ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ಗೂ ಮೊದಲು ಪಾಕ್‌ ಬ್ಯಾಟ್ಸ್ಮನ್‌ಗೆ ಸಚಿನ್ ಸಲಹೆ ಬೇಕಂತೆ!

Pakistan batsman wants Sachin Tendulkar’s advice before the tournament

ನವದೆಹಲಿ, ಏಪ್ರಿಲ್ 21: ಭಾರತ ಮತ್ತು ಪಾಕ್‌ ನಡುವೆ ರಾಜಕೀಯ ತಿಕ್ಕಾಟವಿರುವುದರ ಮಧ್ಯೆಯೂ ವಿಶ್ವಕಪ್‌ಗೂ ಮುನ್ನ ತಾನು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನೊಮ್ಮೆ ಅಪ್ಪಿ, ಅವರಿಂದ ಬ್ಯಾಟಿಂಗ್‌ ಟಿಪ್ಸ್ ಪಡೆಯಬೇಕು ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಆಟಗಾರ ಅಬಿದ್ ಅಲಿ ಹೇಳಿದ್ದಾರೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಪಾಕ್ ವಿಶ್ವಕಪ್ ತಂಡದಲ್ಲಿ ಹೊಸದಾಗಿ ಆರಿಸಲ್ಪಟ್ಟಿರುವ ಆರಂಭಿಕ ಬ್ಯಾಟ್ಸ್ಮನ್ 31ರ ಹರೆಯದ ಅಲಿ, ಪಾಕಿಸ್ತಾನ್ ದೇಸಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಕಳೆದ ತಿಂಗಳು ದುಬೈನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಅಲಿ, ಶತಕ ಬಾರಿಸಿದ್ದರು.

ಇಂಗ್ಲೆಂಡ್‌ ವಿರುದ್ಧದ ಒಡಿಐ ಸರಣಿಗೆ ಪಾಕ್‌ ತಂಡದಿಂದ ಶದಾಬ್‌ ಔಟ್‌ಇಂಗ್ಲೆಂಡ್‌ ವಿರುದ್ಧದ ಒಡಿಐ ಸರಣಿಗೆ ಪಾಕ್‌ ತಂಡದಿಂದ ಶದಾಬ್‌ ಔಟ್‌

ಭಾರತ-ಪಾಕಿಸ್ಥಾನ ದೇಶಗಳ ನಡುವೆ ಸದ್ಯಕ್ಕಂತೂ ಉತ್ತಮ ಸೌಹಾರ್ದವಿಲ್ಲ. ಹಾಗಿದ್ದೂ ಪಾಕ್ ಆಟಗಾರ ಈ ಆಸೆ ನೆರವೇರಬಲ್ಲದೆ?

ಪಾದಾರ್ಪಣೆ ಪಂದ್ಯದಲ್ಲೇ ಶತಕ

ಪಾದಾರ್ಪಣೆ ಪಂದ್ಯದಲ್ಲೇ ಶತಕ

ಮಾರ್ಚ್ 29ರಂದು ದುಬೈ ಇಂಟರ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಆಸೀಸ್-ಪಾಕ್ 4ನೇ ಏಕದಿನ ಪಂದ್ಯದಲ್ಲಿ ಅಬಿದ್ ಅಲಿ 119 ಎಸೆತಗಳಿಗೆ 112 ರನ್ ಬಾರಿಸಿದ್ದರು. ಈ ಪಂದ್ಯವನ್ನು ಆಸ್ಟ್ರೇಲಿಯಾ 6 ರನ್‌ಗಳಿಂದ ಗೆದ್ದಿತ್ತು. ಪಾದಾರ್ಪಣೆ ಪಂದ್ಯದಲ್ಲೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಅಲಿಗೆ ಪಾಕ್, ಕ್ರಿಕೆಟ್ ವಿಶ್ವಕಪ್‌ ತಂಡದಲ್ಲಿ ಸ್ಥಾನ ನೀಡಿದೆ.

ಎತ್ತರದಲ್ಲಿ ಇಬ್ಬರೂ ಸಮ

ಎತ್ತರದಲ್ಲಿ ಇಬ್ಬರೂ ಸಮ

ದೈಹಿಕವಾಗಿ ತೆಂಡೂಲ್ಕರ್ ಎತ್ತರಕ್ಕಿರುವ ಅಲಿಗೆ ಸಾಧನೆಯಲ್ಲಿ ತನಗಿಂತ ಎಷ್ಟೋಪಾಲು ಎತ್ತರಕ್ಕಿರುವ ಭಾರತದ ಕ್ರಿಕೆಟ್ ದಿಗ್ಗಜನ ಮೇಲೆ ಇನ್ನಿಲ್ಲದ ಗೌರವ-ಪ್ರೀತಿ. ಟೆಸ್ಟ್‌ನಲ್ಲಿ ಅತ್ಯಧಿಕ ರನ್ (15,921), ಏಕದಿನದಲ್ಲೂ 18,426 ರನ್, 51 ಟೆಸ್ಟ್ ಶತಕ, 49 ಏಕದಿನ ಶತಕಗಳ ದಾಖಲೆ ಹೊಂದಿರುವ ಸಚಿನ್‌ನ ಮಾತಾಡಿಸುವ ಆಸೆ ಅಲಿಗೆ.

ಮತ್ತೆ ಹಿಂದೆ ಸರಿಯಲಾರೆ

ಮತ್ತೆ ಹಿಂದೆ ಸರಿಯಲಾರೆ

'ಸಚಿನ್ ಭೇಟಿಯಾಗೋದು ನನ್ನ ಮಹದಾಸೆ. ಅದು ಈಡೇರುತ್ತದೆಯೆಂದೂ ನಂಬಿದ್ದೇನೆ. ಅವರನ್ನೊಮ್ಮೆ ಪ್ರೀತಿಯಿಂದ ಅಪ್ಪಬೇಕೆಂದಿದ್ದೇನೆ. ಎಲ್ಲಾ ಯುವ ಆಟಗಾರರು ಆ ಸಾಧಕನನ್ನು ಭೇಟಿಯಾಗುವಂತೆ ನಾನೂ ಭೇಟಿಯಾಗಬಲ್ಲೆ ಎಂಬ ವಿಶ್ವಾಸ ನನ್ನದು. ಈ ವಿಚಾರದಲ್ಲಿ ಮತ್ತೆ ಹಿಂಸರಿಯಲಾರೆ' ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಅಬಿದ್ ಹೇಳಿಕೊಂಡಿದ್ದಾರೆ.

ಅದು ಅಪೂರ್ವ ದಿನವಾಗಲಿದೆ

ಅದು ಅಪೂರ್ವ ದಿನವಾಗಲಿದೆ

'ಶ್ರೇಷ್ಠ ಬ್ಯಾಟ್ಸ್ಮನ್ ಎನಿಸಿರುವ ತೆಂಡೂಲ್ಕರ್ ಅವರನ್ನು ನಾನು ಯಾವತ್ತು ಭೇಟಿ ಮಾಡುತ್ತೇನೋ ಆದಿನ ನನ್ನ ಪಾಲಿಗೆ ಅಪೂರ್ವವೆನಿಸಲಿದೆ. ವೆಸ್ಟ್ ಇಂಡೀಸ್‌ ಕ್ರಿಕೆಟ್ ದಂತಕತೆ ವಿವಿಯನ್ ರಿಚರ್ಡ್ಸ್ ಸೇರಿದಂತೆ ಎಲ್ಲ ಕ್ರಿಕೆಟ್ ಸಾಧಕರನ್ನು ಭೇಟಿಯಾಗಿ ಅವರಿಂದ ಒಂದಷ್ಟು ಕಲಿತುಕೊಳ್ಳಬೇಕಿದೆ' ಎಂದು ಅಲಿ ವಿವರಿಸಿದರು.

Story first published: Sunday, April 21, 2019, 21:41 [IST]
Other articles published on Apr 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X