ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಟಕುಗೊಂಡ ಪಿಎಸ್‌ಎಲ್ ನವೆಂಬರ್‌ನಲ್ಲಿ ನಡೆಸಲು ಪಿಸಿಬಿ ನಿರ್ಧಾರ

Pakistan Board Likely To Stage Remaining Four Psl 2020 Matches In November

ಕೊರೊನ ವೈರಸ್‌ನ ಕಾರಣದಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸುವ ಪಾಕಿಸ್ಥಾನ್‌ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಮೊಟಕುಗೊಂಡಿತ್ತು. ಈಗ ಈ ಟೂರ್ನಿಯನ್ನು ಮುಂದಿವರಿಸಲು ಪಿಸಿಬಿ ನಿರ್ಧಾರವನ್ನು ಪಿಸಿಬಿ ಕೈಗೊಂಡಿದೆ.

ಮೊಟಕುಗೊಂಡಿದ್ದ ಈ ಕೂಟವನ್ನು ನವಂಬರ್‌ನಲ್ಲಿ ಮುಂದುವರಿಸಲು ಪಿಸಿಬಿ ನಿರ್ಧಾರವನ್ನು ಕೈಗೊಂಡಿದ್ದು ಈ ಮೂಲಕ ಬಿಸಿಸಿಐ ಮಾಡಿದ್ದ ಮನವಿಗೆ ಪಿಸಿಬಿ ಸೊಪ್ಪು ಹಾಕಿಲ್ಲ. ಐಪಿಎಲ್ ಆಯೋಜನೆಗೆ ನವೆಂಬರ್ ದಿನಾಂಕ ನಿಗದಿಪಡಿಸುವ ಸಾಧ್ಯತೆಯಿರುವ ಕಾರಣದಿಂದಾಗಿ ಬಿಸಿಸಿಐ ಮುಂದಿನ ವರ್ಷ ನಡೆಸಲು ಪಿಸಿಬಿ ಬಳಿ ಕೇಳಿಕೊಂಡಿತ್ತು.

ಪಾಕ್ ವಿರುದ್ಧ ಸೋತ ನಂತರ ಟೀಮ್ ಇಂಡಿಯಾ ಆಟಗಾರರು ಕ್ಷಮೆ ಕೇಳುತ್ತಿದ್ದರು: ಶಾಹಿದ್ ಅಫ್ರಿದಿಪಾಕ್ ವಿರುದ್ಧ ಸೋತ ನಂತರ ಟೀಮ್ ಇಂಡಿಯಾ ಆಟಗಾರರು ಕ್ಷಮೆ ಕೇಳುತ್ತಿದ್ದರು: ಶಾಹಿದ್ ಅಫ್ರಿದಿ

ಐಪಿಎಲ್‌ ಹಾಗೂ ಪಿಎಸ್‌ಎಲ್‌ ಕೂಟಗಳೆರಡರಲ್ಲೂ ಆಡುವ ಸಾಕಷ್ಟು ಆಟಗಾರರಿದ್ದಾರೆ. ಅಂತಾ ಆಟಗಾರರಗೆ ಗೊಂದಲವಾಗುತ್ತದೆ ಎಂಬುದು ಬಿಸಿಸಿಐ ವಾದ. ಹೀಗಾಗಿ ಅದು ಪಿಎಸ್‌ಎಲ್‌ ಮುಂದೂಡಿಕೆಗೆ ಸೂಚಿಸಿತ್ತು. ಬಿಸಿಸಿಐ ಮನವಿಯನ್ನು ಪಿಸಿಬಿ ತಳ್ಳಿಹಾಕಿದಂತಾಗಿದೆ.

ಪಿಎಸ್‌ಎಸ್ ಟೂರ್ನಿಯ ಅಂತಿಮ ಹಂತದ ಪಂದ್ಯಗಳು ಮಾತ್ರವೇ ನಡೆಯಲು ಬಾಕಿಯಿದೆ. ಅಂತಿಮ ನಾಲ್ಕು ಪಂದ್ಯಗಳು ಬಾಕಿ ಉಳಿದಿದ್ದು ಮುಂದಿವರಿಸುವ ಬಗ್ಗೆ ಪಿಎಸ್‌ಎಲ್ ಫ್ರಾಂಚೈಸಿಗಳ ಸಭೆಯನ್ನು ಕರೆದಿತ್ತು. ನವೆಂಬರ್ ಸಮಯ ಸೂಕ್ತ ಎಂದು ಎಲ್ಲಾ ಫ್ರಾಂಚೈಸಿಗಳು ಒಪ್ಪಿಗೆಯನ್ನು ಸೂಚಿಸಿದೆ.

ಕ್ರಿಕೆಟ್‌ ಜಗತ್ತಿನಲ್ಲಿ ನಿರ್ಮಾಣವಾಗಿರುವ ಬಲು ಅಪರೂಪದ 5 ದಾಖಲೆಗಳು!ಕ್ರಿಕೆಟ್‌ ಜಗತ್ತಿನಲ್ಲಿ ನಿರ್ಮಾಣವಾಗಿರುವ ಬಲು ಅಪರೂಪದ 5 ದಾಖಲೆಗಳು!

ಮತ್ತೊಂದೆಡೆ ಏಷ್ಯಾ ಕಪ್ ಆಯೋಜನೆ ವಿಚಾರವಾಗಿಯೂ ಎರಡು ದೇಶಗಳ ಕ್ರಿಕೆಟ್ ಮಂಡಳಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬಿಸಿಸಿಐ ಐಪಿಎಲ್ ಆಯೋಜನೆ ನಡೆಸುವ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ವಿಚಾರವಾಗಿ ಐಸಿಸಿ ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ಕಾದು ಕುಳಿತಿದೆ. ಆದರೆ ಈ ಮಧ್ಯೆ ಏಷ್ಯಾ ಕಪ್ ನಿಗದಿತ ಸಮಯದಲ್ಲೇ ಶ್ರೀಲಂಕಾದಲ್ಲಿ ನಡೆಯಲಿ ಎಂದು ಪಿಸಿಬಿ ಹಠತೊಟ್ಟಿದೆ.

Story first published: Monday, July 6, 2020, 9:55 [IST]
Other articles published on Jul 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X