ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉಮರ್ ಅಕ್ಮಲ್ ಬ್ಯಾನ್ ಕಡಿತದ ವಿರುದ್ಧ ಪಾಕ್ ಕ್ರಿಕೆಟ್ ಬೋರ್ಡ್ ಅರ್ಜಿ

Pakistan Cricket Board challenges reduction of Umar Akmal’s ban

ಕರಾಚಿ, ಆಗಸ್ಟ್ 19: ಉಮರ್ ಅಕ್ಮಲ್ ಅವರ ಮೇಲಿನ ಮೂರು ವರ್ಷಗಳ ನಿಷೇಧ ಕಡಿತಗೊಳಿಸಿರುವುದರ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸ್ವಿಟ್ಜರ್‌ಲ್ಯಾಂಡ್‌ನ ಲೌಸನ್ನೆನಲ್ಲಿರುವ ಕ್ರೀಡೆಗಾಗಿ ಮಧ್ಯಸ್ಥಿಕೆ ನ್ಯಾಯಾಲಯ (ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್‌)ದಲ್ಲಿ ಅರ್ಜಿ ಸಲ್ಲಿಸಿದೆ.

'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಬಿಸಿಸಿಐನಿಂದ ವಿದಾಯ ಪಂದ್ಯ!'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಬಿಸಿಸಿಐನಿಂದ ವಿದಾಯ ಪಂದ್ಯ!

ಅರ್ಜಿ ದಾಖಲಿಸಿರುವುದನ್ನು ಪಿಸಿಬಿ ಮುಖ್ಯ ನಿರ್ವಹಣಾಧಿಕಾರಿ ಸಲ್ಮಾನ್ ನಸೀರ್ ಖಾತರಿಪಡಿಸಿದ್ದಾರೆ. ಅಕ್ಮಲ್ ಮೇಲಿನ ನಿಷೇಧ ಕಡಿಮೆಗೊಳಿಸಿರುವ ಸ್ವತಂತ್ರ ತೀರ್ಪುದಾರರ ವಿರುದ್ಧ ಪಿಸಿಬಿ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಬೆಂಗಳೂರು ಹೋಟೆಲ್‌ನಲ್ಲಿ ಆರ್‌ಸಿಬಿ ಆಟಗಾರರ ಕ್ವಾರಂಟೈನ್ ಹೇಗಿದೆ? ವೀಡಿಯೊಬೆಂಗಳೂರು ಹೋಟೆಲ್‌ನಲ್ಲಿ ಆರ್‌ಸಿಬಿ ಆಟಗಾರರ ಕ್ವಾರಂಟೈನ್ ಹೇಗಿದೆ? ವೀಡಿಯೊ

'ಸ್ವತಂತ್ರ ತೀರ್ಪುದಾರರ ವಿರುದ್ಧ ಅರ್ಜಿ ಸಲ್ಲಿಸುವುದು ನಮಗೆ ಸವಾಲಿನ ಕೆಲಸವಾಗಿತ್ತು. ಆದರೆ ಭ್ರಷ್ಟಾಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಉಮರ್ ಅಕ್ಮಲ್‌ಗೆ ವಿಧಿಸಲಾಗಿರುವ ಶಿಕ್ಷೆ ಪ್ರಮಾಣ ಕಡಿಮೆಯಾಯಿತು ಎಂದು ನಮಗನ್ನಿಸಿತು. ಹೀಗಾಗಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡೆವು,' ಎಂದು ನಾಸಿರ್ ಹೇಳಿದ್ದಾರೆ.

'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಪಾಕ್ ಕ್ರಿಕೆಟ್ ಸಮೂಹದಿಂದ ಗೌರವ'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಪಾಕ್ ಕ್ರಿಕೆಟ್ ಸಮೂಹದಿಂದ ಗೌರವ

2020ರ ಪಿಎಸ್‌ಎಲ್ ವೇಳೆ ಬುಕ್ಕಿಗಳು ಸಂಪರ್ಕಿಸಿದ್ದನ್ನು ವರದಿ ಮಾಡುವಲ್ಲಿ ತಪ್ಪಿದ್ದಕ್ಕೆ ಉಮರ್ ಅಕ್ಮಲ್‌ಗೆ ಪಿಸಿಬಿ 3 ವರ್ಷಗಳ ನಿಷೇಧ ಹೇರಿತ್ತು. ಇದನ್ನು ಬೋರ್ಡ್‌ನ ಸ್ವತಂತ್ರ ತೀರ್ಪುದಾರರಾಗಿರುವ ಸುಪ್ರೀಮ್ ಕೋರ್ಟ್ ಮಾಜಿ ಜಡ್ಜ್ (ನಿವೃತ್ತ) ಫಕಿರ್ ಮುಹಮ್ಮದ್ ಕೋಖರ್ ಅವರು 18 ತಿಂಗಳಿಗೆ ಕಡಿತಗೊಳಿಸಿದ್ದರು.

Story first published: Thursday, August 20, 2020, 10:05 [IST]
Other articles published on Aug 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X