರೋಚ್‌, ಒಶೇನ್‌ ಥಾಮಸ್‌.

ಪಂದ್ಯ ಆರಂಭ: ಭಾರತೀಯ ಕಾಲಮಾನ ಮಧ್ಯಾಹ್ನ 3:00ಕ್ಕೆ ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
ಸ್ಥಳ: ಟ್ರೆಂಟ್‌ ಬ್ರಿಡ್ಜ್‌ ಕ್ರಿಕೆಟ್‌ ಗ್ರೌಂಡ್‌

Story first published: Thursday, May 30, 2019, 23:16 [IST]
Other articles published on May 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X