ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20ಐ ಸರಣಿಗೆ ತಂಡ ಪ್ರಕಟಿಸಿದ ಪಾಕಿಸ್ತಾನ

pakistan-announce-29-member-squad-for-three-tests-and-three-t20is-against-engaland

ಲಾಹೋರ್, ಜೂನ್ 12: ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿಗಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) 29 ಮಂದಿಯ ತಂಡ ಪ್ರಕಟಿಸಿದೆ. ಕೋವಿಡ್-19ಗೆ ಸಂಬಂಧಿಸಿದ ನಿಯಮದಂತೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ ಎಲ್ಲಾ ಆಟಗಾರರು ಸರಣಿ ಆರಂಭದಿಂದ ಅಂತ್ಯದವರೆಗೆ ಅಲ್ಲೇ ಇರಲಿದ್ದಾರೆ.

2019-20ರ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅನ್‌ ಕ್ಯಾಪ್ಡ್ ಆಟಗಾರ ಹೈದರ್ ಅಲಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಜೂನ್‌ನಲ್ಲಿ ಪಾಕಿಸ್ತಾನ ಅಂಡರ್ 19 ತಂಡದ ಪರ ಆಡಿದ್ದ ಹೈದರ್, ಉತ್ತಮ ರನ್ ಗಳಿಸಿದ್ದರು. ಅಂದ್ಹಾಗೆ, ತಂಡಗಳ ಆಟಗಾರ ಹೆಸರುಗಳನ್ನು ಅವರ ಪಾಕಿಸ್ತಾನ ಸೂಪರ್‌ ಲೀಗ್ ತಂಡಗಳ ಹೆಸರಿನ ಜೊತೆ ಹೆಸರಿಸಲಾಗಿದೆ.

ಪಾಕಿಸ್ತಾನದ 29 ಮಂದಿಯ ತಂಡ ಹೀಗಿದೆ
ಆರಂಭಿಕ ಬ್ಯಾಟ್ಸ್‌ಮನ್‌ಗಳು (4): ಅಬಿದ್ ಅಲಿ (ಸಿಂಧ್, ಲಾಹೋರ್ ಖಲಂದರ್ಸ್), ಫಖರ್ ಜಮಾನ್ (ಖೈಬರ್ ಪಖ್ತುನ್ಖ್ವಾ, ಲಾಹೋರ್ ಖಲಂದರ್ಸ್), ಇಮಾಮ್-ಉಲ್-ಹಕ್ (ಬಲೂಚಿಸ್ತಾನ್, ಪೇಶಾವರ್ ಜಲ್ಮಿ) ಮತ್ತು ಶಾನ್ ಮಸೂದ್ (ದಕ್ಷಿಣ ಪಂಜಾಬ್, ಮುಲ್ತಾನ್ ಸುಲ್ತಾನರು).

ಮಧ್ಯಮ ಕ್ರಮಾಂಕ (9): ಅಜರ್ ಅಲಿ (ನಾಯಕ) (ಮಧ್ಯ ಪಂಜಾಬ್), ಬಾಬರ್ ಅಜಮ್ (ಟೆಸ್ಟ್ ಉಪನಾಯಕ ಮತ್ತು ಟಿ 20 ಐ ನಾಯಕ) (ಮಧ್ಯ ಪಂಜಾಬ್, ಕರಾಚಿ ಕಿಂಗ್ಸ್), ಅಸಾದ್ ಶಫೀಕ್ (ಸಿಂಧ್, ಮುಲ್ತಾನ್ ಸುಲ್ತಾನರು), ಫವಾದ್ ಆಲಂ (ಸಿಂಧ್), ಹೈದರ್ ಅಲಿ (ಉತ್ತರ, ಪೇಶಾವರ್ ಜಲ್ಮಿ), ಇಫ್ತಿಖರ್ ಅಹ್ಮದ್ (ಖೈಬರ್ ಪಖ್ತುನ್ಖ್ವಾ, ಕರಾಚಿ ಕಿಂಗ್ಸ್), ಖುಷ್ದಿಲ್ ಷಾ (ಖೈಬರ್ ಪಖ್ತುನ್ಖ್ವಾ, ಮುಲ್ತಾನ್ ಸುಲ್ತಾನರು), ಮೊಹಮ್ಮದ್ ಹಫೀಜ್ (ದಕ್ಷಿಣ ಪಂಜಾಬ್, ಲಾಹೋರ್ ಖಲಂದರ್ಸ್) ಮತ್ತು ಶೋಯೆಬ್ ಮಲಿಕ್ (ದಕ್ಷಿಣ ಪಂಜಾಬ್, ಪೇಶಾವರ್ ಜಲ್ಮ್)

ವಿಕೆಟ್ ಕೀಪರ್ಸ್ (2): ಮೊಹಮ್ಮದ್ ರಿಜ್ವಾನ್ (ಖೈಬರ್ ಪಖ್ತುನ್ಖ್ವಾ, ಕರಾಚಿ ಕಿಂಗ್ಸ್) ಮತ್ತು ಸರ್ಫರಾಜ್ ಅಹ್ಮದ್ (ಸಿಂಧ್, ಕ್ವೆಟ್ಟಾ ಗ್ಲಾಡಿಯೇಟರ್ಸ್)

ವೇಗದ ಬೌಲರ್‌ಗಳು (10): ಫಹೀಮ್ ಅಶ್ರಫ್ (ಮಧ್ಯ ಪಂಜಾಬ್, ಇಸ್ಲಾಮಾಬಾದ್ ಯುನೈಟೆಡ್), ಹರಿಸ್ ರವೂಫ್ (ಉತ್ತರ, ಲಾಹೋರ್ ಖಲಂದರ್ಸ್), ಇಮ್ರಾನ್ ಖಾನ್ (ಖೈಬರ್ ಪಖ್ತುನ್ಖ್ವಾ), ಮೊಹಮ್ಮದ್ ಅಬ್ಬಾಸ್ (ದಕ್ಷಿಣ ಪಂಜಾಬ್), ಮೊಹಮ್ಮದ್ ಹಸ್ನೈನ್ (ಸಿಂಧ್, ಕ್ವೆಟ್ಟಾ ಗ್ಲಾಡಿಯೇಟರ್ಸ್).

ಸ್ಪಿನ್ನರ್‌ಗಳು (4): ಇಮಾದ್ ವಾಸಿಮ್ (ಉತ್ತರ, ಕರಾಚಿ ಕಿಂಗ್ಸ್), ಕಾಶಿಫ್ ಭಟ್ಟಿ (ಸಿಂಧ್), ಶಾದಾಬ್ ಖಾನ್ (ಉತ್ತರ, ಇಸ್ಲಾಮಾಬಾದ್ ಯುನೈಟೆಡ್) ಮತ್ತು ಯಾಸಿರ್ ಷಾ (ಬಲೂಚಿಸ್ತಾನ್, ಪೇಶಾವರ್ ಜಲ್ಮಿ).

Story first published: Friday, June 12, 2020, 15:10 [IST]
Other articles published on Jun 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X