ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Men's ODI Cricketer Of 2022: ಸತತ 2ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಬಾಬರ್ ಅಜಂ

Pakistan Captain Babar Azam Wins ICC Mens ODI Cricketer Of 2022 Award For 2nd Consecutive Time

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರು 2022ರ ಐಸಿಸಿ ವರ್ಷದ ಪುರುಷರ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. ಪಾಕಿಸ್ತಾನ ತಂಡವನ್ನು ಅನೇಕ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಸತತ ಎರಡನೇ ವರ್ಷವೂ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಗೆದ್ದರು. ಬಾಬರ್ ಅಜಂ 2022ರಲ್ಲಿ ಮೂರು ಶತಕಗಳೊಂದಿಗೆ 9 ಪಂದ್ಯಗಳಿಂದ 84.87 ಸರಾಸರಿಯಲ್ಲಿ 679 ರನ್ ಗಳಿಸಿದ್ದರು.

ಇನ್ನು ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನೊಂದಿಗೆ ಬಲಗೈ ನಂ.1 ಬ್ಯಾಟರ್ ಆಗಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೆ 2022ರಲ್ಲಿ ಬಾಬರ್ ಅಜಂ ಇನ್ನೂ ಉತ್ತಮ ಅಂಕಗಳನ್ನು ಗಳಿಸಿದರು. ಜುಲೈ 2021ರಿಂದ ಬಾಬರ್ ಅಜಂ ಅತ್ಯುತ್ತಮ ಫಾರ್ಮ್ ಅನ್ನು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರೆಸಿದ್ದಾರೆ.

ICC Emerging Women's Cricketer: 2022ರ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗೌರವ ಪಡೆದ ರೇಣುಕಾ ಸಿಂಗ್ICC Emerging Women's Cricketer: 2022ರ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗೌರವ ಪಡೆದ ರೇಣುಕಾ ಸಿಂಗ್

ಬಾಬರ್ ಅಜಂ 2022ರಲ್ಲಿ ಕೇವಲ ಒಂಬತ್ತು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ ಎಂಬುದನ್ನು ಗಮನಿಸಬೇಕಾದ ಸಂಗತಿ. ಆದರೆ, 28 ವರ್ಷದ ಬಾಬರ್ ಅಜಂ ಮೂರು ಶತಕಗಳನ್ನು ಸಿಡಿಸಿದರು ಮತ್ತು ಐದು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಒಂದು ಪಂದ್ಯದಲ್ಲಿ ಮಾತ್ರ ವೈಫಲ್ಯ ಕಂಡಿದ್ದಾರೆ.

Pakistan Captain Babar Azam Wins ICC Mens ODI Cricketer Of 2022 Award For 2nd Consecutive Time

ಬಾಬರ್ ಅಜಂ ಕೇವಲ ವೈಯಕ್ತಿಕವಾಗಿ ಮಾತ್ರವಲ್ಲದೆ, ಪಾಕಿಸ್ತಾನ ತಂಡದ ನಾಯಕನಾಗಿಯೂ ಯಶಸ್ಸು ಕಂಡಿದ್ದಾರೆ. ತನ್ನ ನೈಪುಣ್ಯ ನಾಯಕತ್ವದಿಂದ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ ಬಾಬರ್ ಅಜಂ ವರ್ಷವಿಡೀ ಕೇವಲ ಒಂದು ಸೋಲು ಕಂಡಿದ್ದಾರೆ.

ಕಳೆದ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಏಕೈಕ ಸೋಲು ಆಸ್ಟ್ರೇಲಿಯಾ ವಿರುದ್ಧ ಲಾಹೋರ್‌ನಲ್ಲಿ ಬಂದಿತ್ತು. ಈ ಅಂಕಿಅಂಶಗಳಿಂದ ಬಾಬರ್ ಅಜಂ 2022ರಲ್ಲಿ ಐಸಿಸಿ ಪುರುಷರ ಏಕದಿನ ಕ್ರಿಕೆಟಿಗ ಆಟಗಾರ ಪ್ರಶಸ್ತಿಯನ್ನು ಗೆಲ್ಲಲು ಸುಲಭವಾದ ಆಯ್ಕೆಯಾಗಿದೆ ಎಂಬುದು ಸ್ಪಷ್ಟವಾಗಿದೆ.

ಶುಭ್ಮನ್ ಗಿಲ್‌ಗಿದೆ ಶಿಖರ್ ಧವನ್‌ರ ಈ 3 ದಾಖಲೆ ಮುರಿಯುವ ಅವಕಾಶಶುಭ್ಮನ್ ಗಿಲ್‌ಗಿದೆ ಶಿಖರ್ ಧವನ್‌ರ ಈ 3 ದಾಖಲೆ ಮುರಿಯುವ ಅವಕಾಶ

ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಯ ಆರಂಭಿಕ ಪಂದ್ಯದಲ್ಲಿ ಸೋತ ನಂತರ ಪಾಕಿಸ್ತಾನ ತಂಡಕ್ಕೆ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಪ್ರವಾಸಿ ತಂಡದ ವಿರುದ್ಧ 349 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಹಾದಿಯಲ್ಲಿ ಬಾಬರ್ ಅಜಂ ಅಗತ್ಯವಿರುವ ರನ್ ಗಳಿಸಿದರು ಮತ್ತು ನಾಲ್ಕು ವಿಕೆಟ್‌ ಮತ್ತು ಆರು ಎಸೆತಗಳು ಬಾಕಿ ಉಳಿದಿರುವಂತೆಯೇ ಜಯಿಸಿತು.

Story first published: Thursday, January 26, 2023, 13:59 [IST]
Other articles published on Jan 26, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X