ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಪಾಕಿಸ್ತಾನ ತಂಡಗಳ ಬಲದಲ್ಲಿ ಈ ಒಂದು ವ್ಯತ್ಯಾಸವಿದೆ ಎಂದ ಪಾಕ್ ಮಾಜಿ ಕ್ರಿಕೆಟರ್

Pakistan

ಈಗಾಗಲೇ ಏಷ್ಯಾ ಕಪ್‌ 2022ರ ವೇಳಾಪಟ್ಟಿ ಜೊತೆಗೆ ಭಾಗವಹಿಸುವ ತಂಡಗಳೆಲ್ಲಾ ಸ್ಕ್ವಾಡ್‌ ಅನ್ನು ಘೋಷಣೆ ಮಾಡಿದ್ದು, ಭಾರತ ಮತ್ತು ಪಾಕಿಸ್ತಾನದ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆಗಸ್ಟ್‌ 28ರಂದು ಭಾರತ ಮತ್ತು ಪಾಕ್ ಮುಖಾಮುಖಿಯಾಗುತ್ತಿದ್ದು, ಸಾಂಪ್ರದಾಯಿಕ ಎದುರಾಳಿಗಳ ಕದನವು ಹೈವೋಲ್ಟೇಜ್‌ಗೆ ಸಾಕ್ಷಿಯಾಗಲಿದೆ.

ಭಾರತ ಮತ್ತು ಪಾಕಿಸ್ತಾನ ತಂಡ ಯಾವುದೇ ಐಸಿಸಿ ಟೂರ್ನಿಯಲ್ಲಿ ಮುಖಾಮುಖಿಯಾದ್ರೂ ಸಹ ಅಲ್ಲಿ ರೋಚಕತೆಗೆ ಯಾವುದೇ ಕೊರತೆ ಇರುವುದಿಲ್ಲ. ಹೀಗಾಗಿ ಒಂದು ವರ್ಷಗಳ ಬಳಿಕ ಉಭಯ ತಂಡಗಳು ಅಖಾಡಕ್ಕಿಳಿಯುತ್ತಿದ್ದು, ಭಾರತ ಮತ್ತು ಪಾಕ್ ಬಲದಲ್ಲಿ ಒಂದು ವ್ಯತ್ಯಾಸವನ್ನು ಪಾಕ್‌ನ ಮಾಜಿ ಆಟಗಾರ ಗುರುತಿಸಿದ್ದಾರೆ.

2021ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಹೀನಾಯ ಸೋಲು

2021ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಹೀನಾಯ ಸೋಲು

2021ರ ಟಿ20 ವಿಶ್ವಕಪ್ ಮುಖಾಮುಖಿಯಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲನ್ನು ಅನುಭವಿಸಿದ ಭಾರತ, ಇತಿಹಾಸದಲ್ಲೇ ಕಾಣದ 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿತು. ಇದಷ್ಟೇ ಅಲ್ಲದೆ ಲೀಗ್ ಹಂತದಲ್ಲಿಯೇ ಹೊರಬಿದ್ದಿತು. ಇದಾದ ಬಳಿಕ ಯಾವುದೇ ಟೂರ್ನಮೆಂಟ್‌ನಲ್ಲೂ ಉಭಯ ತಂಡಗಳು ಎದುರು ಬದುರಾಗಿಲ್ಲ.

ಹೀಗಾಗಿ ಟಿ20 ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಈ ಮಿನಿ ವಿಶ್ವಕಪ್‌ ಸಾಕಷ್ಟು ರೋಚಕತೆ ಎಡೆಮಾಡಿಕೊಟ್ಟಿದೆ. ದ್ವಿಪಕ್ಷೀಯ ಸರಣಿಗಳೇ ಇಲ್ಲದೆ ಬೇಸರದಲ್ಲಿರುವ ಅಭಿಮಾನಿಗಳಿಗೆ ರಸದೌತಣ ಬಡಿಸಲಿದೆ.

Ind vs Pak: ಶೇ. 100ರಷ್ಟು ಗೆಲುವಿನ ದಾಖಲೆ ಹೊಂದಿರುವ 3 ನಾಯಕರು

ವಿಶ್ವಕಪ್‌ನಲ್ಲಿ ಉತ್ತಮ ದಾಖಲೆ ಹೊಂದಿರದ ಪಾಕಿಸ್ತಾನ

ವಿಶ್ವಕಪ್‌ನಲ್ಲಿ ಉತ್ತಮ ದಾಖಲೆ ಹೊಂದಿರದ ಪಾಕಿಸ್ತಾನ

ಐಸಿಸಿ ಟೂರ್ನಮೆಂಟ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಪ್ರದರ್ಶನವು ಅತ್ಯಂತ ಕಳಪೆಯಾಗಿದೆ. ಇದುವರೆಗೆ ಕೇವಲ ಒಂದು ಬಾರಿಯಷ್ಟೇ ಪಾಕಿಸ್ತಾನ ತಂಡವು ಭಾರತದ ವಿರುದ್ಧ ಗೆಲುವನ್ನ ಸಾಧಿಸಿ ಸಂಭ್ರಮಿಸಿದೆ. ಆದ್ರೆ ಉಳಿದೆಲ್ಲಾ ಐಸಿಸಿ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ.

ಇನ್ನು ಇತ್ತೀಚೆಗೆ ಉಭಯ ತಂಡಗಳ ಹೋಲಿಕೆ ಮಾಡಿದ್ರೆ, ಟಿ20 ಫಾರ್ಮೆಟ್‌ನಲ್ಲಿ ಉಭಯ ತಂಡಗಳು ವಿಶ್ವದ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿವೆ. ಟಿ20 ಕ್ರಿಕೆಟ್‌ನಲ್ಲಿ ಭಾರತ ನಂಬರ್ ಒನ್ ಸ್ಥಾನದಲ್ಲಿದ್ದರೂ ಪಾಕ್‌ ಪ್ರಬಲ ಪೈಪೋಟಿ ಎದುರಿಸಲಿದೆ.

ಭಾರತ vs ಜಿಂಬಾಬ್ವೆ: ಧವನ್ ಬದಲು ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಿದ್ದು ತಪ್ಪು ಎನ್ನುತ್ತಿವೆ ಈ 3 ಅಂಶಗಳು

ಈ ಆಲ್‌ರೌಂಡರ್ ಪಾಕ್ ತಂಡದಲ್ಲಿಲ್ಲ ಎಂದ ಆಕಿಬ್ ಜಾವೇದ್

ಈ ಆಲ್‌ರೌಂಡರ್ ಪಾಕ್ ತಂಡದಲ್ಲಿಲ್ಲ ಎಂದ ಆಕಿಬ್ ಜಾವೇದ್

ಕಳೆದ ವರ್ಷದ ವಿಶ್ವಕಪ್ ಪಂದ್ಯದ ಗೆಲುವನ್ನು ಹೊರತುಪಡಿಸಿ, ಭಾರತದ ವಿರುದ್ಧ ಪಾಕಿಸ್ತಾನದ ದಾಖಲೆ ನಿಜವಾಗಿಯೂ ಕೆಟ್ಟದಾಗಿದೆ. ಏತನ್ಮಧ್ಯೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಆಕಿಬ್ ಜಾವೇದ್ ಅವರು ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಎಲ್ಲಿ ಕೊರತೆಯಿದೆ ಎಂದು ಹೋಲಿಸಿದ್ದಾರೆ ಮತ್ತು ತೋರಿಸಿದ್ದಾರೆ.

Paktv ವೆಬ್‌ಸೈಟ್‌ನೊಂದಿಗೆ ಮಾತನಾಡುವಾಗ, ಪಾಕಿಸ್ತಾನದ ಮಾಜಿ ವಿಶ್ವಕಪ್ ವಿಜೇತ, ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯತ್ಯಾಸವೆಂದರೆ ಬ್ಯಾಟಿಂಗ್ ವಿಭಾಗವಾಗಿದ್ದು, ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲಬಹುದು ಎಂದು ಹೇಳಿದರು.

"ಎರಡು ತಂಡಗಳ ನಡುವಿನ ವ್ಯತ್ಯಾಸವು ಅವರ ಬ್ಯಾಟಿಂಗ್‌ನಲ್ಲಿದೆ. ಭಾರತದ ಬ್ಯಾಟಿಂಗ್ ಇನ್ನೂ ಹೆಚ್ಚು ಅನುಭವಿಯಾಗಿದೆ. ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿಯಂತಹ ಬ್ಯಾಟರ್ ಕ್ಲಿಕ್ ಮಾಡಿದರೆ, ಅವರು ಏಕಾಂಗಿಯಾಗಿ ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲಬಹುದು, "ಎಂದು ಜಾವೇದ್ ಹೇಳಿದರು.

ಪಾಕಿಸ್ತಾನ ತಂಡದಲ್ಲಿ ಆಲ್‌ರೌಂಡರ್ ಕೊರತೆ

ಪಾಕಿಸ್ತಾನ ತಂಡದಲ್ಲಿ ಆಲ್‌ರೌಂಡರ್ ಕೊರತೆ

ಟೀಂ ಇಂಡಿಯಾದಲ್ಲಿ ಬ್ಯಾಲೆನ್ಸ್ ಮಾಡಬಲ್ಲ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಕಾಣಬಹುದು. ಆದ್ರೆ ಪಾಕಿಸ್ತಾನ ತಂಡದಲ್ಲಿ ಇಂತಹ ಪ್ರಬಲ ಆಲ್‌ರೌಂಡರ್ ಕೊರತೆಯಿದೆ ಎಂದು ಆಕಿಬ್ ಜಾವೇದ್ ಹೇಳಿದ್ದಾರೆ.

"ಅವರ ಆಲ್‌ರೌಂಡರ್‌ಗಳು ಕೂಡ ವ್ಯತ್ಯಾಸವನ್ನುಂಟು ಮಾಡುತ್ತಾರೆ, ಏಕೆಂದರೆ ಹಾರ್ದಿಕ್ ಪಾಂಡ್ಯರಂತಹ ಆಲ್‌ರೌಂಡರ್‌ ಪಾಕಿಸ್ತಾನವನ್ನು ಹೊಂದಿಲ್ಲ" ಎಂದು ಅವರು ಹೇಳಿದರು.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರೋಹಿತ್ ಶರ್ಮಾ ಟಿ20 ಸರಣಿ ಗೆಲುವಿನ ಬಳಿಕ ಅಂತಿಮ ಚುಟುಕು ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದರು. ಪರಿಣಾಮವಾಗಿ ಉಪನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದರು. ಬೌಲಿಂಗ್‌ನಲ್ಲಿ ಬದಲಾವಣೆ ಮಾಡುವುದರ ಜೊತೆಗೆ ನಾಯಕತ್ವದ ಕೌಶಲ್ಯ ಪ್ರದರ್ಶಿಸಿದ ಪಾಂಡ್ಯ, ತಂಡವನ್ನ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೂ ಮೊದಲು ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟರು.

Story first published: Sunday, August 14, 2022, 16:38 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X