ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ ವಿರುದ್ಧ ತೆಂಡೂಲ್ಕರ್ ಅದ್ಭುತ ಇನ್ನಿಂಗ್ಸ್‌ ಸ್ಮರಿಸಿದ ವಾಕರ್ ಯೂನಿಸ್

Pakistan coach Waqar Younis picks Sachin Tendulkar’s best ODI innings

ಲಾಹೋರ್: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ನ ಹೊಸ ವ್ಯಾಖ್ಯಾಗಳನ್ನು ಬರೆದವರು ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಬೌಲಿಂಗ್ ದಾಳಿ, ಪಂದ್ಯದ ಸಂದರ್ಭಗಳಿಗೆ ತಕ್ಕಂತೆ ಸಚಿನ್‌ನ ಇನ್ನಿಂಗ್ಸ್‌ನ ವೇಗ ಬದಲಾಗುತ್ತಿತ್ತು. 1990ರ ದಶಕದ ಉದ್ದಕ್ಕೂ ಸಚಿನ್‌ಗೆ ಹೋಲಿಕೆಯಾಗುವ ಬ್ಯಾಟ್ಸ್‌ಮನ್‌ಗಳು ಇರಲಿಲ್ಲ. 2000ರ ದಶಕದಲ್ಲಿ ಒಂದಿಷ್ಟು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಉದಯವಾಯಿತಾದರೂ ಸಚಿನ್ ತನ್ನದೇ ವಿಶಿಷ್ಟ ಶೈಲಿಯ ಬ್ಯಾಟಿಂಗ್‌ ಉಳಿಸಿಕೊಂಡು ಹೊಸ ಬ್ಯಾಟ್ಸ್‌ಮನ್‌ಗಳ ಜೊತೆಗೆ ಮುಂದಡಿಯಿಟ್ಟಿದ್ದರು.

'ನನಗೆ ರೋಹಿತ್ ಆದರ್ಶ, ಆತ ಮ್ಯಾಚ್ ವಿನ್ನರ್' ಎಂದ ಪಾಕ್ ಕ್ರಿಕೆಟಿಗ!'ನನಗೆ ರೋಹಿತ್ ಆದರ್ಶ, ಆತ ಮ್ಯಾಚ್ ವಿನ್ನರ್' ಎಂದ ಪಾಕ್ ಕ್ರಿಕೆಟಿಗ!

ಯಾವ ಕಾಲವಾದರೇನು? ಸಚಿನ್ ಆಡುತ್ತಿದ್ದ ದಿನಗಳಲ್ಲಿ ಅವರ ಸ್ಟ್ರೇಟ್ ಡ್ರೈವ್, ಫ್ಲಿಕ್ಸ್ ಶಾಟ್‌ ಕೈಚಳಕ, ಸ್ಕ್ವೇರ್ ಆಫ್ ದ ವಿಕೆಟ್ ಶಾಟ್‌ಗಳನ್ನು ನೋಡೋದೇ ಕಣ್ಣಿಗೆ ಹಬ್ಬವೆನಿಸುತ್ತಿತ್ತು. ಮುಖ್ಯವಾಗಿ ಪಾಕಿಸ್ತಾನ ತಂಡದಂತಕ ಪ್ರಮುಖ ತಂಡಗಳ ವಿರುದ್ಧ ಭಾರತ ಗೆಲ್ಲಿಸಲು ಸಚಿನ್ ಹೆಚ್ಚು ಕೊಸರಾಡುತ್ತಿದ್ದರು. ಇದನ್ನೇ ಪಾಕ್ ಮಾಜಿ ಕ್ರಿಕೆಟರ್, ಈಗ ಪಾಕ್ ಬೌಲಿಂಗ್ ಕೋಚ್ ಆಗಿರುವ ವಾಕರ್ ಯೂನಿಸ್ ಹೇಳಿದ್ದಾರೆ.

ಮೊದಲ ODIನಲ್ಲೇ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟಾಪ್ 5 ಭಾರತೀಯರ ಪಟ್ಟಿಯಲ್ಲಿ ನಾಲ್ವರು ಕನ್ನಡಿಗರು!ಮೊದಲ ODIನಲ್ಲೇ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟಾಪ್ 5 ಭಾರತೀಯರ ಪಟ್ಟಿಯಲ್ಲಿ ನಾಲ್ವರು ಕನ್ನಡಿಗರು!

ಪಾಕಿಸ್ತಾನ ವಿರುದ್ಧದ ಪಂದ್ಯವೊಂದರಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದ ಸಚಿನ್ ಆವತ್ತು ಟೀಮ್ ಇಂಡಿಯಾ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಈ ಪಂದ್ಯದ ಕ್ಷಣಗಳನ್ನು ವಾಕರ್ ಯೂನಿಸ್ ಸ್ಮರಿಸಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯ

ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯ

ತನ್ನ ವೃತ್ತಿ ಬದುಕಿನಲ್ಲಿ ಸಚಿನ್ ಅನೇಕ ಅಪರೂಪದ ಇನ್ನಿಂಗ್ಸ್‌ಗಳನ್ನು ಕೊಟ್ಟಿದ್ದಾರೆ. ಇದರಲ್ಲಿ 2003ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ತೆಂಡೂಲ್ಕರ್ ಬಾರಿಸಿದ್ದ 98 ರನ್‌ಗಳ ಆಟ, ಸಚಿನ್ ಆಡಿದ್ದ ಬೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಅತ್ಯುತ್ತಮ ಇನ್ನಿಂಗ್ಸ್‌ ಎಂದು ಪರಿಗಣಿಸಲ್ಪಟ್ಟಿದೆ. ಆವತ್ತು ಭಾರತದ ಮುಂದೆ ಸವಾಲಿನ ಮೊತ್ತವಿತ್ತಾದರೂ ಸಚಿನ್ ಅವರ ಚತುರ ಬ್ಯಾಟಿಂಗ್ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿತ್ತು.

ಪಾಕ್‌ ಬೌಲರ್‌ಗಳ ಬೆವರಿಳಿಸಿದ್ದ ಸಚಿನ್

ಪಾಕ್‌ ಬೌಲರ್‌ಗಳ ಬೆವರಿಳಿಸಿದ್ದ ಸಚಿನ್

ಅಂದಿನ ಪಂದ್ಯದಲ್ಲಿ ಪಾಕಿಸ್ತಾನ ವೇಗಿ ಬೌಲರ್‌ಗಳಾದ ನಾಯಕ ವಾಕರ್ ಯೂನಿಸ್, ವಾಸಿಮ್ ಅಕ್ರಮ್ ಮತ್ತು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೋಯೆಬ್ ಅಖ್ತರ್‌ಗೆ ಸಚಿನ್ ಬೆವರಿಳಿಸಿದ್ದರು. ಇದನ್ನು ನೆನಪಿಸಿಕೊಂಡಿರುವ ಯೂನಿಸ್, ಆವತ್ತು ಸಚಿನ್ ಅವರು ಅಖ್ತರ್, ಅಕ್ರಮ್ ಮತ್ತು ನನ್ನ ಮೇಲೆ ದಾಳಿ ನಡೆಸಿದ ರೀತಿ ಅದ್ಭುತವಾಗಿತ್ತು ಎಂದಿದ್ದಾರೆ.

ಸಚಿನ್ ಆಟವನ್ನು ಪದಗಳಲ್ಲಿ ವಿವರಿಸೋದು ಕಷ್ಟ

ಸಚಿನ್ ಆಟವನ್ನು ಪದಗಳಲ್ಲಿ ವಿವರಿಸೋದು ಕಷ್ಟ

'2003ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಸಚಿನ್ ಅವರ ಇನ್ನಿಂಗ್ಸ್‌ ಅನ್ನು ಪದಗಳಲ್ಲಿ ವಿವರಿಸೋದು ಬಲುಕಷ್ಟ. ಯಾಕೆಂದರೆ ಆವತ್ತು ಸಚಿನ್ ಅತ್ಯುತ್ತಮ ಆಟವಾಡಿದ್ದರು. ಮುಖ್ಯವಾಗಿ ಆ ದಿನ ಭಾರತ ಒತ್ತಡದಲ್ಲಿತ್ತು ಅಲ್ಲದೆ ನಾವೆಲ್ಲಾ ಬೌಲಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದೆವು. ಆದರೂ ಸಚಿನ್ ಉತ್ತಮ ಆಟ ಪ್ರದರ್ಶಿಸಿದ್ದರು. ಬಹುಶಃ ಸಚಿನ್ ಅವರಲ್ಲಿ ನೀವು ಈ ಬಗ್ಗೆ ಪ್ರಶ್ನಿಸಿದರೆ ಅವರೂ ಇದನ್ನೇ ಹೇಳುತ್ತಾರೆ. ಅದು ಸಚಿನ್ ಅವರ ಬೆಸ್ಟ್ ಇನ್ನಿಂಗ್ಸ್‌,' ಎಂದು ವಾಕರ್ ತನ್ನ ಟ್ವಿಟರ್ ಖಾತೆಯ ಮೂಲಕ ಸಚಿನ್‌ ಅಭಿಮಾನಿ ಸುಧೀರ್ ಕುಮಾರ್ ಚೌಧರಿ ಪ್ರಶ್ನೆಗೆ ಉತ್ತರಿಸುತ್ತ ಹೇಳಿಕೊಂಡಿದ್ದಾರೆ.

ಭಾರತಕ್ಕೆ ಭರ್ಜರಿ ಜಯ

ಭಾರತಕ್ಕೆ ಭರ್ಜರಿ ಜಯ

ಅಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ, ಸಾಯೀದ್ ಅನ್ವರ್ 101, ತೌಫೀಕ್ ಉಮರ್ 22, ಮೊಹಮ್ಮದ್ ಯೂಸುಫ್ 25, ಯೂನಿಸ್ ಖಾನ್ 32, ರಶೀದ್ ಲತೀಫ್ 29 ರನ್‌ನೊಂದಿಗೆ 50 ಓವರ್‌ಗೆ 7 ವಿಕೆಟ್ ಕಳೆದು 273 ರನ್ ಗಳಿಸಿತು. ಗುರಿ ಬೆನ್ನತ್ತಿದ ಭಾರತ, ಸಚಿನ್ 98 (75 ಎಸೆತ), ವೀರೇಂದ್ರ ಸೆಹ್ವಾಗ್ 21, ಮೊಹಮ್ಮದ್ ಕೈಫ್ 35, ರಾಹುಲ್ ದ್ರಾವಿಡ್ ಅಜೇಯ 44 (76), ಯುವರಾಜ್ ಸಿಂಗ್ ಅಜೇಯ 50 (53) ರನ್‌ನೊಂದಿಗೆ 45.4 ಓವರ್‌ಗೆ 4 ವಿಕೆಟ್‌ ನಷ್ಟದಲ್ಲಿ 276 ರನ್ ಬಾರಿಸಿ, 6 ವಿಕೆಟ್ ಗೆಲುವನ್ನಾಚರಿಸಿತ್ತು.

Story first published: Saturday, June 20, 2020, 20:32 [IST]
Other articles published on Jun 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X