ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯೂನಿಸ್ ಖಾನ್ ನನ್ನ ಕುತ್ತಿಗೆಗೆ ಚೂರಿ ಹಿಡಿದಿದ್ದರು ಎಂದ ಮಾಜಿ ಕೋಚ್: ತುಟಿಬಿಚ್ಚದ ಮಂಡಳಿ

Pakistan Cricket Board Decline Comment on Grant Flowers Charge Against Younis Khan

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ ಬಗ್ಗೆ ಮಾಜಿ ಕೋಚ್ ಗ್ರ್ಯಾಂಟ್ ಫ್ಲವರ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಯೂನಿಸ್‌ ಖಾನ್‌ ತನ್ನ ಗಂಟಲಿಗೆ ಚೂರಿ ಹಿಡಿದು ಬೆದರಿಸಿದ್ದರು ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಗ್ರ್ಯಾಂಟ್‌ ಫ್ಲವರ್‌ 2014-2019ರ ಅವಧಿಯಲ್ಲಿ ಪಾಕಿಸ್ಥಾನ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ಕರ್ತವ್ಯ ನಿಭಾಯಿಸಿದ್ದರು.

ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕೋಚ್ ಮಾಡಿದ್ದ ಈ ಆರೋಪಕ್ಕೆ ಮ್ಯಾನೇಜ್‌ಮೆಂಟ್ ಅಧಿಕೃತವಾಗಿ ಪ್ರತಿಕ್ರಿಯಿಸಲು ಬಯಸಿಲ್ಲ. ಆದರೆ ಈ ವಿಚಾರವಾಗಿ ಆ ಘಟನೆಯ ಬಗ್ಗೆ ಚೆನ್ನಾಗಿ ಬಲ್ಲ ವ್ಯಕ್ತಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡಿದ್ದು ಈ ಆರೋಪಕ್ಕೆ ಟ್ವಿಸ್ಟ್ ನೀಡಿದ್ದಾರೆ. ಯೂನಿಸ್‌ ಖಾನ್‌ ಅವರಿಂದಲೂ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರೀಗ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಪಾಕಿಸ್ಥಾನ ತಂಡದ ಬ್ಯಾಟಿಂಗ್‌ ಕೋಚ್‌ ಆಗಿದ್ದಾರೆ.

ಕೃನಾಲ್‌ಗೆ ಚಾಲೆಂಜ್ ಮಾಡಿದ್ದ ಹಾರ್ದಿಕ್‌ಗೆ ಸವಾಲೆಸೆದ ಕೊಹ್ಲಿ: ವೀಡಿಯೊಕೃನಾಲ್‌ಗೆ ಚಾಲೆಂಜ್ ಮಾಡಿದ್ದ ಹಾರ್ದಿಕ್‌ಗೆ ಸವಾಲೆಸೆದ ಕೊಹ್ಲಿ: ವೀಡಿಯೊ

ಗ್ರ್ಯಾಂಟ್ ಫ್ಲವರ್ ಹೇಳಿದ್ದೇನು?

ಗ್ರ್ಯಾಂಟ್ ಫ್ಲವರ್ ಹೇಳಿದ್ದೇನು?

ಅಂದಿನ ಟೆಸ್ಟ್‌ ಪಂದ್ಯದ ಬ್ರೇಕ್‌ ಒಂದರ ವೇಳೆ ನಾನು ಯೂನಿಸ್‌ಗೆ ಕೆಲವು ಬ್ಯಾಟಿಂಗ್‌ ಟಿಪ್ಸ್‌ ನೀಡಲು ಮುಂದಾಗಿದ್ದೆ. ಆದರೆ ಅವರು ಇದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೂಡಲೇ ಚೂರಿಯೊಂದನ್ನು ತಂದು ನನ್ನ ಗಂಟಲಿಗೆ ಹಿಡಿದರು. ನನಗೆ ಏನಾಗುತ್ತದೆಂದೇ ತಿಳಿಯಲಿಲ್ಲ. ಪಕ್ಕದಲ್ಲೇ ಕುಳಿತ್ತಿದ್ದ ಮಿಕ್ಕಿ ಆರ್ಥರ್‌ ಬಂದು ತಡೆದರು...' ಎಂದು ಅಂದಿನ ವಿಲಕ್ಷಣ ಘಟನೆ ಕುರಿತು ಗ್ರ್ಯಾಂಟ್‌ ಫ್ಲವರ್‌ ಹೇಳಿದರು.

ಟ್ವಿಸ್ಟ್ ನೀಡಿದ ಬಲ್ಲ ಮೂಲದ ಹೇಳಿಕೆ

ಟ್ವಿಸ್ಟ್ ನೀಡಿದ ಬಲ್ಲ ಮೂಲದ ಹೇಳಿಕೆ

ಈ ಆರೋಪದ ಬಗ್ಗೆ ಪಾಖಿಸ್ತಾನ ಕ್ರಿಕೆಟ್ ಮಂಡಳಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಆದರೆ ಘಟನೆಯ ಬಗ್ಗೆ ಮಾಹಿತಿಯಿರುವ ವ್ಯಕ್ತಿಯೊಬ್ಬರು ಈ ಘಟನೆಯನ್ನು ಬೇರೆಯದ್ದೇ ಕೋನದಲ್ಲಿ ವ್ಯಾಖ್ಯಾನಿಸಿದ್ದಾರೆ. ಪಿಟಿಐಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಆ ವ್ಯಕ್ರಿ ಅದೊಂದು ಗಂಭೀರ ಘಟನೆಯೇ ಆಗಿರಲಿಲ್ಲ ಎಂದು ಹೇಳಿದ್ದಾರೆ.

ಗ್ರಾಂಟ್ ಫ್ಲವರ್‌ ಹೇಳಿಕೆ ಪೂರ್ಣ ನಿಜವಲ್ಲದ

ಗ್ರಾಂಟ್ ಫ್ಲವರ್‌ ಹೇಳಿಕೆ ಪೂರ್ಣ ನಿಜವಲ್ಲದ

ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ಆ ವ್ಯಕ್ತಿ ಅಂದು ಆ ಘಟನೆ ಗಂಭೀರವಾಗಿ ನಡೆದಿರಲಿಲ್ಲ. ಹಾಸ್ಯದ ಸನ್ನಿವೇಶದಲ್ಲಿ ನಡೆದ ಘಟನೆಯದು. ಯೂನಿಸ್ ತಮಾಷೆಯಾಗಿ ಬೆಣ್ಣೆ ಹಚ್ಚುವ ಚೂರಿಯನ್ನು ಹಿಡಿದು ಗಾಳಿಯಲ್ಲಿ ತಿರುಗಿಸುತ್ತಾ 'ಉಪಹಾರದ ಟೇಬಲ್‌ನಲ್ಲಿ ಉಪಹಾರ ಸೇವಿಸುವಾಗ ಸಲಹೆಯನ್ನು ನೀಡದೆ ಉಪಹಾರ ಸೇವಿಸಲು ಬಿಡಬೇಕು' ಎಂದು ಹೇಳಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.

2016ರಲ್ಲಿ ನಡೆದಿದ್ದ ಘಟನೆ

2016ರಲ್ಲಿ ನಡೆದಿದ್ದ ಘಟನೆ

ಈ ಘಟನೆ 2016ರ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ವೇಳೆ ನಡೆದದೆ ಎನ್ನಲಾಗ್ತಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಯೂನಿಸ್‌ ಖಾನ್‌ ಸೊನ್ನೆಗೆ ಔಟಾಗಿದ್ದರು. ಈ ಸಂದರ್ಭದಲ್ಲಿ ಗ್ರ್ಯಾಂಟ್‌ ಫ್ಲವರ್‌ ಪಾಕ್‌ ಬ್ಯಾಟ್ಸ್‌ಮನ್‌ಗೆ ಟಿಪ್ಸ್‌ ನೀಡಲು ಮುಂದಾಗಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಯೂನಿಸ್‌ ಖಾನ್‌ 65 ರನ್‌ ಹೊಡೆದರೆ, ಸಿಡ್ನಿಯ ಅಂತಿಮ ಟೆಸ್ಟ್‌ನಲ್ಲಿ ಅಜೇಯ 175 ರನ್‌ ಸಿಡಿಸಿದರು.

Story first published: Friday, July 3, 2020, 15:30 [IST]
Other articles published on Jul 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X