ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತಕ್ಕೆ ಟಿ20 ವಿಶ್ವಕಪ್ ಸ್ಥಳಾಂತರದ ಬೆದರಿಕೆಯೊಡ್ಡಿದ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ

Pakistan Cricket chairman warns BCCI, ‘will push for T20 World Cup’s relocation to UAE

ಭಾರತದಲ್ಲಿ ಈ ಬಾರಿ ಟಿ20 ವಿಶ್ವಕಪ್ ಆಯೋಜನೆಯಾಗಲಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಟೂರ್ನಿಯ ಆಯೋಜನೆಯ ಬಗ್ಗೆ ಅಪಸ್ವರ ಎತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರತ ವೀಸಾ ನೀಡುವ ಕುರಿತಾಗಿ ಲಿಖಿತ ಭರವಸೆಯನ್ನು ನೀಡದಿದ್ದಲ್ಲಿ ಟೂರ್ನಿಯನ್ನು ಸ್ಥಳಾಂತರ ಮಾಡಲು ಮನವಿಯನ್ನು ಸಲ್ಲಿಸಲಾಗುತ್ತದೆ ಎಂದು ಪಾಕ್ ಕ್ರಿಕೆಟ್ ಬೋರ್ಡ್‌ನ ಮುಖ್ಯಸ್ಥ ಹೇಳಿಕೊಂಡಿದ್ದಾರೆ.

"ನಮ್ಮ ಸರ್ಕಾರ ಭಾರತದಲ್ಲಿ ಕ್ರಿಕೆಟ್ ಆಡಬಾರದು ಎಂಬುದನ್ನು ಸೂಚಿಸಿಲ್ಲ. ಐಸಿಸಿಯ ನಿರ್ಧಾರಕ್ಕೆ ನಾವು ಒಪ್ಪಿದ್ದೇವೆ. ನಾವು ಅದನ್ನು ವಿರೋಧಿಸಲು ಸಾಧ್ಯವಿಲ್ಲ. ಐಸಿಸಿ ಮಟ್ಟದಲ್ಲಿ ನಾನು ಸ್ಪಷ್ಟವಾಗಿ ಹೇಳಿರುವುದೇನೆಂದರೆ ನಾವು ಭಾರತೀಯ ಸರ್ಕಾರದಿಂದ ವೀಸಾ ನೀಡುವ ಬಗ್ಗೆ ಲಿಖಿತ ಒಪ್ಪಿಗೆಯನ್ನು ಬಯಸುತ್ತೇವೆ".

ವಿಜಯ್ ಹಜಾರೆ: ಒಡಿಶಾ ವಿರುದ್ಧ ರಾಬಿನ್ ಉತ್ತಪ್ಪ ಸ್ಫೋಟಕ ಶತಕವಿಜಯ್ ಹಜಾರೆ: ಒಡಿಶಾ ವಿರುದ್ಧ ರಾಬಿನ್ ಉತ್ತಪ್ಪ ಸ್ಫೋಟಕ ಶತಕ

ಆಟಗಾರರಿಗೆ ಮಾತ್ರ ವೀಸಾ ಸಾಲಲ್ಲ

ಆಟಗಾರರಿಗೆ ಮಾತ್ರ ವೀಸಾ ಸಾಲಲ್ಲ

"ಈ ವೀಸಾ ಕೇವಲ ತಂಡದ ಆಟಗಾರರಿಗೆ ಮತ್ತು ಸ್ಕ್ವಾಡ್‌ಗೆ ಮಾತ್ರವಲ್ಲ. ನಾವು ನಮ್ಮ ಅಭಿಮಾನಿಗಳಿಗೆ ಪತ್ರಕರ್ತರಿಗೆ ಹಾಗೂ ಮಂಡಳಿಯ ಸಿಬ್ಬಂದಿಗಳಿಗೂ ವೀಸಾ ಅಗತ್ಯವಿದೆ. ಇದು ಐಸಿಸಿಯ ಆಯೋಜನಾ ಒಪ್ಪಂದದಲ್ಲಿ ಇದೆ. ಹಾಗಾಗಿ ನಾವು ನಮ್ಮ ಬೇಡಿಕೆಯನ್ನು ಸಲ್ಲಿಸುತ್ತೇವೆ" ಎಂದು ಪಿಸಿಬಿ ಮುಖ್ಯಸ್ಥ ಇಹ್ಸಾನ್ ಮನಿ ಹೇಳಿದ್ದಾರೆ.

ಮಾರ್ಚ್ ಅಂತ್ಯಕ್ಕೆ ಸ್ಪಷ್ಟನೆ ದೊರೆಯಬೇಕು

ಮಾರ್ಚ್ ಅಂತ್ಯಕ್ಕೆ ಸ್ಪಷ್ಟನೆ ದೊರೆಯಬೇಕು

"ಈ ಬಗ್ಗೆ ಐಸಿಸಿ ಕೂಡ ನಿರ್ಲಕ್ಷ್ಯವನ್ನು ವಹಿಸಿದೆ. ಅವರು ಹೇಳಿದಂತೆ ಇವೆಲ್ಲವೂ ಡಿಸೆಂಬರ್ 31 2020ರ ವೇಳೆಗೆ ನಡೆಯಬೇಕಾಗಿತ್ತು. ಆದರೆ ಅದು ಆಗಿಲ್ಲ. ಹೀಗಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ನಾನು ನೇರವಾಗಿ ಐಸಿಸಿ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ್ದೇನೆ. ಬಳಿಕ ಐಸಿಸಿ ಮ್ಯಾನೇಜ್‌ಮೆಂಟ್ ಜೊತೆಯೂ ಮಾತುಕತೆ ನಡೆಸಿದ್ದು ಈ ಬಗ್ಗೆ ಸ್ಪಷ್ಟ ನಿರ್ಧಾರ ಮಾರ್ಚ್‌ ಅಂತ್ಯದ ಒಳಗೆ ದೊರೆಯಬೇಕೆಂದು ಕೇಳಿದ್ದೇನೆ" ಎಂದಿದ್ದಾರೆ ಇಹ್ಸಾನ್ ಮನಿ.

ಇಲ್ಲವಾದರೆ ಯುಎಇನಲ್ಲಿ ವಿಶ್ವಕಪ್ ಆಯೋಜನೆಯಾಗಲಿ

ಇಲ್ಲವಾದರೆ ಯುಎಇನಲ್ಲಿ ವಿಶ್ವಕಪ್ ಆಯೋಜನೆಯಾಗಲಿ

"ಅವರು ಮಾರ್ಚ್ ಅಂತ್ಯದ ಮುನ್ನ ಎಂಬ ಭರವಸೆಯನ್ನು ನೀಡಿದ್ದಾರೆ. ಅದರೆ ಅದು ಸಾಧ್ಯವಾಗದಿದ್ದರೆ ಭಾರತದಲ್ಲಿ ನಡೆಯಬೇಕಾದ ಟೂರ್ನಿ ಯುಎಇನಲ್ಲಿ ನಡೆಯಲಿ ಎಂದು ನಾನು ಬೇಡಿಕೆಯನ್ನು ಮುಂದಿಡುತ್ತೇನೆ. ಐಸಿಸಿ ಬಳಿ ಪರ್ಯಾಯ ಯೋಜನೆಗಳು ಇರುತ್ತವೆ. ಭಾರತದಲ್ಲಿ ಆಯೋಜನೆ ಸಾಧ್ಯವಾಗದಿದ್ದರೆ ಅದು ಪರ್ಯಾಯ ಸ್ಥಳದಲ್ಲಿ ಆಯೋಜನೆಯಾಗುತ್ತದೆ" ಎಂದು ಇಹ್ಸಾನ್ ಮನಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ

Story first published: Monday, February 22, 2021, 8:01 [IST]
Other articles published on Feb 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X