ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಗೆಲ್ಲುತ್ತೆ ಎಂದ ಇಂಜಮಾಮ್‌!

ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದೆ ಗೆಲ್ಲುತ್ತಂತೆ..!
Pakistan can break their six-match losing streak in World Cup against India: Inzamam-ul-Haq

ಕರಾಚಿ, ಮೇ 26: ಐಸಿಸಿ ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ ತಂಡದ ವಿರುದ್ಧ ಅನುಭವಿಸಿರುವ ಸತತ 6 ಸೋಲಿನ ಕೊಂಡಿಯನ್ನು ಈ ಬಾರಿ ಪಾಕಿಸ್ತಾನ ಕಳಚಲಿದೆ ಎಂದು ಪಾಕ್‌ ಕ್ರಿಕೆಟ್‌ ತಂಡ ಮುಖ್ಯ ಆಯ್ಕೆದಾರ ಹಾಗೂ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌ ಭವಿಷ್ಯ ನುಡಿದಿದ್ದಾರೆ.

ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!ವಿಶ್ವಕಪ್‌ನಲ್ಲಿ ನೈಜ ಸವಾಲೇನೆಂಬುದನ್ನು ಬಾಯ್ಬಿಟ್ಟ ಟ್ರೆಂಟ್‌ ಬೌಲ್ಟ್‌!

ಮೇ 30ರಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಆರಂಭವಾಗಲಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 12ನೇ ಆವೃತ್ತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಜೂನ್‌ 6ರಂದು ಮ್ಯಾಂಚೆಸ್ಟರ್‌ನಲ್ಲಿ ಮುಖಾಮುಖಿಯಾಗಲಿದ್ದು, ಕ್ರಿಕೆಟ್‌ ಜಗತ್ತು ಈ ಹೈವೋಲ್ಟೇಜ್‌ ಪಂದ್ಯ ವೀಕ್ಷಣೆಗಾಗಿ ಕಾದು ಕುಳಿತಿದೆ.

ವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದು ವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದು

1992ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದು, ಅಂದಿನಿಂದ ಇಂದಿನವರೆಗೆ ಒಟ್ಟು 6 ಬಾರಿ ಪಾಕ್‌ ತಂಡ ಭಾರತ ಎದುರು ಸೋಲುಂಡಿದೆ. ಈ ಕುರಿತಾಗಿ ಮಾತನಾಡಿರುವ ಪಾಕ್‌ ಪಡೆಯ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌, ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸತತ ಸೋಲಿ ನ ಕೊಂಡಿಯನ್ನು ಕಳಚಲಿದೆ ಎಂದು ಹೇಳಿದ್ದಾರೆ.

ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ! ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!

"ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ಜನರು ಗಂಭೀರವಾಗಿ ಪರಿಗಣಿಸುತ್ತಾರೆ. ಕೆಲವರಂತೂ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ ಗೆದ್ರಷ್ಟ್ಏ ಸಾಕು ಎನ್ನುತ್ತಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಸೋಲಿನ ಸರಮಾಲೆಯಿಂದ ಪಾಕಿಸ್ತಾನ ತಂಡ ಹೊರಬರುತ್ತದೆ ಎಂದು ಆಶಿಸುತ್ತೇನೆ," ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ವೆಬ್‌ಸೈಟ್‌ನಲ್ಲಿ ಇಂಜಮಾಮ್‌ ಮಾತನಾಡಿದ್ದಾರೆ.

ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!

ಪಾಕಿಸ್ತಾನ ಪರ 120 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಇಂಜಮಾಮ್‌, ಇದೇ ವೇಳೆ ವಿಶ್ವಕಪ್‌ ಎಂದಾಕ್ಷಣ ಭಾರತ ವಿರುದ್ಧದ ಪಂದ್ಯ ಮಾತ್ರವಲ್ಲ ಪಾಕಿಸ್ತಾನ ತಂಡಕ್ಕೆ ಟೂರ್ನಿಯ ಎಲ್ಲಾ ತಂಡಗಳನ್ನು ಮಣಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ಅಂದಹಾಗೆ ಏಕದಿನ ಕ್ರಿಕೆಟ್‌ನಲ್ಲಿ ಸತತ 10 ಪಂದ್ಯಗಳನ್ನು ಸೋತು ಪಾಕಿಸ್ತಾನ ವಿಶ್ವಕಪ್‌ಗೆ ಕಾಲಿಟ್ಟಿದ್ದು, ಅಭ್ಯಾಸ ಪಂದ್ಯದಲ್ಲಿ ಕ್ರಿಕೆಟ್‌ ಕೂಸು ಅಫಘಾನಿಸ್ತಾನ ಎದುರೂ ಮಣ್ಣುಮುಕ್ಕಿದೆ.

Story first published: Sunday, May 26, 2019, 18:56 [IST]
Other articles published on May 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X