ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ್ ಸೂಪರ್ ಲೀಗ್‌ನ ಉಳಿದ ಪಂದ್ಯಗಳಿಗೆ ಯುಎಇ ಆತಿಥ್ಯ ಸಾಧ್ಯತೆ

Pakistan considering UAE to host remaining PSL matches

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸುವ ಪಾಕಿಸ್ತಾನ್ ಸೂಪರ್ ಲೀಗ್‌ ಕೂಡ ಈ ಬಾರಿ ಕೊರೊನಾ ವೈರಸ್‌ನ ಹಾವಳಿಯ ಕಾರಣದಿಂದಾಗಿ ಅರ್ಧಕ್ಕೆ ಸ್ಥಗಿತವಾಗಿದ್ದು ಟೂರ್ನಿಯನ್ನು ಆಯೋಜಿಸಲು ಸೂಕ್ತ ಸಂದರ್ಭ ಹಾಗೂ ತಾಣವನ್ನು ಪಾಕ್ ಮಂಡಳಿ ಹುಡುಕುತ್ತಿದೆ. ಸದ್ಯದ ಬೆಳವಣಿಗೆಯಂತೆ ಯುಎಇನಲ್ಲಿ ಟೂರ್ನಿಯ ಉಳಿದ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯಿದೆ.

ಮಾರ್ಚ್ ತಿಂಗಳಲ್ಲಿ ಆಯೋಜನೆಯಾಗಿದ್ದ ಪಿಎಸ್‌ಎಲ್ ಟೂರ್ನಿಯಲ್ಲಿ ಆರಂಭಿಕ 14 ಪಂದ್ಯಗಳು ನಡೆದ ನಂತರ ಟೂರ್ನಿಯನ್ನು ಮುಂದೂಡಲಾಗಿತ್ತು. ಪಿಎಸ್‌ಎಲ್ ಬಯೋಬಬಲ್‌ನ ಒಳಗೆ ಏಳು ಆಟಗಾರರಿಗೆ ಕೊರೊನಾ ವೈರಸ್ ಕಾಣಿಸಿಕೊಂಡ ಕಾರಣ ಟೂರ್ನಿಯನ್ನು ಮುಂದೂಡಲಾಗಿತ್ತು.

ಐಪಿಎಲ್ ಸ್ಥಗಿತಕ್ಕೆ ಅಸಲಿ ಕಾರಣ ಮತ್ತು ಪುನಾರಂಭದ ಬಗ್ಗೆ ಗಂಗೂಲಿ ಸುಳಿವುಐಪಿಎಲ್ ಸ್ಥಗಿತಕ್ಕೆ ಅಸಲಿ ಕಾರಣ ಮತ್ತು ಪುನಾರಂಭದ ಬಗ್ಗೆ ಗಂಗೂಲಿ ಸುಳಿವು

ಕಳೆದ ತಿಂಗಳು ಪಿಎಸ್‌ಎಲ್‌ನ ಆಡಳಿತ ಮಂಡಳಿ ಜೂನ್ 1ರಿಂದ ಪಾಕಿಸ್ತಾನದ ಕರಾಚಿಯಲ್ಲಿರುವ ನ್ಯಾಶನ್ ಸ್ಟೇಡಿಯಂನಲ್ಲಿ ಉಳಿದ 20 ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಮಾಹಿತಿ ನೀಡಿತ್ತು. ಜೂನ್ 20ರಂದು ಫೈನಲ್ ಪಂದ್ಯವನ್ನು ಆಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿತ್ತು.

ಈಗ ಇದರಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಸುಳಿವು ನೀಡಿದೆ. ಪಿಸಿಬಿಯ ವಕ್ತಾರ ಮಾತನಾಡಿದ್ದು "ಕರಾಚಿಯ ಬಯೋಬಬಲ್‌ನಲ್ಲಿ ಟೂರ್ನಿಯನ್ನು ಮುಂದುವರಿಸಲು 'ನ್ಯಾಶನಲ್ ಕಮಾಂಡ್ ಮತ್ಉ ಆಪರೇಶನ್ ಸೆಂಟರ್' ಅನುಮತಿ ನೀಡಿದರೆ ಎಲ್ಲಾ ಪಂದ್ಯಗಳು ಅಲ್ಲಿಯೇ ನಡೆಯುತ್ತದೆ. ಅನುಮತಿ ದೊರೆಯದಿದ್ದರೆ ಕರಾಚಿಯಲ್ಲಿ ಆಯೋಜಿಸುವ ಪಂದ್ಯಗಳನ್ನು ತಡೆಹಿಡಿಯಲಾಗುತ್ತದೆ. ಫ್ರಾಂಚೈಸಿಗಳನ್ನು ಸಂಪರ್ಕಿಸಿ ಯುಎಇನಲ್ಲಿ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ಮೂರು ವಿಶೇಷ ಸಂಗತಿಗಳುಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ಮೂರು ವಿಶೇಷ ಸಂಗತಿಗಳು

ಇನ್ನು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಈ ಬಗ್ಗೆ ವರದಿಯನ್ನು ಮಾಡಿದ್ದು ಎಲ್ಲಾ ಆರು ಫ್ರಾಂಚೈಸಿಗಳು ಕೂಡ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ಒಲವು ಹೊಂದಿದೆ ಎಂದಿದೆ. ಸದ್ಯ ಭಾರತದ ಐಪಿಎಲ್ ಕೂಡ ಮುಂದೂಡಿಕೆಯಾಗಿದ್ದು ಯುಎಇನಲ್ಲಿಯೇ ಉಳಿದ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಗಳು ಇದೆ.

Story first published: Thursday, May 6, 2021, 23:53 [IST]
Other articles published on May 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X